ನನ್ನ ಕವಿತೆ
ನನ್ನ ಕವಿತೆ ಎಲ್ಲೆ ಹೋದ್ರೂ
ನನ್ನ ಜೊತೆಗೆ ಬರುವುದು.
ನಿದ್ದೆಯಲ್ಲು ಎಬ್ಸಿ ನನ್ನ
ಬರೆಯೊ ಬೇಗ ಎನುವುದು...//
ಮನಕೆ ಬಂದು ಆತು ಕುಂತು
ಬರಲು ಹೊರಗೆ ಕರೆವುದು..
ನನ್ನ ಕಿವಿಗೆ ತನ್ನ ಪದವ
ಗುಂಯ್ ಗುಟಿಸುತಲಿರುವುದು..//
ನಾನು ಮಲಗೆ ನನ್ನ ಕವಿತೆ
ಎದ್ದುಕೊಂಡೆ ಇರುವುದು
ತನ್ನ ಪದವ ತನ್ನೊಳಗೆ
ಮೆಲುಕು ಹಾಕುತಿರುವುದು...//
ಮೆಲ್ಲ ಬಂದು ಕಿವಿಯ ಬಳಿ
' ನಾನು ಬರಲೆ' ಎನುವುದು.
ರಾಗ ಹಾಕಿ ತಾಳ ಕೊಟ್ಟು
ನನ್ನ ಹಾಡಿ ಕರೆವುದು..//
ನನ್ನ ಕವಿತೆ ನನ್ನ ಮಗುವು
ನಾನೆ ಅದರ ದೇಹವು
ನನ್ನ ಮನವು ನನ್ನ ಕವಿತೆ
ನನ್ನೆದೆಯು ಅದರ ಉಗಮವು..//
ಮೆದುಳಿನಿಂದ ಹೃದಯದೊಳಗೆ
ಇಳಿದು ಬಂದು ಹರಿವುದು
ಗೆಲುವಿನಿಂದ ಜೋಡಿಸಿದ
ಪದವ ಕಟ್ಟಿ ಕೊಡುವುದು...//
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ