ಶುಕ್ರವಾರ, ಮಾರ್ಚ್ 2, 2018

157. ಕವನ-ಬದುಕು ಬವಣೆ

1.ಮುಖವಾಡ

ಬದುಕಬೇಕು ಜಗದಿ
ಮುಖವಾಡ ಹೊತ್ತು..
ದುಃಖವಿದ್ದರೂ ನಗುತಲಿದ್ದು,
ನೋವಿನಲೂ ಸುಖದಂತಿದ್ದು
ಸತ್ತು ಬದುಕಬೇಕು..

2. ಬದುಕ ಬವಣೆ -ಕವನ

ಇಂದು ಏನೋ, ನಾಳೆ ಏನೋ
ಯೋಚನೆಯು ಹರಿಯಲು..
ಬದುಕಬೇಕು, ಬಾಳಬೇಕು
ಮನದಿನಿಯೆ ಜಗದೊಳು...

ಗೆಳೆಯರೊಡನೆ, ಬಳಗದೊಡನೆ
ಬೆರೆಯಬೇಕು ಬದುಕಲಿ..
ಎಲ್ಲ ಮಾಸಗಳಲು ಜನರು
ಹೊಂದಿಕೊಳುತ ಜೊತೆಯಲಿ...

ನಾಳೆ ಚಿಂತೆ ಬೇಡ ಇಂದು
ದೇವನಿಹನು ಕಾಯಲು..
ಬಾಳ್ವೆ ಮಾಡಬೇಕು ಜಗದಿ
ಒಂದು ದಿನವಿಹುದು ಸಾಯಲು..

ಎಂತೊ ಏನೊ ಹೇಗೊ ಎಲ್ಲೊ
ಸಂಧಿಸುವೆವು ಜೊತೆಯಲಿ..
ಒಳ್ಳೆತನದಿ ಬಾಳು ನಡೆಸಿ,ಉಳಿದು
ಬೇಯಬೇಕು ಚಿತೆಯಲಿ..

ಮುಖವಾಡವ ಕಳಚಿ ಇಟ್ಟು
ಬಳಲಬೇಕು ನೋವಲಿ,
ಸಂತೈಸಿ, ಸಹಕಾರದಿ
ಬಾಳಬೇಕು ಜೊತೆಯಲಿ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ