ಈ ಲೋಕ-1
ಮೋಹ ಪಾಶಕೆ ಸಿಕ್ಕು
ಸಂಸಾರ ಕೂಪದಿ ನಕ್ಕು,
ಅವಕಾಶಗಳ ಹೆಕ್ಕಬೇಕು
ಬಾಳಬೇಕು ಬದುಕಬೇಕು.
ಲೋಕದೊಳು ಸಿಲುಕಿ
ಮಾಯದೊಳು ಬದುಕಿ
ಕಷ್ಟಗಳ ಕೂಪದಿ ಸಿಡುಕಿ
ಆದರೂ ಇರಬೇಕು ಚಾಲಾಕಿ...
ಗೌರವಿಸಬೇಕು ಹಿರಿಯರ
ತಿದ್ದಬೇಕು ಕಿರಿಯರ
ನಿಂದಿಸಬಾರದು ಯಾರ
ಬದುಕು ಬೆಳಗಬೇಕು ಪೂರ..
ನಾಡುನುಡಿ ಕಟ್ಟಬೇಕು
ಬಾಡದೆಯೆ ಬದುಕಬೇಕು
ಸಮಾಜಸೇವೆ ಮಾಡಬೇಕು
ತಾವೆ ದುಡಿದು ಬಾಳಬೇಕು...
ತಾವರೆಯ ತಪ್ಪಲಲ್ಲಿ
ತವರವರ ತವಕದಲ್ಲಿ
ತಮ್ಮ ತಂಗಿ ಭಾವದಲ್ಲಿ
ತನು ಮನವ ಬೆಳಗಿರಿಲ್ಲಿ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ