ಗಝಲ್
ದಿನಾ ಬೆಳಗಿಂದ ಸಂಜೆವರೆಗೆ ಪ್ರತಿ ಕೆಲಸದಲಿ ತಪ್ಪು ಹುಡುಕಿ ಬೈಯ್ಯುತ್ತಿದ್ದ ಅತ್ತೆಗೆ ಏನಾಗಿತ್ತು?
ಕಸ ಗುಡಿಸಿ, ಪಾತ್ರೆ ತೊಳೆಯುವಾಗಲೂ ವಟಗುಡುತ್ತಿದ್ದ ಅತ್ತೆಗೆ ಏನಾಗಿತ್ತು?
ಬಟ್ಟೆ ಒಗೆದದ್ದು ಸರಿಯಾಗಲಿಲ್ಲವೆಂದು ಜರಿದು ಸಿಟ್ಟಿನ ಭರದಿ
ತನ್ನ ಬಟ್ಟೆಯ ತಾನೇ ಕಲ್ಲಿಗೆ ಕುಕ್ಕುತ್ತಿದ್ದ ಅತ್ತೆಗೆ ಏನಾಗಿತ್ತು?
ದಿನಕೆ ಹತ್ತತ್ತು ರೊಟ್ಟಿಯ ತಿಂದು ಅಡ್ಡಡ್ಡ ಬೆಳೆದಿದ್ದ
ಮಾಂಸದಡುಗೆಯ ಕ್ಷಣದಲೆ ಮುಗಿಸುತ್ತಿದ್ದ ಅತ್ತೆಗೆ ಏನಾಗಿತ್ತು?
ಬೆಳಗಿನ ಐದು ಗಂಟೆಗೇ ಎದ್ದು ಮನೆಯವರಿಗೆ ಮಂಗಳಾರತಿ ಹಾಡಿ
ಬಂದ ಹೋದವರ ಜತೆಯೆಲ್ಲ ನನ್ನ ದೂರುತಲಿದ್ದ ಅತ್ತೆಗೆ ಏನಾಗಿತ್ತು?
ಎಲೆ ಅಡಿಕೆ ಮೆಲ್ಲುತ್ತಿದ್ದು, ಹೊಗೆಸೊಪ್ಪನ್ನು ಬಾಯಿಗೆ ತುರುಕುತ್ತ
ಬೆಳಗಿನಿಂದ ಬೈಗಿನವರೆಗೆ ತೋಟದಲಿ ದುಡಿದ ಅತ್ತೆಗೆ ಏನಾಗಿತ್ತು?
ನಾ ಮೇಲು, ಇತರರೆಲ್ಲಾ ಭೂಲೋಕದಿ ಕೀಳು
ಬುದ್ಧಿ ಇರುವವಳು ನಾನು,ನೀವೆಲ್ಲಾ ಮೂರ್ಖರೆಂದು ಬೀಗುತ್ತಿದ್ದ ಅತ್ತೆಗೆ ಏನಾಗಿತ್ತು?
ಬರವಿರದ ಕಾಫಿ,ತಿಂಡಿ,ಅನ್ನ,ಸಾರು ಪಲ್ಯ ತಾಂಬೂಲ
ಅಡಿಗೆ ಮನೆ ಖಾಲಿ ಇಡದೆ ಬಡಿಸುತಲಿದ್ದ ಅತ್ತೆಗೆ ಏನಾಗಿತ್ತು?
ಮುಂಜಾನೆಯೇ ಮನೆಯವರಿಗೆಲ್ಲ ಬಿ.ಪಿ ಏರಿಸಿ
ಹಳೆಯದು ಉಳಿದುದನೆಲ್ಲ ದಾನ ಮಾಡಿ ಶ್ರೇಷ್ಠರೆನಿಸಿದ್ದ ಅತ್ತೆಗೆ ಏನಾಗಿತ್ತು?
ಪ್ರೇಮನ ಪ್ರೇಮದಿ ಮುದ್ದಾಗಿ ಬೆಳೆಸಿದ್ದ ತಿಳಿಯದೆ
ಮಾತು ಮಾತಿನಲು ಚುಚ್ಚುತ್ತಾ ಗೊರಗುಡುತ್ತಿದ್ದ ಅತ್ತೆಗೆ ಏನಾಗಿತ್ತು?
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ