ಶುಕ್ರವಾರ, ಮಾರ್ಚ್ 2, 2018

154. 5 ಹನಿಗಳು -ಒಲವು

ಒಲವು
-ಚುಟುಕುಗಳು

1.ಒಲವು

ನಿನ್ನ ಮ್ಯಾಲ
ನನಗೊಲವು ..
ಕಂಗ್ಲೀಷ್ನಾಗ ಹೇಳ್ಳೇನ್?
ನಿನ್ ಮ್ಯಾಲ
ನನಗ ಲವ್ವೋ ಲವ್ವು..!!!

2. ಚುಟುಕು

ಒಲವ ಬಗ್ಗೆ
ಬರೆದೆ ಚುಟುಕ..
ಊಟಕೆ ಹಾಕಿದಂತಿತ್ತು
ಉಪ್ಪು ಚಿಟಿಕಿ..
ಹೆಂಡತಿ ಕುಟುಕಿ,
ತಲಿಮ್ಯಾಲ ಮೊಟಕಿ...

3. ನನ್ನವಳು

ನನ್ನೊಲವ ಕವನ
ಕಂಡು ನನ್ನ ಮನ
ಮನೆ ಬೆಳಗಿದ ಮಡದಿ
ಮಂಡೆಗೆ ಮಂಡಕ್ಕಿ
ಮಸೆವುದೊಂದೆ ಬಾಕಿ...!!

4.ಒಲವು

ನನ್ನೊಲವ ತಿಳಿಸಹೋದೆ
ಪಕ್ಕದ್ಮನೆ ಹುಡುಗಿಗೆ..!
ಎದ್ದು ಬಿದ್ದು ಓಡಿದೆ
ಅವರಪ್ಪನ ಗುಡುಗಿಗೆ!!!

5. ವಿಪರ್ಯಾಸ

ನಾನು ಒಂದು ಕವನ ಬರೆದೆ
ಒಲವಂತ ಹೆಸರಿಸಿದೆ
ಗೆಳೆಯನಿಗೆ ತೋರಿಸಿದೆ
ಅದೀಗ ಅವನ ಪ್ರೇಮಪತ್ರವಾಗಿದೆ
ಆ ಹುಡುಗಿ ಕೈಲಿದೆ...
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ