ಗಝಲ್
ನೀ ನನ್ನ ಮಗುವಲ್ಲಿ ನೋಡಿಕೊಂಡಂತೆ ನಾ ನೋಡಬಹುದಿತ್ತು
ಅಪ್ಪನನ್ನೂ ಅಕ್ಕರೆಯಿಂದ ನಿನ್ನಂತೆ ನಾ ನೋಡಬಹುದಿತ್ತು..
ಮೌನದಿಂದ ನಿನ್ನೊಡನೆ ಮಾತು ಕಲಿತಂತೆ
ಮಾತೃಭಾಷೆ ಸಂಯಮದಿ ತಿದ್ದಿ ಕಲಿತಂತೆ ನೋಡಬಹುದಿತ್ತು. .
ನಗುವರಳಿಸಿ ನೀ ಮನದಿ ನಕ್ಕಂತೆ
ನಿನ್ನ ನಗುವಲಿ ನನ್ನ ದುಃಖ ಮರೆತಂತೆ ನಾ ನೋಡಬಹುದಿತ್ತು..
ಕಪ್ಪಡರಿದ ನೀಗ್ರೋನ ತಾಯ ಮುಖದಲ್ಲೂ
ಮಗುವ ಕಂಡಾಗ ಪ್ರಜ್ವಲಿಸುವ ಬೆಳಕಂತೆ ನಾ ನೋಡಬಹುದಿತ್ತು..
ಹಾಲ್ಬೆಳದಿಂಗಳು ಚೆಲ್ಲೊ ಚಂದಿರನ ಹಾಗೆ
ಹಾಯಾದ ಮನದಿ ನಿನ್ನ ಮಗುವಂತೆ ನಾ ನೋಡಬಹುದಿತ್ತು..
ಬಿದ್ದಾಗ ಭಯಭೀತಳಾಗಿ ಓಡಿಬಂದು
ತಬ್ಬಿಕೊಂಡು ಮುತ್ತಿಟ್ಟಂತೆ ನಾ ನೋಡಬಹುದಿತ್ತು..
ಪ್ರೇಮದಿ ಈ ಪ್ರೇಮನ ನೀ ಹಗಲಿರುಳು
ಸಲಹಿ ಕಾಪಾಡಿಕೊಂಡಂತೆ ನಾ ನೋಡಬಹುದಿತ್ತು..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ