ಗಝಲ್-ಅವಳು
ನನ್ನ ಕಣ್ಣಲ್ಲಿ ಮೊದಲಾಗಿ ಕಂಡವಳು ಅವಳು
ನನ್ನ ಮನದಲ್ಲಿ ನೆಲೆ ನಿಂತವಳು ಅವಳು.
ನನ್ನ ಬಾಳ ಬಾಂದಳದಲಿ ಬರೆದ
ಬಣ್ಣದ ಬಳಪವಾದವಳು ಅವಳು...
ನನ್ನೊಡನೆಯೇ ಇದ್ದು ನನ್ನ ಬದುಕಲ್ಲಿ
ನನಗೆ ಸ್ಫೂರ್ತಿ ನೀಡಿದವಳು ಅವಳು.
ನೆನೆಸದೆಯೆ ನನ್ನ ಬಾಳಿಗೆ
ಜೊತೆಯಾಗಿ ಕತೆಯಾದವಳು ಅವಳು
ವಸಂತ ಮಾಸದಲಿ ವರುಷಧಾರೆಯನು
ವದನದಲಿ ವರಿಸಿಕೊಂಡವಳು ಅವಳು..
ಮುಗುಳುನಗೆಯ ಮುಗುದೆ ಸಿರಿ ಪ್ರೇಮ
ಸಂಪತ್ತು,
ನನ್ನ ಮನದ ರಾಣಿಯಾದವಳು ಅವಳು...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ