ಕವನ-ಸಹನೆ
ಕರೆದಿರಲ್ಲ ಸ್ತ್ರೀಯರಿಗೆ ಸಹನಾಮಯಿಯೆಂದು
ಹಾಕಿದಿರಲ್ಲ ಕಷ್ಟಗಳ ಸಂಸಾರದ್ದೆಂದು,
ಮಗುವಿನ ಜನನದ ನೋವು ಪ್ರಕೃತಿಯ ಕೊಡುಗೆ
ಮಾನಸಿಕ ನೋವು ಸಂಸಾರದ ಕೊಡುಗೆ
ಹೆಣ್ತನಕ್ತೆ ನೋವು ಕಾಮುಕರ ಕೊಡುಗೆ
ಹೆಣ್ಣು ಕುಲಕ್ಕೇ ನೋವು ಸಮಾಜದ ಕೊಡುಗೆ
ಸಿರಿ ಸುಖ ಸಂಪತ್ತು ಬಂದು ಹೋಗಬಹುದು
ಮನೆ ಮಠ ಆಸ್ತಿ ಗಳಿಸಬಹುದು
ಮಾತೆ,ಮಗಳು, ಸಖಿ, ಸಹೋದರಿ ಪ್ರೀತಿ
ಪಡೆಯಲುಂಟೆ ಎಲ್ಲೆಡೆ...
ಅರಿತರನಂಟು ಒಳ್ಳೆಯ ನಡೆ...
ತಾಯ ಜೀವಕಿರಲಿ ಗೌರವ
ಸಹೋದರಿಗಿರಲಿ ಮಮಕಾರ
ಮಡದಿಗಿರಲಿ ತುಂಬು ಪ್ರೀತಿ
ಉಳಿದ ಹೆಣ್ಣಿಗಿರಲಿ ಸಹೋದರ ಭಾವ..
ನೈತಿಕತೆಗೆ ಬೆಲೆಯು ಬೇಕು
ಸಹಿಸುವಂತಿಲ್ಲ ಅಟ್ಟಹಾಸ
ಅದ ನೀನು ಮಟ್ಟ ಹಾಕಬೇಕು
ಹೊಂದಾಣಿಕೆ ಕಲಿಯಬೇಕು..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ