ಯುಗಾದಿ ಬಂತು
ಯುಗಾದಿ ಬಂತಪ್ಪ ಯುಗಾದಿ
ಹೊಸ ವರುಷದ ಆದಿ...
ಸಿಹಿಯನು ಹಂಚೋದು ಯುಗಾದಿ ಕಹಿಯನೂ ಹಂಚೋದು ಯುಗಾದಿ...
ಸಿಹಿ ಕಹಿ ತಿಂದು ಸುಖವಾಗಿರಿ ಎನುತ../ಯುಗಾದಿ/
ಬೇವನ್ನು ಸವಿವುದು ಯುಗಾದಿ
ಜೊತೆಗೆ ಬೆಲ್ಲವ ಮೆಲ್ಲೋದು ಯುಗಾದಿ...
ಬೇವು-ಬೆಲ್ಲದ ರುಚಿಯ ಒಟ್ಟಿಗೆ ನೀಡುತ್ತ/ಯುಗಾದಿ/
ಹೊಸ ಅಕ್ಕಿ ತಿನ್ನುವ ಯುಗಾದಿ...
ಹಳೆ ವರುಷ ಮರೆಯುವ ಯುಗಾದಿ
ಹಳತೆಲ್ಲ ಮರೆತು ಹೊಸ ಹರುಷ ತರುವ/ಯುಗಾದಿ/
ಹೊಸಬಟ್ಟೆ ತೊಡುವಂಥ ಯುಗಾದಿ
ಹೊಸ ಸಂವತ್ಸರದ ಯುಗಾದಿ..
ನವನವೀನ ಗಾದಿಯ ತರುವಂಥ/ಯುಗಾದಿ/
ನವ ಉಲ್ಲಾಸ ತರುವಂಥ ಯುಗಾದಿ
ನವ್ಯ ಕಾವ್ಯ ಬರೆವಂಥ ಯುಗಾದಿ
ಬಂಗಾರದಂಥ ಬಾಳನ್ನು ಬೆಳಗುವ/ಯುಗಾದಿ/
ರಾಗ- ನವ್ವಾಲೆ ಬಂತಪ್ಪ ನವ್ವಾಲೆ
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ