ಗಝಲ್
ಈ ಭುವಿಗೆ ನನ್ನಂಥವರ ತಂದ ನಿನ್ನ ಒಲವಿಗೆ ಕೊನೆಯಿಲ್ಲ,
ಬದುಕ ಕಟ್ಟಿಕೊಟ್ಟು ಬಾಳು ಕೊಟ್ಟ ನಿನ್ನ ಪ್ರೀತಿಗೆ ಕೊನೆಯಿಲ್ಲ..
ತಪ್ಪುಗಳನೇಕ ಆಗಿಹವು ನನ್ನಿಂದ ಈ ಬದುಕಲಿ
ನಿನ್ನ ನಿರಂತರ ಒಪ್ಪು, ಕ್ಷಮಾಪರತೆಗೆ ಕೊನೆಯಿಲ್ಲ..
ಬಡತನದಲು ಸಿರಿವಂತಳಾಗಿಸಿ ಕಾಯುತಿಹೆ ನೀ
ನಿನ್ನಂತರಂಗದ ಪ್ರೀತಿಯ ಐಕ್ಯತೆಗೆ ಕೊನೆಯಿಲ್ಲ..
ಬದುಕ ಬಂಧು ನೀ, ದಯಾ ಸಿಂಧು ನೀ
ದೀನ ಬಂಧುವೇ ನಿನ್ನ ಜನಪ್ರಿಯತೆಗೆ ಕೊನೆಯಿಲ್ಲ..
ನನ್ನ ಮನದಂಗಳದಿ ಸದಾ ತುಂಬಿರುವೆ ನೀ
ನಿನ್ನಪಾರ ಭಕ್ತಿ -ಭಾವದೆಡಡೆಗೆ ಕೊನೆಯಿಲ್ಲ..
ಬಂಧು-ಬಳಗವು ನೀ, ಏನೆ ಬಂದರೂ ನೀ
ನಿನ್ನಾಗಮನದ ಕಾಯುವಿಕೆಗೆ ಕೊನೆಯಿಲ್ಲ...
ನನ್ನ ಜೀವ,ಜೀವನ,ಜಗ, ಬಾಳುವೆ ನೀ
ನೀನಿಲ್ಲದೆ ನಾನಿಲ್ಲ, ನಿನ್ನ ಮೇಲಿನ ಭಕ್ತಿಗೆ ಕೊನೆಯಿಲ್ಲ..
ನನ್ನಂತರಂಗದ ಭಾವ ರೂಪದ ಶಿವ ನೀ
ನಿನ್ನ ಇರುವಿಕೆಯ ಘಟನೆಗಳಿಗೆ ಕೊನೆಯಿಲ್ಲ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ