ಬದುಕ ಮೆರವಣಿಗೆ-ಕವನ
ನಾ ಹುಟ್ಟಿದೆ
ಶುರುವಾಯಿತು..
ಬದುಕ ಮೆರವಣಿಗೆ..
ಶಾಲೆಗೆ ಹೊರಟೆ
ಪ್ರಾರಂಭವಾಯಿತು
ಕಲಿಕಾ ಮೆರವಣಿಗೆ...
ಕುಣಿಯುತ್ತಾ ಓದಿ
ಮತ್ತೆ ಮತ್ತೆ ಕಲಿತೆ
ಪೆನ್ಸಿಲಲ್ಲಿ ಬರವಣಿಗೆ..
ನಮಿಸುತ್ತಾ ಬಗ್ಗಿ ನಡೆದೆ
ವಿದ್ಯಾಮಾತೆ ಸರಸ್ವತಿಗೆ..
ಮನೆಯಲ್ಲಿ ಧಾವಿಸಿದೆ
ಪ್ರೀತಿಯ ಅಮ್ಮನೆಡೆಗೆ..
ಮದುವೆಯಾದೆ,
ಹೆಜ್ಜೆ ಇಟ್ಟವಳೊಂದಿಗೆ
ಅಡಿಯಿಟ್ಟೆ ನನ್ನದಾಂಪತ್ಯದ
ಬದುಕ ಮೆರವಣಿಗೆಗೆ..
ಮಕ್ಕಳು ಹುಟ್ಟಿದರು
ಸಂಸಾರ ನೌಕೆಯ
ಎಳೆಯ ಹೊರಟೆ
ವೇಗದ ಜವಾಬ್ದಾರಿಯೆಡೆಗೆ..
ಎಲ್ಲವ ಮುಗಿಸಿ
ನಗುತ ಬಾಳಿ
ಕೈ ಎಲ್ಲಾ ಖಾಲಿ
ಕೊನೆಯ ಮೆರವಣಿಗೆ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ