1. ಜನಪದ
ತಂದಾನಿ ತಾನೋ ತಾನಿ ತಂದಾನೋ
ನಮ್ಮಯ ಜನರು ಕಾಡನ್ನು ಕಡಿವರು
ಹೊಸ ಗಿಡವ ನೆಡದೆ ಬಾಳನ್ನೆ ಕೊಲುತಿಹರು....ತಂದಾನಿ
ಮಗು ಹೆಣ್ಣಾದರೆ ಬ್ರೂಣದಲೆ ಸಾಯಿಸೋರು
ಗಂಡಾದರೆ ಊರಿಗೆ ಸಿಹಿ ಹಂಚಿ ಬದುಕೋರು...ತಂದಾನಿ
ಪ್ಲಾಸ್ಟಿಕ್ ಬಳಕೆ ಬೇಡೆಂದರೆ ಕೇಳರು...
ಬಟ್ಟೆಯ ಚೀಲ ಸ್ಟೈಲಿಲ್ಲ ಎಂಬರು...ತಂದಾನಿ..
ನದಿನೀರ ಮಾಡಿಹರು ಕೊಳಚೆ, ಕೆಸರು
ವಿಷ ಹಾಕಿ ಸಾಯಿಸಿಹರು ಜಲಚರವ ಜನರು..ತಂದಾನಿ..
ಶುದ್ಧವಾದ ನೀರು ಬೇಕು ಕುಡಿಯೋದಕ್ಕೆ..
ಶುಚಿಯಾದ ಊಟ ಬೇಕು ತಿನ್ನೋದಕ್ಕೆ..ತಂದಾನಿ..
ನಮ್ಮಂತೆ ಇತರರು ಎನ್ನುವುದ ತಿಳಿದು
ತಾ ಬದುಕಿ ಇತರರಿಗೂ ಬದುಕಲು ಕಲಿಸಿ..ತಂದಾನಿ..
ಬಾಳೋಣ ಒಟ್ಟಾಗಿ ಎಲ್ಲರು ಇಂದು
ಒಗ್ಗಟ್ಟಲಿ ಬಾಳಿದರೆ ಎಲ್ಲರೂ ಒಂದು...ತಂದಾನಿ..
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ