ಶನಿವಾರ, ಮಾರ್ಚ್ 10, 2018

181.ಭಾವಗೀತೆ- ಕೃಷ್ಣಾ ನನ್ನೊಳಿರು

ಭಾವಗೀತೆ-1

ಕೃಷ್ಣಾ .. ನನ್ನೊಳಿರು..

ನಿನ್ನ ನೋಡಬಂದೆ ಆನಂದದಿ ಕುಣಿಯುತ್ತಾ
ನಿನ್ನ ಜತೆಗೂಡಿ ಹಾಡಿದೆ ನಲಿಯುತ್ತಾ...

ಓ ನನ್ನ ಕೃಷ್ಣಾ...ಹೇಗೆ ಹೋಗಲಿ ನಿನ್ನ ಬಿಟ್ಟು..
ಹೇಗೆ ಸಾಗಲಿ ಮನವ ಕೊಟ್ಟು...
ಬಳಿಸಾರಿ ಇರುವೆ, ನಾ ನಿನ್ನ ಜತೆಗೆ
ನೀ ಬಾರೋ ನನ್ನಯ ಮನೆಗೆ..

ನನ್ನೊಡೆಯನೆ ನಿನ್ನ ಬಿಟ್ಟು ಹೇಗೆ ಹೋಗಲಿ?
ನನ್ನ ಮನವೆ ನಿನ್ನ ತೊರೆದು ಹೇಗೆ ಬಾಳಲಿ...
ನಿನ್ನ ಬಿಟ್ಟ ನನ್ನ ಮನವು ಒಂಟಿಯಾಗಿದೆ..
ನಲ್ಲನೊಡನೆ ಇರು ಎಂದು ಮನವು ಹೇಳಿದೆ..

ನನ್ನ ಮುದ್ದು ಕಳ್ಳ ಕೃಷ್ಣ ಕೊಳಲ ಗಾನದಿ
ನನ್ನ ಮನವ ಕದ್ದ ಚೋರ ನಿನ್ನ ರಾಗದಿ..
ಬೇಕೆಂದರು ಇರಲಾರೆ ನಿನ್ನ ಸಂಗಡ
ಬಿಟ್ಟು ನಿನ್ನ ಹೋಗಲಾರೆ ಬದುಕು ಜಂಜಡ....

ನೀನೆ ನನ್ನ ಇನಿಯ ಎಂದೂ ಜೀವಕೆ
ಬಿಟ್ಟು ಹೋಗಲಾರೆ ನಿನ್ನ ,ನನಗೆ ಅಂಜಿಕೆ..
ಆದರೊಂದು ಮಾತು ನಿನಗೆ ನನ್ನವನಾಗಿರು
ಬೇಸರದಿ ಬೀಳ್ಕೊಡುತಿಹೆ ನನ್ನೊಳಡಗಿರು..

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ