ಶುಕ್ರವಾರ, ಮಾರ್ಚ್ 2, 2018

159. ಗಝಲ್-26

ಗಝಲ್
ಮನವರಿತು ಬಾಳುವ ಸಂಗಾತಿಯಿರಲು ಬಾಳು ತೆರೆದ ಬಾಗಿಲು.
ಭಯವಿರದ ಬದುಕಿರಲು ಬದುಕು ತೆರೆದ ಬಾಗಿಲು..

ವಂದನೆಗಳು ಸಿಗುತಿರಲು, ಮನಸು ಸುಸ್ಥಿತಿಯಲಿರಲು
ಬದುಕ ದಿನಗಳು ನವಿಲಿನಂತೆ ನರ್ತಿಸುತಿರಲು ಬಾಳು ತೆರೆದ ಬಾಗಿಲು..

ಮನವೆಂಬ ಮರ್ಕಟನ ಹತೋಟಿಯಲ್ಲಿಟ್ಟಿರಲು,
ಮನದ ಭಾವನೆಗಳ ಅರಿತು ನಡೆವವರಿರಲು ಬಾಳು ತೆರೆದ ಬಾಗಿಲು...

ಸತ್ಯದ ಮಂದಿ, ಬತ್ತದ ಧಾನ್ಯ ಮನೆಯೊಳಗಿರಲು
ಮಿಥ್ಯದ ಬಾಗಿಲು ಮುಚ್ಚಿರಲು ಬಾಳು ತೆರೆದ ಬಾಗಿಲು..

ನಿತ್ಯ ಪೂಜೆಯ ಫಲ-ತಾಂಬೂಲ ಸಿಗುತಿರಲು
ವ್ಯತ್ಯಾಸವಿರದೆ ಬದುಕು ನಡೆಸುತಿರಲು ಬದುಕು ತೆರೆದ ಬಾಗಿಲು...

ಬದುಕಲಿ ನಿರಂತರ ಬೇಕಾದ್ದು ಸಿಗುತಲಿ ಇರಲು
ಜೀವನ ಪಾವನ ಎನಿಸುತಲಿರಲು ಬಾಳು ತೆರೆದ ಬಾಗಿಲು..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ