ಕವನ-1
ನಾನು ಮಹಿಳೆ
ನನ್ನ ನೋವು ನನಗೆ ಇರಲಿ
ಬೇರೆಯವಗೆ ಬರದೆ ಇರಲಿ..
ನನ್ನ ಕತ್ತು ಹಿಚುಕಿ ಅವರು
ಕೊಲ್ಲದೇನೆ ಹೀಗೆ ಇರಲಿ..
ನನ್ನ ಜೀವ ನನಗೆ ಬೇಕು
ಮಗುವ ಸಾಕೊ ತಾಳ್ಮೆ ಇರಲಿ..
ನನ್ನ ಬದುಕಲಿ ಆಟವಾಡಿ
ಬಲಿ ತೆಗೆದುಕೊಂಡ ರಾಕ್ಷಸ ಇರಲಿ..
ಮಹಿಳೆಯ ಬದುಕು ಚೆನ್ನಾಗಿರಲಿ
ನನ್ನ ಹಾಗೆ ಬಾಡದೆ ಇರಲಿ..
ದೇವಿಯೆಂದು ಪೂಜಿಸುವರು
ಕಾಮುಕರಿಗೆ ನೀರು ಸಿಗದೆ ಇರಲಿ..
ತಾಯಿ, ಮಗಳು, ಅಕ್ಕ-ತಂಗಿ
ಸಹೋದರಿಯಂಥ ಭಾವವಿರಲಿ..
ನನ್ನ ಹಾಗೆ ಬದುಕು ಬವಣೆ
ಬರಡಾದ ಬೆಂಗಾಡು ಆಗದಿರಲಿ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ