ಮಂಗಳವಾರ, ಮಾರ್ಚ್ 27, 2018

221. ಭಾವಗೀತೆ-ಬದುಕು

ಭಾವಗೀತೆ

ನಲಿವಿನ ನರ್ತನ

ಅರ್ಥೈಸಿಕೊಂಡರೆ ನಮ್ಮ ಬಾಳ
ಅದುವೆ ನಲಿವಿನ ನರ್ತನ
ನಗುವ ಚೆಲ್ಲುತ ನಯನ ಕುಣಿಸುತ
ಬದುಕುವುದೆ ನವಿಲ ನಾಟ್ಯ.//

ನಿತ್ಯ ನೋಟದಿ ನಲ್ಮೆಯಿಂದಲಿ
ಬಾಳ ನಗೆಯ ಕರತಾಡನ
ನಟನ ಚತುರರ ದೇವನಾಟದ
ನೋವು ನಲಿವಿನ ಜೀವನ..//

ನರನರಿಗಳು ನರರಾಕ್ಷರಾಗದಿರೆ
ನರದ ರಕ್ತ ಸರಿ ಚಾಲನ
ನಗನಾಣ್ಯದ ಅತಿಯಾಸೆ ಹುಟ್ಟದಿರೆ
ನಗಣ್ಯ ನೋವಿನ ಜೀವನ//

ನಗಿಸಿ ನಗುವ ನಗುತ ಬಾಳುವ
ನಗೆಯ ಚಿಮ್ಮಿಸೊ ಸಾಧನ
ನವವಸಂತದ ನಲಿವಿನಂದದಿ
ನಯನಮನೋಹರವೀ ನಂದನ//

ನಾಗಾಲೋಟದ, ನಾಣ್ಯ ಮುಖಗಳ
ನಭದ ಆಸೆಯ ನವವನ
ನವನವೀನ ನಯಮನಸ್ಕರ
ನಾಟ್ಯಭೂಮಿ ನಮ್ಮ ನಿಜಜೀವನ//

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ