ಭಾವಗೀತೆ
ನೋಟ
ಯಾರು ನನ್ನೆದೆಯಾಳಕ್ಕೆ ಇಳಿದವರು
ಭುವಿಯ ಪಶ್ಚಿಮವ ಕೆಂಪಾಗಿಸಿ ನಕ್ಕವರು..
ಸಂಜೆ ಮಾಡಿ ಜನಕೆ ಸೂರ್ಯಾಸ್ತ ಕೊಟ್ಟವರು
ಕೆಲಸ ನಿಲ್ಲಿಸಿ, ಮುಸ್ಸಂಜೆಯಾಯ್ತೆಂಬ ಸಂದೇಶವಿತ್ತವರು./ಯಾರು/
ಯಾರು ನನ್ನೆದೆಯಾಳದಲಿ ಹುದುಗಿ ಉದಯಿಸಿದವರು
ನನ್ನೊಡಲಲಿ ಕಾವಿರಿಸಿ ಹಸಿರ ಉಸಿರು ಇರಿಸಿದವರು
ಮೋಡದ ಮರೆಯಲಿ ಇಣುಕಿ ಕದ್ದು ನೋಡಿದವರು
ಕಣ್ಣ ಕಾಂತಿಯ ನೋಟದಿ ಜೀವ ಬೆಳೆಸುವವರು./ಯಾರು/
ವೃತ್ತಾಕಾರದ ಮುಖವಿರಿಸಿ ನೆಲೆ ನಿಂತವರು
ನನ್ನನೆ ತಿರುಗಿಸಿ ತಾ ಹೆಸರು ಪಡೆವವರು
ಹಗಲು ರಾತ್ರಿಯ ಮಾಡಿ ದಿನಗಳ ತಂದವರು
ಗ್ರಹಗಳ ಚಲನೆಗೆ ಚಲನ ಬಲ ಕೊಟ್ಟವರು./ಯಾರು/
ತರತರ ತಾರೆಗಳೆಲ್ಲಕ್ಕಿಂತ ಹತ್ತಿರವಿರುವವರು
ಬೇಗನೆ ಬಂದು ನನ್ನ ಎಬ್ಬಿಸಿ ಕರೆವವರು
ಜನರ ಬಳಿ ಮೊದಲನೆ ಅರ್ಘ್ಯ ಪಡೆವವರು
ಸೌರಶಕ್ತಿ ಹೊಂದಿ ದೀಪ ಬೆಳಗುವವರು./ಯಾರು/
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ