ಶನಿವಾರ, ಮಾರ್ಚ್ 24, 2018

203. ಕವನ ಲೇಖನಿ

ಕವಿಗೋಷ್ಠಿಗಾಗಿ

ನಾ ಬರೆವೆ

ಲೇಖನಿಯುು ನಾ ಕುಣಿವೆ ಕೈಯಲ್ಲಿ
ಬರೆವೆ ಸವಿನುಡಿಯ ನನ್ನ ಬಾಯಲ್ಲಿ.//

ನನ್ನ ಬಾಯಲಿ ನಾ ಬರೆವೆ ಹಿತಕಾಗಿ
ಬಣ್ಣ ಬಯಲಾಗುವುದು ಎಳೆ ಎಳೆಯಾಗಿ.//.

ವಂದಿಸುವೆ ಗುರುಗಳಿಗೆ ಮಗನಾಗಿ,
ಮಕ್ಕಳ ಕೈಲಿ ಉರುಳುವೆ ಆಟಿಕೆಯಾಗಿ//

ನನ್ನೆದೆಯಲಿ ಶಾಯಿ ಮಾತ್ರವೇ
ಆದರೂ
ನಾನರಿವೆ ನಿಮ್ಮ ಮೆದುಳಿನ ಯೋಚನೆ ಎಲ್ಲವೂ//

ನನ್ನಿಂದಲೆ ನೀ ಕಲಿವೆ ವಿದ್ಯೆ ಬುದ್ಧಿ
ಕಾಪಾಡುವೆ ಬದುಕಲಿ ಕಲಿಸಿ ಬುದ್ಧಿ//

ನಾನಿರುವೆ ಹಲವಾರು ಬಣ್ಣಗಳಲಿ
ನಾ ದುಡಿವೆ ಅಧಿಕಾರಿಗಳ ಕೈಗಳಲಿ//

ಕಂಪ್ಯೂಟರ್ ನನ್ನ ದೂಡುತಿದೆ ಹೊರಕೆ
ಆದರೂ ಬಳಕೆಯಾಗುವೆ ನಾ ಹಸ್ತಾಕ್ಷರಕೆ//
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ