ಶುಕ್ರವಾರ, ಮಾರ್ಚ್ 23, 2018

196. 10 ಹಾಯ್ಕುಗಳು

ಹಾಯ್ಕುಗಳು

1.
ನನ್ನ ಮನಸು
ನೀ ಬಂದಮೇಲೆ ಎಲ್ಲೋ
ಕಾಣದಾಗಿದೆ

2.
ಮೌನವನೆಂದು
ಮಾತಾಗಿಸುವ ಶಕ್ತಿ
ಪ್ರೀತಿಗಿದೆಯಾ..

3.
ನನ್ನ ಬದುಕು
ನನ್ನ ಕೈಲಿದೆ ಚಕ್ರ
ಉರುಳುಗಾಡಿ.

4.
ಬರವಣಿಗೆ
ನಿತ್ಯ ಮೆರವಣಿಗೆ
ಸಾಗುತಿರಲಿ...

5.
ನನ್ನ ಲೇಖನಿ
ನಿಲ್ಲಲು ಇಚ್ಛಿಸದು
ಓಡುತಿಹುದು...

6.
ನೀ ನನ್ನವನು
ನನ್ನ ಬದುಕ ರಾಜ
ಸುವಿರಾಜಿಸು...

7.
ನನ್ನ ಬಾಳಲಿ
ನಗೆಯಾಗಿ ನೀ ಬಾರೇ
ಹೋಗದಿರೆಂದೂ..

8.
ಕನ್ನಡ ನಾಡು
ಭಾರತಾಂಬೆಯ ಸುತೆ
ಬೆಳೆಯುತಿದೆ...

9.
ಕುಡಿತ ಬಿಡು
ಸಿಗರೇಟು ತಂಬಾಕು
ಗುಟಕಾ ಬೇಡ..

10.
ಧರಣಿ ತಾಯಿ
ಫಸಲು ಕೊಟ್ಟು ನಮ್ಮ
ಸಲಹುತ್ತಾಳೆ.
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ