ಕಿರಿದು
ಅವಿರತ ಸಾಧನೆ ಬೇಕಲೋ ತಮ್ಮಾ
ನೀ ಮಾಡಿದ್ದು ತುಂಬಾ ಕಿರಿದು..
ಬಾಳಿಗೆ ಬೇಕದೋ ಸಾಧನೆ ಹಿರಿದು
ಬಾಳಲಿ ಸಹಾಯದ ಬಾಳದು ನಲಿದು....
ತಾನು ತನ್ನದು ಎನ್ನಲು ಏನಿದೆ
ಜಗದೊಡೆಯನು ತಾನೇ ಗುರುವು?
ನೀನು ನಿನ್ನದು ಎನ್ನಲು ಬೇಕು
ನಮ್ಮಯ ಸಾಧನೆ ಜಗದಿ ಬಲವು...
ಹೃನ್ಮನ ಪಾವನಗೊಳಿಸಲು ಮನವು
ಕೆಲಸ ಕಾರ್ಯದಲಿ ಮಗ್ನತೆಯಿರಲಿ..
ಮೇಲಕೆ ಹತ್ತಲು ಏಣಿಯ ಜೊತೆಗೆ
ಹೃದಯವು ವಿಶಾಲವಾಗಿರಲಿ..
ನಮ್ಮದು ನಿಮ್ಮದು ಸಾಧನೆಯೆನಲು
ನಲುಮೆಯ ಕಾರ್ಯವು ಬೆಳಗಲಿ
ಅವಿರತ ಸಾಗಲಿ ಬದುಕಿನ ಕಾರ್ಯವು
ಸಮಾಜ ಸೇವೆಯು ಬೆಳಗಲಿ..
@ಪ್ರೇಮ್@
02.05.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ