ಹಾಯ್ಕುಗಳು
1
ನನ್ನದಲ್ಲವು
ಈ ಲೋಕ ಯಾರದಲ್ಲ
ದೇವರ ಸೃಷ್ಠಿ!!
2.
ಮಾವನ ಮನೆ
ಮಾನವ ಜೊತೆಯಲಿ
ಮಗಳ ಖುಷಿ...
3.
ನಾಯಿ ನಿಯತ್ತು
ಮಾನವನಿಗೆ ಎಂದು
ಬರಬಹುದು?
4.
ವನ ಉತ್ಸವ
ಪ್ರತಿದಿನ ಬೇಡವೇ
ಒಂದೇ ದಿನವೇ..
5.
ನನ್ನ ನಲ್ಲೆಗೆ
ಒಲ್ಲೆನೆನಲಾರೆ ನಾ
ಎಲ್ಲೆಯಿಲ್ಲದೆ....
6.
ವನ ದೇವತೆ
ಬರಿದಾಗದಿರಲಿ
ಜೀವಕಳೆದು....
7.
ನೆಲ ಜಲದ
ಇಂಪು ತಂಪಾದ ಕಂಪು
ಪಸರಿಸಲಿ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ