ಭಾವಗೀತೆ
ಬೇಕಾಗಿದೆ
ಸುಟ್ಟು ಬಿಡಲು ಜಾತಿ ಬೇಧ
ಅಗ್ನಿ ತುಣುಕು ಬೇಕಿದೆ
ಒಡೆದ ಮನವ ಮತ್ತೆ ಬೆರೆಸೆ
ಅಂಟು ಸ್ವಲ್ಪ ಬೇಕಿದೆ...
ಹೊಸತು ಭಾವ ನಳ ನಳಿಸೆ
ನವೀನ ಹೃದಯ ಬೇಕಿದೆ
ನವವಸಂತ ಹೊಸ ಚಿಗುರಿಗೆ
ಹೊಸ ಕೋಗಿಲೆ ಬೇಕಿದೆ..
ಮಂದಮತಿಯ ಮನುಜ ಕುಲದ
ಮತ್ಸರ ಅಳಿಸಬೇಕಿದೆ
ಮನ್ವಂತರದಿಂದ ಕಿಚ್ಚು ತಂದ
ಮತಗಳಳಿಯ ಬೇಕಿದೆ..
ಜನಮನವ ಒಟ್ಟುಮಾಡೊ
ಜನರ ಭಾವ ಬೇಕಿದೆ
ಜಾತಿ ಮತ ಕಟ್ಟಳೆಗಳ
ಹೊತ್ತೊಯ್ಯೊ ಗಾಳಿ ಬೇಕಿದೆ..
ದೇಶಕಾಗಿ ದುಡಿವ ಮನಕೆ
ಸ್ವಾತಂತ್ರ್ಯ ಬೇಕಿದೆ
ಸಮಾಜ ಸೇವೆ ಮಾಡೊ ಜನಕೆ
ಸಹಾಯ ಹಸ್ತ ಬೇಕಿದೆ..
ಹೊಸತು ಬೇಡೊ ಮಂದಿಗಿಂದು
ಶಾಂತಿ ಸಹನೆ ಬೇಕಿದೆ
ಅಂಧ ಮನವ ತಿಕ್ಕಿ ತೊಳೆವ
ಮಾರ್ಜಕ ಬರಬೇಕಿದೆ..
@ಪ್ರೇಮ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ