ಬುಧವಾರ, ಮಾರ್ಚ್ 7, 2018

171. ಕವನ- ಮಳೆ

ಮೌನ(ಭಾವಗೀತೆ)

ಗಾಳಿ ಬೀಸಿತು ಮೋಡ ಚಲಿಸಿತು
ಬಯಲು ತಂಪು ಆಯಿತು
ಭಾನು ಜಾರಿತು, ಮೋಡ ಕರಗಿತು
ಮಳೆಯು ರೊಯ್ಯನೆ ಸುರಿಯಿತು...

ಮೌನವಾಗಿ ಅವಿತು ಕುಳಿತ
ಕಪ್ಪೆ ಹೊರಗೆ ಬಂದಿತು
ಗೊಟರ್ ಗೊಟರೆನುತ ಖುಷಿಯಲಿ
ತನ್ನ ಬಳಗವ ಕರೆಯಿತು...

ಹಕ್ಕಿ ಹಾರಿತು ಗೂಡು ಸೇರಿತು
ಮರಿಗೆ ಗುಟುಕನು ಹಂಚಿತು..
ತನ್ನ ಗೂಡಲಿ ರಕ್ಕೆಯೊಳಗೆ
ಮರಿಗೆ ರಕ್ಷಣೆ ಕೊಟ್ಟಿತು...

ಜನರು ಬಂದರು ದೂರ ಹೊರಟರು
ಮಳೆಯ ಕ್ಯಾರೇ ಮಾಡದೆ
ಕೊಡೆಯ ಹಿಡಿದು ಹೊರಟೆ ಹೋದರು
ವರುಣನಾರ್ಭಟ ಲೆಕ್ಕಿಸದೆ....
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ