ಕವನ
ನೀ ಬಂದೆ ನನ್ನ ಬಾಳಲಿ
ಆ ದೇವರು ನೀಡಿದ ವರ
ನೀ ನನ್ನ ಬಾಳ ಬಂಗಾರ..
ಬಂದೆ ಬರಡಾದ ಬಾಳಿಗೆ
ತಂದೆ ನಗೆಗಡಲ ದೀವಿಗೆ..
ನೀ ನಾನಾಗಿ ನಾ ನೀನಾಗಿ
ನನ್ನ ಬಾಳಿಗೆ ನೀ ಯೋಗಿ...
ವಿರಮಿಸಿದೆನ್ನ ಬಾಳ ಬನದಿ
ವರವಿತ್ತ ವಾತ್ಸಲ್ಯ ರೂಪದಿ..
ನಿನ್ನಿಂದಲ್ಲವೆ ನಿಸರ್ಗದಂಥ ಪ್ರೀತಿ
ನೀ ಜೊತೆಗಿರೆ ನವರಸದ ಸಂಪ್ರೀತಿ
ನವ್ಯ ಬಾಳಿಗೆ ಭವ್ಯ ವರ ನೀನು
ಸವ್ಯಸಾಚಿಯಂದದಿ ಬಂದೆ ನೀನು...
ವರವ ಬೇಡೆನು ದೇವರಲಿ ಇನ್ನೇನು
ಇರುವ ಹೀಗೇ ಬದುಕು ಹಾಲು-ಜೇನು
ನಮ್ಮ ಬಾಳ ಪಯಣದಲಿರಲಿ ಚೆಲುವು
ಸದಾ ಕಾಯುತಿರಲಿ ನಮ್ಮೊಲವು...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ