ಶನಿವಾರ, ಮಾರ್ಚ್ 10, 2018

180. ಕವನ-ನಾವು ಹೀಗೇ

ಕವನ-ನಾವು-1

ಚೊಕ್ಕವಾದ ಮನೆಯಿಹುದು ಆದರೂ
ಚಂದದ ಪಕ್ಕದ ಮನೆಯ ಮೇಲೆ ಕಣ್ಣು...
ಅಂಜದ ಮಡದಿಯಿಹಳು ಆದರೂ
ಗೆಳೆಯನ ಚಂದದ ಮಡದಿ ಮೇಲೆ ಕಣ್ಣು..
ಬುದ್ಧಿವಂತ ಮಕ್ಕಳಿಹರು ಆದರೂ
ಟಿವೀಲಿ ನೋಡಿದ ಮಕ್ಕಳ ಮೇಲೆ ಕಣ್ಣು..
ಇಷ್ಟಪಟ್ಟ ಮೊಬೈಲಿಹುದು ಆದರೂ
ಗೆಳೆಯನ ಹೊಸ ಮೊಬೈಲ್ ಮೇಲೆ ಕಣ್ಣು..
ತಿರುಗಾಡಲು ಕಾರಿಹುದು ಆದರೂ
ಭಾವನ ಮೊನ್ನೆ ಕೊಂಡ ಕಾರಿನ ಮೇಲೆ ಕಣ್ಣು..
ಚಿನ್ನದ ಸರವಿಹುದು ಆದರೂ
ತಮ್ಮ ಕೊಂಡ ಹೊಸ ಚೈನ್ ಮೇಲೆ ಕಣ್ಣು..
ಮನೇಲಿ ದೊಡ್ಡ ಟಿವಿಯಿಹುದು ಆದರೂ
ನೆಂಟರ ಮನೆಯ ಸ್ಮಾರ್ಟ್ ಟಿವಿ ಮೇಲೆ ಕಣ್ಣು..
ಅಲಮಾರು ತುಂಬಾ ಸೀರೆಗಳಿಹವು ಆದರೂ
ಪಕ್ಕದ ಮನೆಯಕ್ಕ ತಂದ ಸೀರೆ ಮೇಲೆ ಕಣ್ಣು...
ತೋಟದ ತುಂಬಾ ಫಲಗಳಿಹವು ಆದರೂ
ಪಕ್ಕದ ತೋಟದ ತೆಂಗಿನ ಫಸಲಿನ ಮೇಲೆ ಕಣ್ಣು..
ಒಳ್ಳೆ ಕಂಪನಿಯ ಕೆಲಸವಿಹುದು ಆದರೂ
ಬೇರೆ ಕಂಪನಿಯ ಮೇಲೆ ಕಣ್ಣು..
ಜೀವನವೇ ಹೀಗೆ ಪಕ್ಕಕ್ಕೆ ಹೊರಳುವ ಕಣ್ಣು..
ಅದಕಡಿಗರ ಮಾತು ಇರುವುದ ಬಿಟ್ಟು
ಇರದುದರೆಡೆಗೆ ತುಡಿವುದೇ ಜೀವನವೆಂದು...
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ