15. ನಮ್ಮ ಶಿವ
ನಮ್ಮ ಈಶ ದೇವನು
ಬೇಡಿದ ಕೊಡುವ ರಕ್ಷಕನು
ತಪ್ಪು ತಿದ್ದಿ, ಕಲಿಸಿ ಬುದ್ದಿ
ರಕ್ಷಿಪ ತಂದೆ ಮಹಾದೇವನು//
ನಮ್ಮ ಲಿಂಗ ದೇವನು
ಪೂಜೆ ಪಡೆವ ಧನ್ಯನು
ಕರುಣೆ ನೀಡಿ ವಚನ ಪಡೆದು
ವರವನೆಲ್ಲ ಭಕ್ತಗೆ ನೀಡುತ್ತಿದ್ದು.
ನಮ್ಮ ಮಹೇಶ್ವರ ದೇವನು
ಅರ್ಧನಾರಿಯ ಹೊತ್ತವನು
ನಾರಿಯ ಕಷ್ಟವ ತಿಳಿದು ಗೌರವಿಸಿದನು
ದೇವರ ದೇವ ಮಹಾದೇವ ಇಲ್ಲಿಹನು……
ಸದಾಶಿವ ದೇವನು
ಮೂರ್ತಿಗಳ ಪಡೆವನು
ಜನಕೆ ಊಟವ ಒದಗಿಸಿ ಕೊಟ್ಟು
ಕೊಡದವವರ ಶಪಿಸುವನು
ನಮ್ಮ ರುದ್ರ ದೇವನು
ರೌದ್ರಾವತಾರವ ತಾಳುವನು
ಹಣೆಗಣ್ಣ ಬಿಟ್ಟು ಮದನನನ್ನೆ ಕೊಂದವನು
ಶತ್ರುಗಳನ್ನು ಕಣ್ಣಲ್ಲೆ ಕೊಲ್ಲುವನು...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ