ಭಾವಗೀತೆ- ತಳಮಳ
ನನ್ನೆದೆಯ ಒಳಹೊಕ್ಕು
ಕುಂತವ್ಳೆ ನನ್ನವ್ಳು..
ನನ್ನವ್ವಗ್ ಬ್ಯಾಸಾರ
ಕೊಟ್ಟೇನ, ಏನ್ಮಾಡ್ಲಿ?
ಆ ಕಡೆ ಹಡೆದಾಕಿ,
ಈ ಕಡೆ ಕೈ ಹಿಡಿದಾಕಿ-
ಯಾರನ್ನ ಕೇಳೋಣ
ಯಾರನ್ನ ನೋಡೋಣ..
ಒಂದಾಗಿ ಅಂದರ
ಆಗಲೊಲ್ಲರು ಇವರು
ಪ್ರತಿದಿನ ಕಚ್ಚಾಟ
ಹೋಗೀನಿ ತಲೆಕೆಟ್ಟು...
ಯಾರದ್ದೂ ತಪ್ಪಿಲ್ಲ
ವಾದ್ಸೋದ ಬಿಡೋದಿಲ್ಲ..
ದೇವ್ರೇ ನೀ ಹೇಳು ನಾನೇನ್ಮಾಡ್ಲಿ?
ಹಡೆದಿವ್ನಿ, ಸಾಕಿವ್ನಿ
ಕೂಲಿ ನಾಲಿ ಮಾಡಿ
ಖುಷಿಯನ್ನ ಪಟ್ಟಿವ್ನಿ
ಮಗನ ಗುಣ ನೋಡಿ..
ಚಾಲಾಕಿ ಹೆಂಡ್ತಿ
ಬಂದ್ಲಲ್ಲ ಮಾಟಗಾತಿ
ಮಗನ ನನ್ನಿಂದ
ಕಿತ್ಹಾಕಿ ಬಿಟ್ಲಲ್ಲ...
ಯಾಮಾರ್ಸಿ ಮಗನ
ಕರ್ಕೊಂಡು ಹೋದ್ಲಲ್ಲ..
ವಯಸ್ಸಾಗೋ ಹೊತ್ನಲ್ಲಿ
ನಾ ಒಂಟಿ ದೇವ್ರೆ
ಕಷ್ಟ ಪಟ್ಟು ಸಾಕಿದ್ಮಗ
ಹೆಂಡ್ತಿ ಪಾಲಾದ್ನಲ್ಲ...
ಏನ ಮಾಡಲಿ ತಂದೆ
ಯಾರ್ಗೆ ನಾ ಯೋಳ್ಳಿ?
ನೀನೇ ಕಾಯೋ ಸಿವ್ನೆ
ಈ ಮುದಿ ಜೀವಾನ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ