ಶನಿವಾರ, ಮಾರ್ಚ್ 10, 2018

176.ಕವಿತೆ-ಉದಾತ್ತ ಮಹಿಳೆ

ಉದಾತ್ತ ಮಹಿಳೆ

ಮಳೆಯಿರಲಿ ಬಿಸಿಲಿರಲಿ
ಮಾರು ದೂರ ನಡೆದು
ಕೂಲಿ ನಾಲಿ ಮಾಡಿ ಸಾಕಿ
ಮಗ ಚಿಕ್ಕದು, ತಿಳಿಯದೆಂದು
ಹಲ ದಿನಗಳ ನೂಕಿ..
ತನ್ನ ಮಕ್ಕಳು ಸಂಸಾರವೆಂದು
ದಿನವನೆಲ್ಲ ಕಳೆ ಕಳೆದು..
ಕುಡುಕ ಗಂಡನ ಹಿಂಸೆ ಸಹಿಸಿ
ಮಕ್ಕಳಿಗಾಗಿ ಬದುಕಿ
ವಯಸ್ಸಿನಲಿ ಮಕ್ಕಳು ಹೊರಕಾಕಿ
ಬೀದಿ ಬದಿ ಬದುಕುವಾಗಲೂ
ಕೇಳುವುದೊಂದೆ ದೇವರಲಿ
"ನನ್ನ ಮಕ್ಕಳು ಚೆನ್ನಾಗಿರಲಿ"
"ಇಲ್ಲ ಅವರಿಗೆ ತಿಳುವಳಿಕೆ"
ಇದುವೇ "ಉದಾತ್ತ ಮಹಾತಾಯಿ"
ತಾಯಿಯಿಂದಲ್ಲವೇ ನಮ್ಮೀ ದೇಹ-
ಮನಸ್ಸು, ಕೆಲಸ, ಕಾರ್ಯ
ಈ ಮಹಿಳೆಗೆ ಸಮನಾದವರಿಹರೇ
ಈ ಬೃಹತ್ ಜಗದೊಳಗೆ...
@ಪ್ರೇಮ್@
Proud to be a woman... I happy Women's Day dear for all mothers and sisters of this world...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ