*ನೀ ಕಲಿಸು ಬುದ್ಧಿಯಾ*
ಸಮಯಕ್ಕೆ ಸರಿಯಾಗಿ
ಪ್ರತಿನಿತ್ಯ ಬರುವುದ
ನೀ ಕಲಿಸು ಭಾರತೀಯರಿಗೆ...
ಕೈಗೊಂಡ ಕರ್ತವ್ಯ
ಪೂರ್ಣಗೊಳಿಸುವುದ
ನೀ ಕಲಿಸು ಕೆಲ ಭಾರತೀಯರಿಗೆ..
ನಾನೇ ದೊಡ್ಡದೆಂಬ
ಭ್ರಮೆಯ ಬಿಡಿರಂದು
ನೀ ತಿಳಿಸು ಭಾರತೀಯರಿಗೆ...
ನಾನಿಲ್ಲದೆ ಹಗಲಿರುಳಿಲ್ಲ,
ನೀವೇನು ಮಹಾ ಎಂಬ
ಸತ್ಯವ ಕಲಿಸು ಭಾರತೀಯರಿಗೆ..
ಕೆಲಸವ ತಪ್ಪಿಸದೆ
ಶಾಂತವಾಗಿ ಮುಗಿಸಿ, ಗುಣುಗದಿರಲು
ನೀ ಕಲಿಸು ಭಾರತೀಯರಿಗೆ..
ತಾನುರಿದರೂ ಜಗಕೆ
ಬೆಳಕ ನೀಡುವ ಗುಣವ
ನೀ ಕಲಿಸು ಭಾರತೀಯರಿಗೆ...
ಪರರಿಗುಪಕಾರ ನಮ್ಮ ಜೀವನ
ನಮಗಾಗಿ ಕೂಡಿಡುವುದಲ್ಲ
ಎಂಬ ಮಾತನು ನೀ ತಿಳಿಸು ಭಾರತೀಯರಿಗೆ...
ಎಷ್ಟೇ ಮೆರೆದರೂ
ಒಂದು ದಿನ ಸಾಯಲುಂಟು
ಇದ ನೀ ತಿಳಿಸು ಭಾರತೀಯರಿಗೆ...
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ