ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ
ನಮಗೆಲ್ಲ ನಮ್ಮದೇ ಆದ ಪರಂಪರೆಯಿದೆ. ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ನಮ್ಮ ಕರ್ತವ್ಯ. ಪ್ರತಿಯೊಂದು ಜಾತಿಗೂ, ಪ್ರತಿಯೊಂದು ಧರ್ಮಕ್ಕೂ ಅದರದೇ ಆದ ಪರಂಪರೆಗಳಿವೆ. ಅವುಗಳನ್ನುಳಿಸುವುದು ಪ್ರತಿಯೊಬ್ಬರ ಕರ್ತವ್ಯ.
ಇಂಥ ಪರಂಪರೆಗಳಲ್ಲಿ ಒಂದು ಹಿಂದೂ ಕ್ಯಾಲೆಂಡರ್ ಗಳ ಪ್ರಕಾರ ಹೊಸ ವರುಷ ಯುಗಾದಿ. ಯುಗದ ಆದಿ. ಅಂದರೆ ವರುಷದ ಆದಿ.
ಈ ಹೊಸ ವರುಷಕ್ಕೆ ತನ್ನದೇ ಆದ ಆಚರಣೆಯ ರೀತಿಯಿದೆ. ಆಯಾ ಜನಾಂಗಗಳಲ್ಲಿ, ಊರುಗಳಲ್ಲಿ ಹಿರಿಯರು ಅದಕ್ಕೆ ಒಂದೊಂದು ರೀತಿ ರಿವಾಜುಗಳನ್ನು ಇಟ್ಟಿದ್ದಾರೆ. ಅದರಂತೆ ನಡೆಯುವುದು ನಮ್ಮ ಕರ್ತವ್ಯವಾಗಬೇಕು.
ಮಹಿಳೆಯರಿಗೆ ಮನೆ ಸ್ವಚ್ಛ ಗೊಳಿಸುವುದು, ಮನೆಯ ಅಲಂಕಾರ, ನೀಟಾದ ಓರಣಗೊಳಿಸುವಿಕೆ ವಿವಿಧ ಭಕ್ಷ್ಯಗಳ ತಯಾರಿ ಇವೇ ಮೊದಲಾದ ಕಾರ್ಯಗಳಲ್ಲಿ ಬ್ಯುಸಿ ಆಗಿಬಿಡುತ್ತಾರೆ!
ಯುಗಾದಿಯ ಸಡಗರ ಚೆನ್ನಾಗಿರಲಿ, ಹೊಸ ವರುಷ ಹೊಸ ಹರುಷ ತರಲಿ. ಎಲ್ಲರಲ್ಲಿ ಒಗ್ಗಟ್ಟಿನ ಭಾವ ಮೂಡಲಿ, ಮೈಮನಗಳಲ್ಲಿ ಉದಾತ್ತ ಆಲೋಚನೆಗಳು ಹರಿದು ಬರಲಿ. ಎಲ್ಲರಿಗೆ ಶುಭವಾಗಲಿ.
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ