ಗಝಲ್
ಕರುನಾಡಲ್ಲಿದ್ದಿದ್ದರೆ ಕುದುರೆಮುಖ ಉದ್ಯಾನವನದ ಹುಲಿಗಳ ನಾ ನೋಡಬಹುದಿತ್ತು
ಬಂಡಿಪುರದ ಅರಣ್ಯದಲಿ ಪ್ರಾಣಿಗಳ ಆಟ ನಾ ನೋಡಬಹುದಿತ್ತು...
ಹುಟ್ಟಿದ್ದರೆ ಕರ್ನಾಟಕದಲಿ ಧುಮ್ಮಿಕ್ಕುವ ಜೋಗದ ಅಂದವನು,
ನೆಲೆಸಿದ್ದರೆ ಕರುನಾಡಲಿ ದೀಪಗಳ ಬೆಳಕಿಗೆ ಝಗಮಗಿಸುವ ಮೈಸೂರರಮನೆಯ ನಾ ನೋಡಬಹುದಿತ್ತು...
ಬೆಳೆದಿದ್ದರೆ ಕರುನಾಡ ಮಣ್ಣಿನಲಿ ಬೇಲೂರು ಹಳೆಬೀಡು
ಶ್ರವಣಬೆಳಗೊಳಗಳ ಅಂದವ ನಿತ್ಯ ನಾ ನೋಡಬಹುದಿತ್ತು.
ಅಲೆ -ಅಲೆಗಳಾಗಿ ಬಾಗಿ ಬಳುಕಿ ಝುಳು-ಝುಳೆಂದು ಅಕ್ಕನ ಕೂಗುತ್ತಾ
ಮೌನದಿ ಸಾಗುತ್ತಾ ಆಟವಾಡುವ ತುಂಗೆ-ಭದ್ರೆಯರ ನಾ ನೋಡಬಹುದಿತ್ತು!
ಕರುನಾಡ ಮಣ್ಣ ರುಚಿಯಲೇ ಬೆಳೆದು ಹಿಗ್ಗಿದ
ರಾಗಿ-ಜೋಳಗಳ ರೊಟ್ಟಿ-ಮುದೆದೆಗಳ ಸವಿದು ನಾ ನೋಡಬಹುದಿತ್ತು!
ಕನ್ನಡ ಕಾವೇರಿಯ ರುಚಿಯಾದ ನೀರು ಕುಡಿದು
ಅಂದದ ಹೃದಯವ ಪಡೆದು,ಆ ಬದುಕ ನಾ ನೋಡಬಹುದಿತ್ತು..
ಸುಗ್ಗಿ ಹಬ್ಬವ ಮಾಡಿ, ರಥದ ಚಕ್ರವ ದೂಡಿ,ಬೋಂಡ- ಬಜ್ಜಿ ಮೆಲ್ಲುತ್ತಾ
ತುಳುನಾಡ ಕಂಬಳದ ಓಟದ ಕೋಣಗಳನೂ ಹಿಗ್ಗಿ-ಹಿಗ್ಗಿ ನಾ ನೋಡಬಹುದಿತ್ತು!
ಪ್ರೇಮದಿ ಹಾಡಿ ಕುಣಿದು ನರ್ತಿಸುತಾ
ಕಂಸಾಳೆ, ಕರಗ, ಚೆನ್ನುಕುಣಿತ, ಹುಲಿ ಕುಣಿತವ ನಾ ನೋಡಬಹುದಿತ್ತು..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ