ಭಾವಗೀತೆ
ಮುನಿದ ನಲ್ಲೆಗೆ
ಮುನಿಸೇತಕೆ ನನ್ನ ಪ್ರಿಯೆ
ಬಳಿಬಾರದೆ ಏಕಿರುವೆ?
ಬಳಿಸಾರಲು ನಾಚಿಕೆಯೇ
ನಿನ್ನ ಸೇರಲು ಕಾದಿರುವೇ...
ಮುತ್ತಿನರಮನೆ ಕಟ್ಟುವೆ ಬಾ
ಮುದ್ದು ಹುಡುಗಿಯೆ ಕೋಪಬಿಟ್ಟು ಬಾ..
ನನ್ನ ನಲ್ಲೆಯೆ ನೀನೇ ನೀನಮ್ಮಾ
ನಿನಗೆ ಸಾಟಿಯು ಯಾರೂ ಇಲ್ಲಮ್ಮಾ...
ನಿನ್ನ ಕೆನ್ನೆಯ ಕೆಂಪು ಅದೇನು..
ಕಣ್ಣ ರೆಪ್ಪೆಯ ಕಂಪು ಅದೇನು..
ಬಾರೆ ಬಾರೆ ಬಳಿಗೆ ನೀ ಬೇಗ..
ನಿನಗಾಗಿಯೆ ನನ್ನ ಈ ರಾಗ...
ನನ್ನ ಜೀವದ ಜೀವ ನೀನಮ್ಮಾ
ನನ್ನ ಮನಸಿಸ ಭಾವ ನೀನಮ್ಮಾ..
ನನ್ನ ಚಿನ್ನದ ಗೊಂಬೆ ನೀ ಬಾರೆಯಾ
ನನಗೆ ರನ್ನದ ಸುಖವ ನೀ ನೀಡೆಯಾ..
ನನ್ನ ಒಲವಿನ ಮುದ್ದು ನಲ್ಲೆ
ನನ್ನ ಬಲವು ನೀನೇ ಅಲ್ವೇ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ