ಭಾವಗೀತೆ
ನೀನು-ನಾನು
ನಿನ್ನ ಪ್ರೇಮಕೆ ನಾ ಧನ್ಯ ಕೃಷ್ಣ
ನಿನ್ನೊಡನೆ ಸಲ್ಲಾಪಕೆ ನಾ ಸೋತೆ ಕಾಂತೆ//
ನೀನಿರಳು ನನ್ನ ಬಾಳು ಹೂವಂತೆ ಕೇಳೋ
ನೀ ಬರಲು ನನ್ನ ಬದುಕು ಜೇನಂತೆ ಕೇಳೇ //
ನಿನ್ನೊಡನೆ ದಿನ-ರಾತ್ರಿ ಒಂದೆ ಪ್ರಿಯಾ
ನನ್ನ ಬಾಳ ಪುಷ್ಪ ನೀ, ನನ್ನ ಜೀವದ ಜೀವ//
ನಿನ್ನ ಮಾತು, ನಿನ್ನ ಸಾಂಗತ್ಯ ನನ್ನದೇ ಪ್ರಿಯ
ನಿನ್ನ ಜೊತೆಗೆ ತಿಳಿಯದು ಹೋಗುವುದೇ ಸಮಯ//
ಹೂ ಮುಡಿಸೋ ನಿನ್ನ ಕೈಯೂ ಪುಷ್ಪದಂತಿಹುದು
ನಿನಗಾಗೆ ಹೂವನ್ನು ನಾ ತಂದಿಹುದು//
ನನ್ನ ಜಡೆಗಾಗೆ ತಂದಿರುವೆಯಾ ಓ ನನ್ನ ನಲ್ಲ
ನನ್ನ ಪ್ರೀತಿ ಧಾರೆಯೆರೆವೆ ನಿನಗಾಗೆ ಎಲ್ಲಾ//
ನನ್ನ ಕೈಯ ಕನ್ನಡಿಯ ಪ್ರತಿಬಿಂಬ ನೀ
ನನ್ನ ಕೈಯ ಕೊಳಲ ಗಾನ ನಿನಾದ ನೀ//
ನನ್ನರಸ ನನ್ನ ಜೀವ ನಿನಗಾಗೆ ಕೇಳು
ನಿನ್ನ ಪಡೆದ ನಾ ಧನ್ಯ ನನ್ನ ರಾಣಿ ಕೇಳು//
ಹೂ ಮುಡಿಸೆ ನನ್ನ ಜಡೆಗೆ ನಾ ಹರ್ಷ ಪಡುವೆ
ನಿನಗೆ ಹೂ ಮುಡಿಸುತ ನಾ ಖುಷಿಯ ಪಡೆವೆ//
ನನ್ನ ಬಾಳು ಎಂದೆಂದು ನಿನಗಾಗೆ ನಲ್ಲ
ನನ್ನ ಜೀವದ ಗೆಳತಿ ನಿನಗಾಗಿ ನಾನಿರುವೆನಲ್ಲ//
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ