ಶುಕ್ರವಾರ, ಮಾರ್ಚ್ 30, 2018

226. ಭಾವಗೀತೆ-ಅರಿಕೆ

ಭಾವಗೀತೆ
ಅರಿಕೆ

ದಿನಕರನೆ ನಿನ್ನ ಉರಿಯ ಕಡಿಮೆಮಾಡೊ
ನಾ ತಾಪ ತಾಳಲಾರೆ ಶಕ್ತಿ ನೀಡೊ..
ನಮಸ್ಕರಿಸುತಿರುವೆ ದೇವ ನೀನೇ ಕಾಪಾಡೊ
ಬೆಂಕಿಯಲ್ಲಿ ಬೇಯಲಾರೆ ಮಳೆಯ ತಾರೊ//

ರವಿಚಂದಿರ ಒಟ್ಟಾಗಿ ಬೆಳಕ ತರುವಿರಿ
ನನ್ನ ಮನವ ಅರಿತುಕೊಂಡು ನೀವು ಬರುವಿರಿ
ಆದರೇನೊ ಬದುಕು ಅಂಧಕಾರದಲ್ಲಿ ಮುಳುಗಿದೆ
ನೀವೆ ನನ್ನ ಬೆಳಗಬೇಕು ದಾರಿ ಕಾಣದಾಗಿದೆ//

ಬಿಸಿಲು ಏರಿ ಮಳೆಯು ಇರದೆ
ತಬ್ಬಾಗಿಹೆ ತಂಗಾಳಿ ಇತ್ತ ಬರದೆ
ಆದಿತ್ಯ ನೀನೆ ಬಲವು ಈ ಧರೆಗೆ
ಬರವು ನೀನಿಲ್ಲದೆ ಎಂದೂ ನನಗೆ//

ತಿರೆಯ ಬೇಡಿಕೆ ಅರಿತುಕೊಳ್ಳೊ
ನನ್ನೆದೆಗೆ ತಂಪ ತಂಗಾಳಿ ತಳ್ಳೊ
ಜಗದ ಎಲ್ಲ  ಜೀವದಾಗರ ನೀನೆ
ನನ್ನ ಜೀವ ರಕ್ಷಕ ನೀನೆ ತಾನೇ//

ಬರದ ಬೇಗೆ ತಾಳಲಾರೆ
ಮನಕೆ ಮುದವ ನೀಡಲಾರೆ
ನನ್ನೆದೆಗೆ ತಂಪ ಹರಿಸಬೇಕು
ಈ ಧರಣಿಯ ನೀನೆ ಕಾಯಬೇಕು//
@ಪ್ರೇಮ್@

226. ಭಾವಗೀತೆ-ಕರೆ

ಭಾವಗೀತೆ-ಕರೆ

ನನ್ನ ಎದೆಗೆ ಪ್ಲಾಸ್ಟಿಕನ್ನು
ಎಸೆಯಬೇಡಿ ಜನರುಗಳೇ..
ನನ್ನ ಕೊಳವೆ ಬಾವಿ ತೋಡಿ
ಕೊರೆಯದಿರಿ ಮಕ್ಕಳೇ..

ನೀರು ಮರವು ಪ್ರಾಣಿ ಪಕ್ಷಿ
ನಿಮಗೆ ತಾನೇ ಬೇಕಿದೆ?
ನನ್ನ ಮೇಲೆ ಬೆಳೆದ ಫಲವು
ತಮಗೆ ತಾನೆ ಬದುಕಿಗೆ...

ಅನ್ನ ನೀರು ಗಾಳಿ  ಮಣ್ಣ
ನೀವೆ ವಿಷವ ತುಂಬಿಸಿ
ತನ್ನ ಆರೋಗ್ಯವ ತಾನೆ ಕೆಡಿಸಿ
ಬಳಲಿ ಬೆಂಡಾದಿರಿ...

ಮಾತೆ ಚರಣ ಕಮಲದಲ್ಲಿ
ಗಿಡ ಮರವ ಬೆಳೆಸಿರಿ
ಶುದ್ಧ ಗಾಳಿ ಶುದ್ಧ ನೀರು
ಪಡೆದು ಚಂದದಿ ಬದುಕಿರಿ..
@ಪ್ರೇಮ್@

225. ವಿಮರ್ಶೆಗಳು

[3/19, 4:10 PM] Wr Yathish Kamaje: *ಪ್ರೇಮ್ ರವರ ಗಜಲ್*

👉ನಿಯಮದಂತಿಲ್ಲ
👉ರದೀಫ್ ಇದೆ ಕಾಫಿಯ ಇಲ್ಲ
ಪ್ರಯತ್ನ ಚೆನ್ನಾಗಿ ಇದೆ
ಪ್ರಯತ್ನಿಸಿ ಗಜಲ್ ನಿಯಮ ತಿಳಿದುಕೊಳ್ಳಿ.ಶುಭವಾಗಲಿ

✍ಯತೀಶ್ ಕಾಮಾಜೆ
[3/20, 3:04 PM] ‪+91 99640 28117‬: ಪ್ರೇಮ್ ಸರ್ ಗಜ಼ಲ್,

ಸೂಪರ್ ಇದೆ ಸರ್...

ಸೊಗಸಾಗಿ ರಚನೆಗೊಂಡ ಗಜ಼ಲ್. ಚೆಂದ ಇದೆ.

👌👌👌👍👍👍💐💐
[3/21, 10:30 AM] Wr Yathish Kamaje: *ಪ್ರೇಮ್ ರ ಗಜಲ್ ಸುಂದರವಾಗಿದೆ*

👉ಒಂದು ತಪ್ಪನ್ನ ನೀವು ನೋಡದೆ ಗಜಲ್ ತಪ್ಪಾಗಿ ಹೋಯ್ತ ಅನಿಸುತ್ತದೆ

👉ಮೂರನೇ ಷೇರನ್ನು ನೋಡಿ
*ಮಧುಚಂದ್ರದಾಚರಣೆ ನನ್ನ* ಎಂದು ಇದೆ

👉ನಿಮ್ಮ ಗಜಲ್ ನಲ್ಲಿ *ದು* ರವಿ ಆಗಿದೆ ಆದರೆ ಮೂರನೇ ಷೇರ್ ನಲ್ಲಿ ಇಲ್ಲ
*ಮಧುಚಂದ್ರದಾಚರಣೆ ನಡೆಸುವುದು* ಎಂದರೆ ಸರಿ ಆಗುತ್ತಿತ್ತು ಗಮನಿಸಿ

ಶುಭವಾಗಲಿ

✍ಯತೀಶ್ ಕಾಮಾಜೆ
[3/21, 5:53 PM] ‪+91 98446 38300‬: ಪ್ರೇಮ್ ಅವರು ತಮ್ಮ ಗಜಲ್ನಲ್ಲಿ ಪ್ರೇಮಿಗಾಗಿ ಪ್ರಕೃತಿಯ ವಿಸ್ಮಯಗಳನ್ನು ತಂದಿಡುವಂತಹ ಕನಸು ಕನಸಿನ ಹಂದರ ಚೆನ್ನಾಗಿ ಮೂಡಿ ಬಂದಿದೆ .
[3/21, 6:08 PM] ‪+91 88844 08950‬: ಪ್ರೇಮ್ ಅವರೇ ನಿಮ್ಮ ಗಜ಼ಲ್ ಚಂದ
[3/22, 10:45 AM] Wr Yathish Kamaje: *ಪ್ರೇಮ್ ರ ಗಜಲ್*

👉ಒಂದು ತಪ್ಪು ಇದೆ ನಿಮ್ಮ ಕಣ್ತಾಪ್ಪಿಂದಲು ಆಗಿರಬಹುದು

👉ಮತ್ಲ ಒಮ್ಮೆ ಗಮನಿಸಿ

👉 *ನೀ ಬಂದೆ ಬಿರುಗಾಳಿಯೆದ್ದ ಬಾಳಲಿ ಮೊಡವಾಗಿ ಗೆಳೆಯ*
ಎಂದು ಇದೆ
ನಿಮ್ಮ ಗಜಲ್ ನ ಬಾಕಿ ಷೇರ್ ಗಮನಿಸಿದರೆ *ದೆ* ರವಿ ಆಗಿದೆ ಅದು ಇಲ್ಲಿ ಬಿಟ್ಟು ಹೋಗಿದೆ

*ನೀ ಬಿರುಗಾಳಿಯೆದ್ದ ಬಾಳಲಿ ಮೊಡವಾಗಿ ಬಂದೆ ಗೆಳೆಯ* ಎಂದರೆ ಸರಿ ಆಗುತ್ತಿತ್ತು ಗಮನಿಸಿ

ಉತ್ತಮ ಪ್ರಯತ್ನ👍

✍ಯತೀಶ್ ಕಾಮಾಜೆ
[3/23, 3:11 PM] Wr Yathish Kamaje: *ಪ್ರೇಮ್ ರವರ  ಗಜಲ್*

👉ನಿಯಮದಂತೆ ಇಲ್ಲ

👉ರದೀಫ್ *ನಾ ನೋಡಬಹುದಿತ್ತು* ಆಗಿರುತ್ತದೆ

👉ಕಾಫಿಯ ಇಲ್ಲ

ಪ್ರಯತ್ನಿಸಿ ಶುಭವಾಗಲಿ

✍ಯತೀಶ್ ಕಾಮಾಜೆ
[3/23, 4:27 PM] ‪+91 88844 08950‬: ಪ್ರೇಮ್ ಅವರ ಕರುನಾಡ ವೈಭವ ಬಿಂಬಿಸುವ ಗಜ಼ಲ್ ಸೂಪರ್
[3/24, 8:01 AM] ‪+91 78295 22364‬: ಪ್ರೇಮ್ ಗುರುಗಳೇ ನಿಮ್ಮ ಗಜಲ್ನಲ್ಲಿ ಇಡೀ ಪ್ರಕೃತಿಯನ್ನು ಮತ್ತು ಪ್ರಕೃತಿಯ ವಿನಾಶದ ಬಗ್ಗೆ ಸುಂದರವಾಗಿ ತಿಳಿಸಿದ್ದಿರಿ ಒಳ್ಳೆಯ ಬೆಳವಣಿಗೆ ನಿಮಗೆ ಶುಭವಾಗಲಿ
[3/24, 8:18 AM] ‪+91 97384 82040‬: ಪ್ರೇಮ ಸರ್ ನಿಮ್ಮ ಗಜಲ್ ಒಂದು ಒಳ್ಳೆಯ ಸಂದೇಶವನ್ನು ಕೊಡುತ್ತೆ 🙏

ಭೂಮಿ ಎಲ್ಲ ಸಸ್ಯ ಪ್ರಾಣಿ ಮನುಜ ಕುಲದ ತಾಯಿ ಅವಳನು ನಾವು ಹಾಳು ಮಾಡುತ್ತಿರುವುದು , ಗೊತ್ತು ಗೊತ್ತಿಲ್ಲದೆಯೋ ಆದರೆ ಅವಳ ಮಡಿಲನು ನಾಶ ಮಾಡುತ್ತಿದ್ದೇವೆ ,

ಒಂದು ಕಡೆ ಮೋದಿ ಸ್ವಚಟಾ ಅಭಿಯಾನ ನಡೆಸುತ್ತಿದ್ದಾರೆ ಇನ್ನೊಂದು ಕಡೆ ಜನಗಳು ಸ್ವಚತೆಯನು ಕಾಪಾಡಿಕೊಳ್ಳಲು ಆಗುತ್ತಿಲ್ಲ ,

ಪ್ಲಾಸ್ಟಿಕ್ ಇದೊಂದು ಮಾರಕವೇ ಅದು ಭೂಮಿಯಲ್ಲಿ ಕರಗುವುದಿಲ್ಲ , ಹಾಗೆ ಉಳಿದು ಕೊಳ್ಳುತೆ , ಸುಮಾರು ಟನಗಳಷ್ಟು ಉಳಿದಿದೆ, ಹಸು ಪ್ರಾಣಿಗಳ ದೇಹ ಸೇರಿ ವಿಷ ವಾಗುತಿವೆ , ಅದರ ಬಗ್ಗೆ ಜನರಿಗೆ ಅರೇವೆಯಿಲ್ಲ.

ಇನ್ನೊಂದು ಕಡೆ ವಾಯು ಮಾಲಿನ್ಯ ಜಲ ಮಾಲಿನ್ಯ ಪರಿಸರ ಮಾಲಿನ್ಯ ಇವೆಲ್ಲವೂ ಭೂಮಿತಾಯಿ ಗೆ ಕಂಟಕ ಮತ್ತು ಸಂಕಟ ತರುತಿವೆ , ಭೂಮಿ ಬರುಡು ಆಗುತ್ತಿದೆ ,  ಇದಕ್ಕೆ ಕಾರಣ ಜನಗಳಿಗೆ ಜ್ಞಾನ ತಿಳುವಳಿಕೆ ಕಡಿಮೆ , ಅವರಿಗೆ ನಾವುಗಳು ತಿಳಿಹೇಳಬೇಕು , ಕಥೆ ಬೀದಿ ನಾಟಕ ಇತ್ಯಾದಿ ರೀತಿಯಲಿ ಮನ ಮುಟ್ಟು ವಂತೆ ಹೇಳಿದರೆ ಪರಿಸರ ಮಾಲಿನ್ಯವನ್ನು ನಿಲ್ಲಿಸಬಹುದು , ಅದಕ್ಕೆ ನಾವೆಲ್ಲರೂ ಪ್ರಾಮಣ ಮಾಡಲೇಬೇಕು,

ಧನ್ಯವಾದಗಳು ಒಂದೊಳ್ಳೆ ಗಜಲ್ ಓದಿಸಿದ್ದಕೆ 🙏😊

✍ ನಿನೀ (ನಿತೀನ ನೀಲಕಂಠೆ)
[3/24, 12:48 PM] ‪+91 99728 31648‬: *ಪ್ರೇಮ್ ಸರ್ ಅವರ ಗಜ಼ಲ್ ತುಂಬಾ ಚೆನ್ನಾಗಿ ಮೂಡಿದೆ* 👌 *ಉತ್ತಮ ಸಂದೇಶವಿರು ಗಜ಼ಲ್ ನಿಜ ನಮ್ಮ ಪರಿಸರವನ್ನು ಪ್ಲಾಸ್ಟಿಕ್ ರಹಿತವಾಗಿ ಮಾಡಬೇಕು, ಎಲ್ಲೆಂದರಲ್ಲಿ ಕಸ ಎಸೆದು ಗಲೀಜು ಮಾಡಬಾರದು, ಪ್ರಕೃತಿಯ ಸೌಂದರ್ಯ ಸವಿದು ಅದಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಅದನ್ನು ಉಳಿಸಿ ಬೆಳೆಸಬೇಕು, ಕಾಲಕಾಲಕ್ಕೆ ಮಳೆ ಬರಲು ಮುಖ್ಯ ವಾಗಿ ಪರಿಸರದ ಸಂರಕ್ಷಣೆ ಮಾಡಲೇ ಬೇಕು , ಪ್ರಕೃತಿಯ ರಕ್ಷಣೆಯ ಬಗ್ಗೆ ಪ್ರತಿಯೊಬ್ಬರಿಗೂ ಅದರ ಅರಿವು ಮೂಡಿಸಬೇಕು, ನಮ್ಮ  ದೇಶದ ರಕ್ಷಣೆ ನಮ್ಮೆಲ್ಲರ ಕರ್ತವ್ಯ ನಾವೆಲ್ಲ ಅದಕ್ಕೆ ಪ್ರೀತಿಯಿಂದ ಮಾಡಿ ಪರಿಸರ ಉಳಿಸುವುದ ತಿಳಿಸಬೇಕು ಎಲ್ಲರಿಗೂ ಸುಂದರ ಗಜ಼ಲ್*
👌👌👌 *ನಿಯಮಾನುಸಾರ ಇಲ್ಲ ಸ್ವಲ್ಪ ಅನಿಸುತ್ತೆ ನೋಡಿ ಸರ್*
🙏🙏🙏
ಮಾಡಬಹುದಿತ್ತು - ಮಾಡಬಹುದಾಗಿತ್ತು
ಪ್ರಮಾಣವಾಗಿ - ಎರಡು ಕಡೆ ಬಂದಿದೆ
[3/24, 12:57 PM] Wr Yathish Kamaje: *ಪ್ರೇಮ್ ರವರ ಗಜಲ್*

👉ಚೆನ್ನಾಗಿ ಇದೆ
👉ಗಜಲ್ ಬರೆದ ಮೇಲೆ ಕಳಿಸುವ ಮುನ್ನ ಒಮ್ಮೆ ಪರೀಕ್ಷಿಸಿ.

👉೩,೪,೫,೭ ಈ ಷೇರುಗಳ ಲ್ಲಿ *ಮಾಡಬಹುದಾಗಿತ್ತು* ಎಂದು ರದೀಫ್ ಇದ್ದರೆ ಮತ್ಲ ಮತ್ತು ಉಳಿದ ಷೇರಗಳಲ್ಲಿ *ಮಾಡಬಹುದಿತ್ತು* ಇದೆ ಗಮನಿಸಿ
👉ಮತ್ಲದ ಎರಡನೇ ಸಾಲಿನಲ್ಲಿ ಮತ್ತು ಎರಡನೇ ಷೇರ್ ನಲ್ಲಿ *ಪ್ರಮಾಣವಾಗಿ* ಎರಡು ಸಲ ಬಂದಿದೆ
ಗಜಲ್ ನಿಯಮ ತಪ್ಪಾಗಲು ಇಷ್ಟು ಸಾಕು
ಗಮನಿಸಿ.

✍ಯತೀಶ್ ಕಾಮಾಜೆ
[3/24, 3:33 PM] ‪+91 78995 03158‬: *ಶನಿವಾರದಂದು ಮೂಡಿಬಂದ ಗಝಲಗಳ ಸಂದೇಶ ಉತ್ತಮ ವಾಗಿವೆ*

*ಪ್ರೇಮ್* ಸರ್ ಪರಿಸರಮಾಲಿನ್ಯದ ಕುರಿತುಬರೆದ ಗಝಲ್ ಚೆನ್ನಾಗಿದೆ👌👌

*ಯತೀಶ* ಅವರ ಪರಿಸರ ರಕ್ಷಣೆ ಬಗ್ಗೆ ಅರಿವು ಮೂಡಿಸುವ ಗಝಲ್ 👌👌

*ಪ್ರಶಾಂತ* ಅವರ ಗಝಲ್ ಸೊಗಸಾಗಿ ಮೂಡಿದೆ👌👌

*ಮಾನಸ* ಅವರ ಮನಸಿಗೆ ಹಿತ ನೀಡುವ ಕಾಯಕ ಮಾಡಲು ಬರೆದ ಗಝಲ್ ಉತ್ತಮವಾಗಿದೆ👌👌

*ಮೆಡಮ್ ಸುಧಾ* ಅವರ ದುಃಸ್ಥಿತಿ ಕಳೆದು ಬದುಕಿಗೆ ಸುಸ್ಥಿತಿ ತರಲು ಎಲ್ಲವನ್ನು ಸರಿ ಮಾಡಬಹುದು ಗಝಲ್ ಸೊಗಸಾಗಿದೆ👌👌

*ವೆಂಕಟೇಶ್ವರ* ಅವರ ಗಝಲ್  ಧರಣಿಯನ್ನು ಸ್ವರ್ಗವನ್ನಾಗಿ ಮಾಡುವ ಸಂದೇಶ ನೀಡಿದೆ.👌👌

*ಓದಿದಾಗ ಇವೆಲ್ಲವೂ ಉತ್ತಮ ಸಂದೇಶ ನೀಡಿ ಕವಿ ಮನಸುಗಳ ಬರಹ ಉತ್ತಮವಾಗಿ ಮೂಡಿ ಬಂದಿದೆ. ಓದಿ ಖುಷಿ ಪಟ್ಟೆ.*

👌👌👌👍👍👍
[3/26, 9:16 AM] ‪+91 99644 19639‬: ಪ್ರೇಮ್ ಸರ್  ರವರ *ನೋಟ* ವಿಭಿನ್ನವಾಗಿದೆ.

ಯಾರು ತನ್ನ ಕಣ್ಣ ನೋಟದ ಕಾಂತಿಯಿಂದಲೇ ಚರಾಚರಗಳಿಗೆ ಚೈತನ್ಯ ಕೊಡುತ್ತಾನೋ ಅಂತಹ ದಿವ್ಯಮಣಿ, ದಿನಕರನ ಕೇಂದ್ರವಾಗಿರಿಸಿದ ಭಾವಗೀತೆ  ಅದ್ಭುತವಾಗಿದೆ.

ಒಂದು ಕಡೆ ನಿಲ್ಲದೆ ದಿನವಿಡೀ ಚಲಿಸುವ ಸೂರ್ಯ ಎನ್ನದಿರಿ.  ಅವ ನಮ್ಮನ್ನು ತಿರುಗಿಸಿ ಹೆಸರು ಪಡೀತಿದಾನೆ‌.

ಗ್ರಹಗಳಿಗೆ ತಿರುಗುವ ಶಕ್ತಿಯನ್ನು ಕೊಟ್ಟವನೂ ಅವನೇ.

ಸೂರ್ಯೋದಯಕ್ಕೆ ಉತ್ತಮ ಗೀತೆ ಓದಿಸಿದ ನಿಮಗೆ

ಧನ್ಯವಾದಗಳು
ಶ್ಯಾಮ ✍
[3/26, 10:51 AM] ‪+91 94487 75795‬: *ಪ್ರೇಮ್ ಅವರ -ನೋಟ*

ಸೂರ್ಯನ ವಾಸ್ತವಿಕವಾಗಿ ಕಾಣುವ ಕ್ರಿಯೆಗಳನ್ನಿದ್ದೇಶಿಸಿ ಬರೆದಿರುವ ಕವನ ಚನ್ನಾಗಿದೆ,

ಯಾರು ನನ್ನೆದೆಯಾಳಕ್ಕೆ ಇಳಿದವರು....

ಯಾರು ನನ್ನೆದೆಯಾಳದಲಕ ಹುದುಗಿ ಉದಯಿಸಿದವರು...

ಎಂಬ ಎರಡು ಸಾಲುಗಳು ಕಲ್ಪನಾತ್ಮಕವಿದ್ದು, ಇತರೆ ಸಾಲುಗಳೊಂದಿಗೆ ಹೊಂದಕೆಯಾಗದಂತಿವೆ
🙏🏻💐
[3/28, 10:57 AM] ‪+91 90089 42122‬: *ನಲಿವಿನ ನರ್ತನ*

*ಅರ್ಥ ಮಾಡಿಕೊಂಡು ಬದುಕಿದರೆ ಬದುಕು ನಲಿವಿನ ಸಾಗರದಿ ತೇಲುವ ಪರಿಯ ..ತಮ್ಮ ಗೀತೆಯಲ್ಲಿ ಹಿಡಿದಿದ್ದಾರೆ*

*ನಗಿಸಲು ನೀನು ನಗುವೆನು ನಾನು*
ನಗಿಸಿ ನಗುವ ನಗುತ ಬಾಳುವ
ನಗೆಯ ಚಿಮ್ಮಿಸೊ ಸಾಧನ
ನವವಸಂತದ ನಲಿವಿನಂದದಿ
ನಯನಮನೋಹರವೀ ನಂದನ//
ಅದ್ಬುತ ರಚನೆ

*ಸುಂದರ ಸಾಲುಗಳು*

ನಾಗಾಲೋಟದ, ನಾಣ್ಯ ಮುಖಗಳ
ನಭದ ಆಸೆಯ ನವವನ
ನವನವೀನ ನಯಮನಸ್ಕರ
ನಾಟ್ಯಭೂಮಿ ನಮ್ಮ ನಿಜಜೀವನ//

*ಜೀವನ ನಾಟ್ಯ ಭೂಮಿ* 🌟

@ಪ್ರೇಮ್ #ಸೂಪರ್ ..
[3/30, 10:13 AM] Wr Yathish Kamaje: *ಪ್ರೇಮ್ ರ ಮಾಡರ್ನ್ ಸಂದೇಶ*

👉ಆಂಗ್ಲ ಪದ ಉಪಯೋಗಿಸಿ ಹೊಸದಾಗಿ ಗೀತೆ ರಚಿಸಿದ್ದಾರೆ
(ಯೊಕೊ ನಂದು ಮಾಡರ್ನ್ ಕವನದ ಕಾಫಿ ಅನಿಸಿತು😜)

👉ಇಂದಿನ ಶಿಕ್ಷಣದ ಬಗ್ಗೆ ಹೇಳಿದ್ದಾರೆ
ಇಂದಿನ ಕಾಲದಲ್ಲಿ ಓದು ಅತೀ ಮುಖ್ಯ ಎನ್ನುವಂತೆ ಕಾಣಲಾಗುತ್ತಿದೆ ಶಿಕ್ಷಣ ಇಲ್ಲದೆ ಬದುಕೆ ಇಲ್ಲ ಎಂದು ಗ್ರಹಿಸಿಕೊಂಡಿರುವರು ಇಂದಿನ ತಾಯಿ ತಂದೆಯರು.
ಮಗುವಿನ ಮನಸಿನ ಕನಸುಗಳಿಗೆ ಗಮನ ಕೊಡದೆ ಓದು ಓದು ಎಂದು ಪೀಡಿಸಲಾಗುತ್ತಿದೆ. ಅಂಕ ಕಡಿಮೆ ಬಂದ್ರೆ ಅದೇನೋ ಮಹಾ ಪಾಪ ಎನ್ನುವಂತೆ ಬಂಬಿಸಿದಿದೆ. ಇದಕ್ಕೆ ಹೆದರಿ ಪ್ರಾಣಬಿಟ್ಟದ್ದು ಇದೆ.
ಕೊನೆಯ ಮಾತಲ್ಲಿ ಸರಿಯಾದೆ ಸಂದೇಶ ನೀಡಿದ್ದಾರೆ
*ಮಾರ್ಕ್ಸೆ ಎಂದೂ ಜೀವ್ನ ಅಲ್ಲ*
*ಬಾಳಿ ಬದುಕು ಬೆಳಗಬೇಕು*
*ಪಾಸು ಫೈಲು ಇರ್ಲೇಬೇಕು*
ಎನ್ನುವ ಮೂಲಕ

ಆಶಯ ಚೆನ್ನಾಗಿ ಇದೆ

ಕನ್ನಡ ಪದಗಳನ್ನು ಬಳಸ ಬಹುದಿತ್ತು ಎನಿಸಿತು

ಕವಿಭಾವಕ್ಕೆ ಧಕ್ಕೆಯಾದರೆ ಕ್ಷಮಿಸಿ

✍ಯತೀಶ್

ಗುರುವಾರ, ಮಾರ್ಚ್ 29, 2018

224. ಭಾವಗೀತೆ-ಸಂದೇಶ

ಭಾವಗೀತೆ
ಮಾಡರ್ನ್ ಸಂದೇಶ

ಅವಗೆ ಬರ್ತಿತ್ ಒಳ್ಳೆ ಮಾರ್ಕ್ಸು
ಆದ್ರೂ ನೆಮ್ದಿ ಇಲ್ಲ ಮೇಸ್ಟ್ರಿಗೆ
ತಾಯಿಗೂನೂ ಅಲ್ಪ ಸಂಕ್ಟ
ಔಟ್ ಆಫ್ ಔಟ್ ಬೇಕಿತ್ತು!

ರಾತ್ರಿ ಹಗ್ಲು ಕೂತು ಓದಿ
ನೋಟ್ಸನೆಲ್ಲ ತಿದ್ದಿ ಗೀಚಿ
ಓದಿದ್ನಲ್ಲ ಕೇಳಿ ಕೇಳಿ
ಓದಿ ಬರ್ದು ಸುಸ್ತು ಇಲ್ಲಿ..!

ಆಗ ಬಾರ್ದು ಓದು ವಿಘ್ನ
ಜೀವ್ನವಾಗಬಾರ್ದು ಭಗ್ನ
ಕನಸಕಟ್ಟ ಬಾರ್ದು ನಗ್ನ
ಜೀವನ್ದಾಗೆ ಬೇಕು ಲಗೂನ//

ತಂದೆ ತಾಯಿ ತಿಳ್ಕೊಬೇಕು
ಮೇಸ್ಟ್ರುಗಳಿಗೂ ತಲೆಯು ಬೇಕು
ಓವರ್ ಲೋಡ್ ಸಲ್ಲದು
ಮನಸ್ಸುತುಂಬಾ ಸೂಕ್ಷ್ಮ ಅಂಶ!

ಮಗುವು ತಪ್ಪು ಬರೆದುದ ಗ್ರಹಿಸಿ
ತನಗೆ ಅಂಕ ಕಡಿಮೆ ಅಂದುಕೊಂಡು
ತನ್ನ ಜೀವ ತಾನೆ ಕಳೆದು
ಒಳ್ಳೆ ಜೀವ್ನ ಆಯ್ತು ಭಗ್ನ!

ಜನರೆ ಕೇಳಿ ತಿಳಿದುಕೊಳ್ಳಿ
ಮಾರ್ಕ್ಸೆ ಎಂದೂ ಜೀವ್ನ ಅಲ್ಲ
ಬಾಳಿ ಬದುಕು ಬೆಳಗಬೇಕು
ಪಾಸು-ಫೈಲು ಇರ್ಲೇಬೇಕು..
@ಪ್ರೇಮ್@

223. ಗಝಲ್-19

ಗಝಲ್

ನೀ ನನ್ನ ಮಗುವಲ್ಲಿ ನೋಡಿಕೊಂಡಂತೆ ನಾ ನೋಡಬಹುದಿತ್ತು
ಅಪ್ಪನನ್ನೂ ಅಕ್ಕರೆಯಿಂದ ನಿನ್ನಂತೆ ನಾ ನೋಡಬಹುದಿತ್ತು..

ಮೌನದಿಂದ ನಿನ್ನೊಡನೆ ಮಾತು ಕಲಿತಂತೆ
ಮಾತೃಭಾಷೆ ಸಂಯಮದಿ ತಿದ್ದಿ ಕಲಿತಂತೆ ನೋಡಬಹುದಿತ್ತು. .

ನಗುವರಳಿಸಿ ನೀ ಮನದಿ ನಕ್ಕಂತೆ
ನಿನ್ನ ನಗುವಲಿ ನನ್ನ ದುಃಖ ಮರೆತಂತೆ ನಾ ನೋಡಬಹುದಿತ್ತು..

ಕಪ್ಪಡರಿದ ನೀಗ್ರೋನ ತಾಯ ಮುಖದಲ್ಲೂ
ಮಗುವ ಕಂಡಾಗ ಪ್ರಜ್ವಲಿಸುವ ಬೆಳಕಂತೆ ನಾ ನೋಡಬಹುದಿತ್ತು..

ಹಾಲ್ಬೆಳದಿಂಗಳು ಚೆಲ್ಲೊ ಚಂದಿರನ ಹಾಗೆ
ಹಾಯಾದ ಮನದಿ ನಿನ್ನ  ಮಗುವಂತೆ ನಾ ನೋಡಬಹುದಿತ್ತು..

ಬಿದ್ದಾಗ ಭಯಭೀತಳಾಗಿ ಓಡಿಬಂದು
ತಬ್ಬಿಕೊಂಡು ಮುತ್ತಿಟ್ಟಂತೆ ನಾ ನೋಡಬಹುದಿತ್ತು..

ಪ್ರೇಮದಿ ಈ ಪ್ರೇಮನ ನೀ ಹಗಲಿರುಳು
ಸಲಹಿ ಕಾಪಾಡಿಕೊಂಡಂತೆ  ನಾ ನೋಡಬಹುದಿತ್ತು..
@ಪ್ರೇಮ್@

222. ಭಾವಗೀತೆ-ಬೇಕಿದೆ

ಭಾವಗೀತೆ

ಬೇಕಾಗಿದೆ

ಸುಟ್ಟು ಬಿಡಲು ಜಾತಿ ಬೇಧ
ಅಗ್ನಿ ತುಣುಕು ಬೇಕಿದೆ
ಒಡೆದ ಮನವ ಮತ್ತೆ ಬೆರೆಸೆ
ಅಂಟು ಸ್ವಲ್ಪ ಬೇಕಿದೆ...

ಹೊಸತು ಭಾವ ನಳ ನಳಿಸೆ
ನವೀನ ಹೃದಯ ಬೇಕಿದೆ
ನವವಸಂತ ಹೊಸ ಚಿಗುರಿಗೆ
ಹೊಸ ಕೋಗಿಲೆ ಬೇಕಿದೆ..

ಮಂದಮತಿಯ ಮನುಜ ಕುಲದ
ಮತ್ಸರ ಅಳಿಸಬೇಕಿದೆ
ಮನ್ವಂತರದಿಂದ ಕಿಚ್ಚು ತಂದ
ಮತಗಳಳಿಯ ಬೇಕಿದೆ..

ಜನಮನವ ಒಟ್ಟುಮಾಡೊ
ಜನರ ಭಾವ ಬೇಕಿದೆ
ಜಾತಿ ಮತ ಕಟ್ಟಳೆಗಳ
ಹೊತ್ತೊಯ್ಯೊ ಗಾಳಿ ಬೇಕಿದೆ..

ದೇಶಕಾಗಿ ದುಡಿವ ಮನಕೆ
ಸ್ವಾತಂತ್ರ್ಯ ಬೇಕಿದೆ
ಸಮಾಜ ಸೇವೆ ಮಾಡೊ ಜನಕೆ
ಸಹಾಯ ಹಸ್ತ ಬೇಕಿದೆ..

ಹೊಸತು ಬೇಡೊ ಮಂದಿಗಿಂದು
ಶಾಂತಿ ಸಹನೆ ಬೇಕಿದೆ
ಅಂಧ ಮನವ ತಿಕ್ಕಿ ತೊಳೆವ
ಮಾರ್ಜಕ ಬರಬೇಕಿದೆ..

@ಪ್ರೇಮ್

ಮಂಗಳವಾರ, ಮಾರ್ಚ್ 27, 2018

221. ಭಾವಗೀತೆ-ಬದುಕು

ಭಾವಗೀತೆ

ನಲಿವಿನ ನರ್ತನ

ಅರ್ಥೈಸಿಕೊಂಡರೆ ನಮ್ಮ ಬಾಳ
ಅದುವೆ ನಲಿವಿನ ನರ್ತನ
ನಗುವ ಚೆಲ್ಲುತ ನಯನ ಕುಣಿಸುತ
ಬದುಕುವುದೆ ನವಿಲ ನಾಟ್ಯ.//

ನಿತ್ಯ ನೋಟದಿ ನಲ್ಮೆಯಿಂದಲಿ
ಬಾಳ ನಗೆಯ ಕರತಾಡನ
ನಟನ ಚತುರರ ದೇವನಾಟದ
ನೋವು ನಲಿವಿನ ಜೀವನ..//

ನರನರಿಗಳು ನರರಾಕ್ಷರಾಗದಿರೆ
ನರದ ರಕ್ತ ಸರಿ ಚಾಲನ
ನಗನಾಣ್ಯದ ಅತಿಯಾಸೆ ಹುಟ್ಟದಿರೆ
ನಗಣ್ಯ ನೋವಿನ ಜೀವನ//

ನಗಿಸಿ ನಗುವ ನಗುತ ಬಾಳುವ
ನಗೆಯ ಚಿಮ್ಮಿಸೊ ಸಾಧನ
ನವವಸಂತದ ನಲಿವಿನಂದದಿ
ನಯನಮನೋಹರವೀ ನಂದನ//

ನಾಗಾಲೋಟದ, ನಾಣ್ಯ ಮುಖಗಳ
ನಭದ ಆಸೆಯ ನವವನ
ನವನವೀನ ನಯಮನಸ್ಕರ
ನಾಟ್ಯಭೂಮಿ ನಮ್ಮ ನಿಜಜೀವನ//

@ಪ್ರೇಮ್@

ಭಾನುವಾರ, ಮಾರ್ಚ್ 25, 2018

220. ಭಾವಗೀತೆ- ನೋಟ


ಭಾವಗೀತೆ

ನೋಟ

ಯಾರು ನನ್ನೆದೆಯಾಳಕ್ಕೆ ಇಳಿದವರು
ಭುವಿಯ ಪಶ್ಚಿಮವ ಕೆಂಪಾಗಿಸಿ ನಕ್ಕವರು..
ಸಂಜೆ ಮಾಡಿ ಜನಕೆ ಸೂರ್ಯಾಸ್ತ ಕೊಟ್ಟವರು
ಕೆಲಸ ನಿಲ್ಲಿಸಿ, ಮುಸ್ಸಂಜೆಯಾಯ್ತೆಂಬ ಸಂದೇಶವಿತ್ತವರು./ಯಾರು/

ಯಾರು ನನ್ನೆದೆಯಾಳದಲಿ ಹುದುಗಿ ಉದಯಿಸಿದವರು
ನನ್ನೊಡಲಲಿ ಕಾವಿರಿಸಿ ಹಸಿರ ಉಸಿರು ಇರಿಸಿದವರು
ಮೋಡದ ಮರೆಯಲಿ ಇಣುಕಿ ಕದ್ದು ನೋಡಿದವರು
ಕಣ್ಣ ಕಾಂತಿಯ ನೋಟದಿ ಜೀವ ಬೆಳೆಸುವವರು./ಯಾರು/

ವೃತ್ತಾಕಾರದ ಮುಖವಿರಿಸಿ ನೆಲೆ ನಿಂತವರು
ನನ್ನನೆ ತಿರುಗಿಸಿ ತಾ ಹೆಸರು ಪಡೆವವರು
ಹಗಲು ರಾತ್ರಿಯ ಮಾಡಿ ದಿನಗಳ ತಂದವರು
ಗ್ರಹಗಳ ಚಲನೆಗೆ ಚಲನ ಬಲ ಕೊಟ್ಟವರು./ಯಾರು/

ತರತರ ತಾರೆಗಳೆಲ್ಲಕ್ಕಿಂತ ಹತ್ತಿರವಿರುವವರು
ಬೇಗನೆ ಬಂದು ನನ್ನ ಎಬ್ಬಿಸಿ ಕರೆವವರು
ಜನರ ಬಳಿ ಮೊದಲನೆ ಅರ್ಘ್ಯ ಪಡೆವವರು
ಸೌರಶಕ್ತಿ ಹೊಂದಿ ದೀಪ ಬೆಳಗುವವರು./ಯಾರು/
@ಪ್ರೇಮ್@

218. ಶಿವಸ್ತುತಿ-33

33.ನೆನೆ ಶಿವನ

ಯಾರು ಜೀವವೇ
ಶಿವನು ಬಂದಿಹನೇ...

ನೆನೆ ಮನವ ಶಿವನನ್ನು
ಎಂದೂ ಹೀಗೆ ಹರನನ್ನು...

ಬಿಡದೆ ಸಲಹುವ ನಿನ್ನ
ಬಿಡದೆ ಮೂರನೇ ಕಣ್ಣ
ಕ್ಷಮಿಸಿ ಸಲಹುವ ನಮ್ಮ
ದೇವಾದಿ ದೇವ ಮಹೇಶನೂ….//

ಶಿವನ ಬರುವಿಕೆಗಾಗಿ
ಕುಳಿತ ಶಭರಿಯು ನಾನು
ಬಾಶಿವನೇ ಬಂದೆನ್ನ ಸಲಹು
ಸಲಹು ನಮ್ಮೆಲರನು ಹರಸು//

ಶಿವನ ಪಾದದ ಧೂಳು
ನಿನಗೆ ಮುಡಿಪು ನಮ್ಮ ಬಾಳು
ಪಂಚಲಿಂಗೇಶ್ವರನೆ ನೀನು
ಆಶೀರ್ವದಿಸು ಭಕ್ತರ ತಾನು//

ಮನವು ಮಲ್ಲಿಗೆಯಂತೆ
ಭಕ್ತ ಪ್ರಿಯನೂ ಅಂತೆ
ಬೇಡ ಭಕ್ತಿಗೆ ಚಿಂತೆ
ನೀನಿರಲು ಯೋಚನೆ ಏಕಂತೆ//
@ಪ್ರೇಮ್@

217. ಶಿವಸ್ತುತಿ-32

32.ಶಿವನು ನೀ

ಕಾಶಿಯಲ್ಲಿ ವಿಶ್ವನಾಥನು
ಧರ್ಮಸ್ಥಳದಿ ಮಂಜುನಾಥನು
ಪುತ್ತೂರಿನಲ್ಲಿ ಮಹಾಲಿಂಗೇಶ್ವರನು ನೀ….

ಉಪ್ಪಿನಂಗಡಿ ಸಹಸ್ರಲಿಂಗೇಶ್ವರ
ಗೋಕರ್ಣದಲ್ಲಿ ಗೋಕರ್ಣಾಥೇಶ್ವರ
ಐವರ್ನಾಡಲಿ ಪಂಚಲಿಂಗೇಶ್ವರನು ನೀ...

ತೋಡಿಕಾನದಿ ಮಲ್ಲಿಕಾರ್ಜುನನು
ಸೋಮೇಶ್ವರದಿ ಸೋಮನಾಥನು
ನರಹರಿಯಲ್ಲಿ ಸದಾಶಿವನು ನೀ….

ಹರಿಹರದಲ್ಲಿ ಹರಿಹರೇಶ್ವರ
ಮಂಗಳೂರಲ್ಲಿ ತ್ರಿಶೂಲೇಶ್ವರ
ತೋಟದಲ್ಲಿ ಅಮೃತೇಶ್ವರನು ನೀ…

ಉಡುಪಿಯಲ್ಲಿ ವೀರಭದ್ರನು
ಕಾರಿಂಜದಲಿ ಕಾಲಿಂಜೇಶ್ವರ
ಕೋಟೇಶ್ವರದಿ ಕೋಟಿಲಿಂಗೇಶ್ವರನು ನೀ…

ಕದ್ರಿಯಲ್ಲಿ ಮಂಜುನಾಥನು
ಪಣಂಬೂರಿನಲಿ ನಂದನೇಶ್ವರನು
ಬಂಟ್ವಾಳದಿ ಮಹಾಲಿಂಗೇಶ್ವರನು ನೀ….
@ಪ್ರೇಮ್@

216. ಶಿವಸ್ತುತಿ-31

31.
ಕಾಣದಂತೆ ವರವ ಕೊಟ್ಟನು
ನಮ್ಮ ಶಿವ ಭಕ್ತರಿಗೆ ಶಕ್ತಿ ಕೊಟ್ಟನು
ಕೇಳಿದ್ದೆಲ್ಲಾ ಕೊಟ್ಟು ಪ್ರೀತಿಯನು ಇಟ್ಟು
ಹಂಚಿರೆನುತ ಕೈಲಾಸ ಸೇರಿದ…..

ಹಂಚಿ ತಿಂದು ಬದುಕಿರೆಂದನು
ನಮ್ಮ ಶಿವ ಮಾಲಿನ್ಯ ಬಿಡಿರಿ ಎಂದನು
ಪರಿಸರವ ಕುಲಗೆಡಿಸಿ ಕಾಡನ್ನು ಕಡಿದಾಗ
ಕೈಲಾಸ  ಏರಿ ನಮ್ಮನೆಲ್ಲ ಮರೆತುಬಿಟ್ಟನು…..

ಪ್ರಾಣಿಗಳ ಹಿಂಸಿಸದಿರಿ ಎಂದನು
ನಮ್ಮ ಶಿವ ನದಿನೀರನ್ನು ಕುಡಿಯಿರೆಂದನು
ನೀರನ್ನೆಲ್ಲ  ಮಲಿನ ಮಾಡಿದ ಕಂಡು
ಬೇಸರದಿ ನಮ್ಮ ಕೈಲಾಸ ಸೇರಿಕೊಂಡನು….

ಹಸಿರನ್ನು ಬೆಳೆಯಿರೆಂದನು
ನಮ್ಮ ಶಿವ ಪ್ಲಾಸ್ಟಿಕ್ ಬೇಡವೆಂದನು
ರಸ್ತೆ ಬದಿ ಕಸವ ಹಾಕಿ ಗುಂಡಿ ತೋಡಿದ್ದ ಕಂಡು
ಮುನಿಸಿನಲ್ಲಿ ಕೈಲಾಸ ಸೇರಿಕೊಂಡನು....
@ಪ್ರೇಮ್@

215. ಶಿವಸ್ತುತಿ-30

30.ಕಾಪಾಡು ಶಿವ

ಕಾಪಾಡು ಶ್ರೀ ಸ್ವಾಮಿ ಮಂಜುನಾಥನೇ
ಆರತಿ ಬೆಳಗುವೆ, ಪೂಜೆಯ ಮಾಡುವೆ
ನನಗೆ ನೀ ಆಶೀರ್ವದಿಸು…

ನನ್ನವರಾರೂ ನನ್ನಾ ಬಳಿ ಬರಲೇ ಇಲ್ಲ
ಕಷ್ಟದ ಸಮಯದಿ ನೀನೆ ಎಲ್ಲ
ಪರೀಕ್ಷೆಯಿರಿಸಿದೆ, ನನ್ನ ಗೆಲ್ಲಿಸಿದೆ
ನನ್ನ ಬಾಳಿಗೆ ಬಂಗಾರವಾಗಿದೆ /ಕಾಪಾಡು/

ನೀನಿರದೆ ನನಗೆ ಬಾಳೇ ಇಲ್ಲ
ನನ್ನ ಜೀವನ ನೀನೇ ಬೆಳಗುವೆಯಲ್ಲ
ಕಷ್ಟವೇ ಬರಲಿ ಸುಖವೇ ಇರಲಿ
ನಿನ್ನೊಡನೆ ದಿನವ ಕಳೆಯುತಿರುವೆನಲ್ಲ /ಕಾಪಾಡು/

ಬಡವರು ಧನಿಕರು ಒಂದೇ ನಿನಗೆಲ್ಲ
ಗುಣವನು ನೋಡಿ ಅಳೆಯುವೆಯಲ್ಲ
ಕಷ್ಟವ ಕೊಟ್ಟು ಪರೀಕ್ಷೆ ಮಾಡಿ ತಿಳಿದು ನೀನು
ಇಷ್ಟವ ಪಾಲಿಸಿ ಖುಷಿಯನು ಹಂಚುವೇ ನೀನು /ಕಾಪಾಡು /

ಮನುಜಗೆ ಭಕ್ತಿಯ ರಸವನು ನೀಡು
ಶಕ್ತಿಯ ಕೊಟ್ಟು ವೈರಿಯ ನೀಗು
ದೀನ ದಲಿತರ ಸೇವೆಯ ಮಾಡುವಂಥ
ಶಕ್ತಿಯ ಕೊಟ್ಟು ಈಶ ಕಾಪಾಡು /ಕಾಪಾಡು/
@ಪ್ರೇಮ್@

214. ಶಿವಸ್ತುತಿ-29

29.

ರಕ್ಷಿಸೆಮ್ಮ ದೇವನೆ

ದಾರಿ ಕಾಣದಾಗಿದೆ
ಈಶ್ವರ ದೇವನೇ
ನಿನ್ನ ನಾಮ ಸ್ಮರಣೆಯೇ
ನಮ್ಮ ಕೆಲಸವಾಗಿದೆ//

ನಿನ್ನ ಕರೆಯಲಾರದೆ
ಬೆಂಡಾಗಿ ಹೋಗಿದೆ
ತಂದೆ ಬಂದು ಕಾಪಾಡಿ
ರಕ್ಷಿಸೆಮ್ಮ ಶಂಕರ//

ಕಲ್ಲು ಮುಳ್ಳು ಜೀವನಕೆ
ನಿನ್ನ ರಕ್ಷೆ ಬೇಕಿದೆ
ಅನ್ನ ನೀರ ಆಹಾರಕೆ
ನಿನ್ನ ಬಿಕ್ಷೆ ಬೇಕಿದೆ//

ಈಶ ನೀನು ಜಗದೊಡೆಯ
ಕಾಯು ನಮ್ಮ  ಅನವರತ
ನೀನಿಲ್ಲದೆ ಬದುಕಿಲ್ಲ
ಮಂಜುನಾಥ ಸ್ವಾಮಿಯೇ//

ನನ್ನ ನಲಿವು ನೋವು ಎಲ್ಲ
ನಿನ್ನ ಶಕ್ತಿಯಾಗಿದೆ
ನನ್ನ ಸ್ಥೈರ್ಯ ಧೈರ್ಯವೆಲ್ಲ
ನಿನ್ನ ಪ್ರಸಾದವಾಗಿದೆ//
@ಪ್ರೇಮ್@

213. ಶಿವಸ್ತುತಿ-28

28. ಶಿವನಿಹನು ಃ-

ಎಲ್ಲಿ ಭಕ್ತಿ ಇರುವುದೋ
ಅಲ್ಲಿ ಶಿವನಿರುವನು
ಎಲ್ಲಿ ಲಿಂಗ ಪೂಜೆಗೈವರೋ
ಅಲ್ಲಿ ಮಂಜುನಾಥನಿರುವನು//

ಎಲ್ಲಿ ಪೂಜೆ ನಡೆವುದೋ
ಅಲ್ಲಿ ವಿಶ್ವೇಶ್ವರನಿರುವನು
ಎಲ್ಲಿ ಜನ ತಲೆ ಬಾಗುವುದೋ
ಅಲ್ಲಿ ಮಹಾದೇವ ಬರುವನು//

ಎಲ್ಲಿ ಸತ್ಯ ಧರ್ಮವಿರುವುದೋ
ಅಲ್ಲಿ ಸದಾಶಿವನಿರುವನು
ಎಲ್ಲಿ ಶಾಂತಿ ನ್ಯಾಯ ನೆಡೆವುದೋ
ಅಲ್ಲಿ ಜಗದೀಶ ಬರುವನು//

ಎಲ್ಲಿ ಜೀವ ಸೆಲೆ ಉಕ್ಕುವುದೋ
ಅಲ್ಲಿ ಶಂಕರ ನಿರುವನು
ಎಲ್ಲಿ ಭಕ್ತರಿಗೆ ಸಂತಸವೋ
ಅಲ್ಲಿ ಪಂಚಲಿಂಗೇಶನಿರುವನು//
@ಪ್ರೇಮ್@

212. ಶಿವಸ್ತುತಿ-27

27. ಈಶ ಕ್ಷಮಿಸಿ

ಈಶ ಕ್ಷಮಿಸೋ ಎನ್ನಾ
ಜಗದೀಶ ರಕ್ಷಿಸೋ ಎನ್ನಾ//

ಕಷ್ಟ ನಷ್ಟಗಳಿಂದ
ಇಷ್ಟವಿಲ್ಲದೇ ಬದುಕಿ
ದುಷ್ಟಾ ಅಭ್ಯಾಸಗಳಲ್ಲಿ
ಮೈಮರೆತಿರುವೆನು ತಂದೆ….//

ಭಕ್ತಿ ಶಕ್ತಿಗಳ ಮರೆತು
ಹಿರಿಯ ಕಿರಿಯರ ಜರೆದು
ಮೋಸ ವಂಚನೆ ಮಾಡಿ
ಬೇಸರವ ಕೊಡುತಿಹೆನು ತಂದೆ//

ಇದ್ದದ್ದು ದಾನ ಧರ್ಮ ಮಾಡದೆ
ಕಲೆ ಹಾಕಿ ಇಡುತಲಿದ್ದು,
ನಾಳೆಯ ಕನಸನು ಕಂಡು
ಇಂದು ದುಃಖಿತನಾಗಿಹೆ ತಂದೆ //

ಹಿರಿಯ ಮಾತನ್ನು ಅಲ್ಲಗಳೆದು
ಕಿರಿಯರಿಗೆ ಸಹಾಯ ಮಾಡೆ ಇದ್ದು
ಜನರೊಡನೆ ಆಗಾಗ ಜಗಳ ಕಾದು
ಈ ಜೀವನವನೆ ಹಾಳುಮಾಡಿಕೊಂಡೆನು ತಂದೆ //
@ಪ್ರೇಮ್@

211. ಶಿವಸ್ತುತಿ-26

26. ದೇವ ಸ್ತುತಿ

ದೇವನೇ ನಿನ್ನ ನಂಬಿ ಬದುಕಿ
ಜೀವ ಕೋಟಿ ಬಾಳಿದೆ
ಕಾಯುವೆ ಎಂಬ ಸರ್ವ ನಂಬಿಕೆ
ಜನಮನದಿ ಹರಿದೆ…

ಶಿವನೇ ಜಗದೊಡೆಯ ದೇವನೇ
ಭಕುತರ ಪೊರೆವ  ಈಶನೇ
ಲಿಂಗರೂಪಿ ಬಿಲ್ವರೂಪಿ
ಭಕ್ರ  ಪ್ರೀಯ ಕೋಟಿ ಲಿಂಗೇಶ್ವರನೇ…

ಪಾರ್ವತಿ ಸಹಿತ ವರವನು ಕೊಡುವ
ಗಣಪತಿ ಪಿತನೇ ಮಹೇಶ್ವರ
ಭಕ್ತರಿಗೊಂದು ಗರವನು ಕೊಡುವ
ಭಕ್ತಿ ರೂಪಿ ವಿಶ್ವೇಶ್ವರನೇ…

ಭವ ಬಯ ಹರನೇ ವಿಲ್ವಪ್ರೀಯನೇ
ತುಂಬೇ ಹೂವನ್ನು ಬೇಡುವನೆ
ಭಕುತರ ಪೂಜೆಗೆ ಶರಣೆನುವ
ಬೇಡಿದ ವರವ ಕೊಡುವವನೆ….
@ಪ್ರೇಮ್@

210. ಶಿವಸ್ತುತಿ-25

25. ಮಹೇಶ ದೇವ

ಜಯ ಮಹೇಶ ಜಯ ಮಹೇಶ
ಜಯ ಮಹೇಶ ದೇವ
ಸತಿ ಪಾರ್ವತಿ, ಮಗ ಗಣಪನು
ಷಣ್ಮುಖರೊಂದಿಗೆ ಚೆನ್ನಾಗಿರು ದೇವ //

ಹಣೆಗಣ್ಣ ಮುಕ್ಕಣ್ಣ ಎಂದು ನಿನ್ನ ಕರೆವರು
ಬಿಕ್ಷೆಬೇಡಿ ಎಲ್ಲ ಕಾಯಕ ಶ್ರೇಷ್ಠವೆಂದ ದೇವ
ಜಲಗಾರನೆಂದು ಕರೆಸಿಕೊಂಡು ಮೆರೆದ  ಓ ದೇವಾ
ಗಣೇಶನಿಗೆ ಆನೆಶಿರವ ಜೋಡಿಸಿದ ದೇವ//

ಭಕ್ತಿಯಿಂದ ಪೂಜೆಗೈವೆ ನೀಡುವರವ ದೇವಾ
ಮನವ ಶುದ್ದಿ ಮಾಡಿಕೊಳ್ಳುವೆ ಕೊಡೋ ವರವ ದೇವ…
ದುರ್ಗಾಪತಿ, ಉಮಾಮಹೇಶ ಈಶ್ವರ ದೇವಾ
ವಿಘ್ನೇಶ್ವರ, ನೀಲೇಶ್ವರ ಪಂಚಲಿಂಗೇಶ್ವರ ದೇವ//

ವಿಷವ ಕುಡಿದು ನೀಲಕಂಠ ಎನಿಸಿಕೊಂಡ ದೇವ
ರಕ್ಷಿಸೆಮ ಬೇಡುವೆವು ಅನವರತಾ ದೇವ
ಭಕ್ತಿಗೆ ಮೆಚ್ಚಿ  ಆತ್ಮಲಿಂಗವ ದಾನವಿತ್ತ ದೇವ
ಭಕುತರನ್ನು ಕಾದು ಪೊರೆವ ಮಹೇಶ್ವರ ದೇವ //
@ಪ್ರೇಮ್@

210. ಶಿವಸ್ತುತಿ-25

25. ಮಹೇಶ ದೇವ

ಜಯ ಮಹೇಶ ಜಯ ಮಹೇಶ
ಜಯ ಮಹೇಶ ದೇವ
ಸತಿ ಪಾರ್ವತಿ, ಮಗ ಗಣಪನು
ಷಣ್ಮುಖರೊಂದಿಗೆ ಚೆನ್ನಾಗಿರು ದೇವ //

ಹಣೆಗಣ್ಣ ಮುಕ್ಕಣ್ಣ ಎಂದು ನಿನ್ನ ಕರೆವರು
ಬಿಕ್ಷೆಬೇಡಿ ಎಲ್ಲ ಕಾಯಕ ಶ್ರೇಷ್ಠವೆಂದ ದೇವ
ಜಲಗಾರನೆಂದು ಕರೆಸಿಕೊಂಡು ಮೆರೆದ  ಓ ದೇವಾ
ಗಣೇಶನಿಗೆ ಆನೆಶಿರವ ಜೋಡಿಸಿದ ದೇವ//

ಭಕ್ತಿಯಿಂದ ಪೂಜೆಗೈವೆ ನೀಡುವರವ ದೇವಾ
ಮನವ ಶುದ್ದಿ ಮಾಡಿಕೊಳ್ಳುವೆ ಕೊಡೋ ವರವ ದೇವ…
ದುರ್ಗಾಪತಿ, ಉಮಾಮಹೇಶ ಈಶ್ವರ ದೇವಾ
ವಿಘ್ನೇಶ್ವರ, ನೀಲೇಶ್ವರ ಪಂಚಲಿಂಗೇಶ್ವರ ದೇವ//

ವಿಷವ ಕುಡಿದು ನೀಲಕಂಠ ಎನಿಸಿಕೊಂಡ ದೇವ
ರಕ್ಷಿಸೆಮ ಬೇಡುವೆವು ಅನವರತಾ ದೇವ
ಭಕ್ತಿಗೆ ಮೆಚ್ಚಿ  ಆತ್ಮಲಿಂಗವ ದಾನವಿತ್ತ ದೇವ
ಭಕುತರನ್ನು ಕಾದು ಪೊರೆವ ಮಹೇಶ್ವರ ದೇವ //
@ಪ್ರೇಮ್@

209. ಶಿವಸ್ತುತಿ-22

22.

ಮೂವರಲ್ಲಿ ಕೊನೆಯ’ವರ’
ಬ್ರಹ್ಮ ವಿಷ್ಣು ಮಹೇಶ್ವರ’
ಬೇಡಿದವರಿಗೆ ಕೊಡುವ ವರ
ಮಾಯೆಯಿಹುದು ಈ ದೇವರ//

ಎಲ್ಲರಿಗೂ ಪ್ರಿಯರಾದವ
ಷಣ್ಮುಖಗೆ ತಂದೆಯಾದವ
ಗಣಪಗೆ ಶಿರ ಜೋಡಿಸಿದವ
ಪಾರ್ವತಿಯ ಹೃದಯದಿ ನೆಲೆಸಿದವ//

ನೆನೆಯಬೇಕು ಮನವೇ ನಿರಂತರ
ಭಜಿಸಿದರೆ ಮನವೇ ನೀ ಅಜರಾಮರ
ಜಪಿಸು ಶಿವನ ನಿತ್ಯ ಸೋಮವಾರ
ಗಳಿಸು ನಿನಗೆ ಕೋಟಿ ಕೋಟಿ ವರ//

ಷಣ್ಮುಖನ ಪಿತಾಶಿರ
ಗಂಗೆ ಹೊತ್ತ ಗಂಗಾಧರ
ದುರ್ಗೆಯ ಹೊತ್ತ ಮಹೇಶ್ವರ
ಶಿವ ಅರ್ದನಾರೀಶ್ವರ//

ಭಕ್ತರ ರಕ್ಷಕ ರಕ್ಷಕ  ಇವ
ಶಿಷ್ಠರಿಗೆ ಕರುಣೆ ನೀಡುವವ
ದೇವರ ದೇವನು ಶಿವನು ಇವ
ಮಹದೇವ ನಮ್ಮ ಈ ಶಿವ//
@ಪ್ರೇಮ್@

207. ಶಿವಸ್ತುತಿ-23

23. ಜಾತಿ ಪಂಥ ಹಲವು
ದೇವರು ನೂರಾರು
ಜಗಕ್ಕೆಲ್ಲ ದೇವನೊಬ್ಬನೇ
ಅವನೇ ಜಗದೀಶ್ವರ…

ನಮ್ಮನೆಲ್ಲ ಪೊರೆವ
ಪೊರೆದು ಸುಖವ ಕೊಡುವ
ವಿವಿದ ನಾಮಗಳಲಿರುವ
ಅವನೇ ಜಗದೀಶ್ವರ//

ಭಕ್ತರ ಕಾಯ್ವ ಗುರುಯಿವ
ಶಿಷ್ಟರ ಪೊರೆವ ಸಿರಿಯಿವ
ನಿತ್ಯ ಭಕ್ತಿಯಿಂದ ಕರೆಯೆ
ಪ್ರತ್ಯಕ್ಷನಾಗೋ ಶಿವನಿವ//

ಬಾರೋ ಗಂಗಾಧರ ಎನ್ನಿರಿ
ಪೂಜೆ ಮಾಡಿ ಕರೆಯಿರಿ
ಭಕ್ತಿಯಿಂದ ಭಜನೆ ಮಾಡಿ
ಭವವ ಮರೆತು ಮೆರೆಯಿರಿ//
@ಪ್ರೇಮ್@

207. ಶಿವಸ್ತುತಿ-23

23. ಜಾತಿ ಪಂಥ ಹಲವು
ದೇವರು ನೂರಾರು
ಜಗಕ್ಕೆಲ್ಲ ದೇವನೊಬ್ಬನೇ
ಅವನೇ ಜಗದೀಶ್ವರ…

ನಮ್ಮನೆಲ್ಲ ಪೊರೆವ
ಪೊರೆದು ಸುಖವ ಕೊಡುವ
ವಿವಿದ ನಾಮಗಳಲಿರುವ
ಅವನೇ ಜಗದೀಶ್ವರ//

ಭಕ್ತರ ಕಾಯ್ವ ಗುರುಯಿವ
ಶಿಷ್ಟರ ಪೊರೆವ ಸಿರಿಯಿವ
ನಿತ್ಯ ಭಕ್ತಿಯಿಂದ ಕರೆಯೆ
ಪ್ರತ್ಯಕ್ಷನಾಗೋ ಶಿವನಿವ//

ಬಾರೋ ಗಂಗಾಧರ ಎನ್ನಿರಿ
ಪೂಜೆ ಮಾಡಿ ಕರೆಯಿರಿ
ಭಕ್ತಿಯಿಂದ ಭಜನೆ ಮಾಡಿ
ಭವವ ಮರೆತು ಮೆರೆಯಿರಿ//
@ಪ್ರೇಮ್@

208. ಶಿವಸ್ತುತಿ-24

24. ನನ್ನ ನೋಡು ಶಿವ
ನೀನಾರಿಗಾದೆಯೋ ಎಲೆ ಮಾನವ
ಅರ್ದನಾರೀಶ್ವರನಾದೆ ನಾರಿಯರ
ಕಷ್ಟದ ಬೆಲೆ ತಿಳಿದು ಅವರಿಗೆ
ಸಹಾಯಕನಾಗಿ ನಿಂತೆ /ನೀನಾರಿಗಾದೆಯೋ/

ಬಿದ್ದು ಹೋಗುವ ಗಂಗೆಯ
ಜಡೆಯಲಿ ಕಟ್ಟಿಕೊಂಡು
ಜನರೆಗೆ ನೀರೊದಗಿಸೋ ದೇವನಾದೆ/ ನೀನಾರಿಗಾದೆಯೋ/

ಕಚ್ಚುವ ಹಾವನು ಹಿಡಿದು
ಕುತ್ತಿಗೆ ಕಟ್ಟಿಕೊಂಡು
ವಿಷವ ಕುಡಿದು ವಿಷಕಂಠನಾದೆ/ನೀನಾರಿಗಾದೆಯೋ/

ಪಾಪದ ಎತ್ತನ್ನು
ವಾಹನವಾಗಿರಿಸಿಕೊಂಡು
ರೈತಗೆ ಮಿತ್ರನ ಮಾಡಿ ಬೆಳೆ ಬೆಳೆಸಿದೆ ನಾನು/ ನೀನಾರಿಗಾದೆಯೋ/

ಜಠಾಧಾರಿಯಾಗಿದ್ದು
ಚರ್ಮವ ಹೊದ್ದು
ಬಟ್ಟಲಿಡಿದು ಬಿಕ್ಷೆ ಬೇಡಿದ ನಾನು/ನೀನಾರಿಗಾದೆಯೋ/

ಭಕುತರಿಗೊಲಿದು
ಕೇಳಿದ ವರನೀಡಿ
ಭಕುತರ ಪ್ರೀಯನೆನಿಸಿದೆ ನಾನು/ ನೀನಾರಿಗಾದೆಯೋ/
@ಪ್ರೇಮ್@

206. ಶಿವ ಸ್ತುತಿ-33

33.ನೆನೆ ಶಿವನ

ಯಾರು ಜೀವವೇ
ಶಿವನು ಬಂದಿಹನೇ....
ನೆನೆ ಮನವ ಶಿವನನ್ನು
ಎಂದೂ ಹೀಗೆ ಹರನನ್ನು...//

ಬಿಡದೆ ಸಲಹುವ ನಿನ್ನ
ಬಿಡದೆ ಮೂರನೇ ಕಣ್ಣ
ಕ್ಷಮಿಸಿ ಸಲಹುವ ನಮ್ಮ
ದೇವಾದಿ ದೇವ ಮಹೇಶನೂ….//

ಶಿವನ ಬರುವಿಕೆಗಾಗಿ
ಕುಳಿತ ಶಭರಿಯು ನಾನು
ಬಾಶಿವನೇ ಬಂದೆನ್ನ ಸಲಹು
ಸಲಹು ನಮ್ಮೆಲರನು ಹರಸು//

ಶಿವನ ಪಾದದ ಧೂಳು
ನಿನಗೆ ಮುಡಿಪು ನಮ್ಮ ಬಾಳು
ಪಂಚಲಿಂಗೇಶ್ವರನೆ ನೀನು
ಆಶೀರ್ವದಿಸು ಭಕ್ತರ ತಾನು//

ಮನವು ಮಲ್ಲಿಗೆಯಂತೆ
ಭಕ್ತ ಪ್ರೀಯನೂ ಅಂತೆ
ಬೇಡ ಭಕ್ತಿಗೆ ಚಿಂತೆ
ನೀನಿರಲು ಯೋಚನೆ ಏಕಂತೆ//
@ಪ್ರೇಮ್@

205. ಗಝಲ್-20

ಗಝಲ್

ಇಬ್ಬನಿಯ ಕವಿಗಳಿಂದಾಗಿ ನಾನೂ ಗಝಲ್ ಬರೆಯಲು ಕಲಿತೆ
ಕನ್ನಡ ಕಾವ್ಯ ಪ್ರಕಾರಗಳಲ್ಲಿ ಒಂದಾದ ಇದ ಬಳಸಲು ಕಲಿತೆ.

ತಪ್ಪು ತಪ್ಪಾಗಿ ಬರೆದು ತಿದ್ದಿಸಿಕೊಂಡೆ
ಒಂದಾದ ಬಳಿಕ ಇನ್ನೊಂದು ಓದಲು ಕಲಿತೆ .

ಓದಿ ಓದಿ ಪದಗಳ ಸಂಗ್ರಹ ಹೆಚ್ಚಿಸಿಕೊಂಡೆ
ರದೀಫ್, ಕಾಫಿಯಾ, ರವಿಗಳ ಗ್ರಹಿಸಲು ಕಲಿತೆ.

ಮತ್ಲಾ, ಷೇರ್, ಮುಕ್ತಾ ಏನೆಂಬುದ ಓದಿಕೊಂಡೆ
ಮನದಾಳದ ಭಾವನೆಗಳ ಹೊರಗೆಡಹಲು ಕಲಿತೆ.

ದ್ವಿಪದಿಗಳಲಿ ಒಂದು ಪ್ರಕಾರವ ನಾ ಕಲಿತುಕೊಂಡೆ
ಪ್ರೇಮದಿ ಗಝಲ್ ಗಳ ಆರಾಧಿಸಲು ಕಲಿತೆ.
@ಪ್ರೇಮ್@

219. ಭಾವಗೀತೆ -ನಾನು ನೀನು


ಭಾವಗೀತೆ

ನೀನು-ನಾನು

ನಿನ್ನ ಪ್ರೇಮಕೆ ನಾ ಧನ್ಯ ಕೃಷ್ಣ
ನಿನ್ನೊಡನೆ ಸಲ್ಲಾಪಕೆ ನಾ ಸೋತೆ ಕಾಂತೆ//

ನೀನಿರಳು ನನ್ನ ಬಾಳು ಹೂವಂತೆ ಕೇಳೋ
ನೀ ಬರಲು ನನ್ನ ಬದುಕು ಜೇನಂತೆ ಕೇಳೇ //

ನಿನ್ನೊಡನೆ  ದಿನ-ರಾತ್ರಿ ಒಂದೆ ಪ್ರಿಯಾ
ನನ್ನ ಬಾಳ ಪುಷ್ಪ ನೀ, ನನ್ನ ಜೀವದ ಜೀವ//

ನಿನ್ನ ಮಾತು, ನಿನ್ನ ಸಾಂಗತ್ಯ ನನ್ನದೇ ಪ್ರಿಯ
ನಿನ್ನ ಜೊತೆಗೆ ತಿಳಿಯದು ಹೋಗುವುದೇ ಸಮಯ//

ಹೂ ಮುಡಿಸೋ ನಿನ್ನ ಕೈಯೂ ಪುಷ್ಪದಂತಿಹುದು
ನಿನಗಾಗೆ ಹೂವನ್ನು ನಾ ತಂದಿಹುದು//

ನನ್ನ ಜಡೆಗಾಗೆ ತಂದಿರುವೆಯಾ ಓ ನನ್ನ ನಲ್ಲ
ನನ್ನ ಪ್ರೀತಿ ಧಾರೆಯೆರೆವೆ ನಿನಗಾಗೆ ಎಲ್ಲಾ//

ನನ್ನ ಕೈಯ ಕನ್ನಡಿಯ ಪ್ರತಿಬಿಂಬ ನೀ
ನನ್ನ ಕೈಯ ಕೊಳಲ ಗಾನ ನಿನಾದ ನೀ//

ನನ್ನರಸ ನನ್ನ ಜೀವ ನಿನಗಾಗೆ ಕೇಳು
ನಿನ್ನ ಪಡೆದ ನಾ ಧನ್ಯ ನನ್ನ ರಾಣಿ ಕೇಳು//

ಹೂ ಮುಡಿಸೆ  ನನ್ನ ಜಡೆಗೆ ನಾ ಹರ್ಷ ಪಡುವೆ
ನಿನಗೆ ಹೂ ಮುಡಿಸುತ ನಾ ಖುಷಿಯ ಪಡೆವೆ//

ನನ್ನ ಬಾಳು ಎಂದೆಂದು ನಿನಗಾಗೆ ನಲ್ಲ
ನನ್ನ ಜೀವದ ಗೆಳತಿ ನಿನಗಾಗಿ ನಾನಿರುವೆನಲ್ಲ//
@ಪ್ರೇಮ್@