ವಚನ-16
ನಾ ನಡೆವ ದಾರಿಯಲಿ
ಕಲ್ಲು ಮುಳ್ಳು ತಾಗಿ ಎಡವದಿರಲಿ
ಎನುವ ಮಾನವ ತಾನು
ಇತರರ ದಾರಿಗೂ
ಕಲ್ಲು ಹಾಕುವುದ ಬಿಡಬೇಕಲ್ಲವೇ?
ತಾ ಮಾತ್ರವೆ ಮನುಜನು,
ಇತರರ ದಾರಿ ಏನಾದರಾಗಲಿ
ಎಂದು ಬಗೆವವನ ದಾರಿ ನೇರವಾಗಿ
ಚೆನ್ನಾಗಿರಲು ಅದು ಹೇಗೆ ಸಾಧ್ಯ
ಅದ ನೀನೆಂದಾದರೂ ಒಪ್ಪುವೆಯಾ ಶಿವಾ?
@ಪ್ರೇಮ್@
04.05.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ