ಶುಕ್ರವಾರ, ಮಾರ್ಚ್ 23, 2018

200. ಕವನ-ನವೋದಯ

ನವೋದಯ

ಚೈತ್ರ ಮಾಸ ಬಂದಿತು ಹರುಷವನ್ನು ತಂದಿತು
ನವವಸಂತ ನವ ಯುಗಾದಿ ನವೋದಯವ ತಂದಿತು...

ಮಾವಿನ ಮರದ ಚಿಗುರ ತಳಿರು
ತೋರಣವನುಕಟ್ಟಿತು
..ಲ..ಲ..ಲಾ..ಲ..ಲ..ಲಾ..
ಮಿನಿ ಮಾವಿನ ಮಿಡಿಗಳೆಲ್ಲ ಉಪ್ಪಿನ ಕಾಯಿ ಬಡಿಸಿತು..//ಚೈತ್ರ//

ತರಕಾರಿಯ ರಾಜನಾದ ನುಗ್ಗೆ ಸಾಂಬಾರು ಬಡಿಸಿತು.
ಲ..ಲ..ಲಾ..ಲ..ಲ..ಲಾ..
ಬದನೆ ಬಂದು ಜೊತೆಗೆ ನಿಂತು ತಾನೂ ಸ್ವಲ್ಪ ತಿನಿಸಿತು..//ಚೈತ್ರ//

ಲಿಂಬೆ ಬಂದು ಪಾನೀಯ ತಂದು
ಬಡಿಸಿ ಖುಷಿಯ ಪಟ್ಟಿತು..
ಲ..ಲ..ಲಾ..ಲ..ಲ..ಲಾ
ದಾಳಿಂಬೆ ಬಂದು ತಾನೂ ಬೆರೆತು
ಸಂತಸವ ಹಂಚಿತು//ಚೈತ್ರ//

ಮಾಗಿ ಬಂದು ಬಿಟ್ಟಿತು ಮನಸು ಸುಖವ ಕಂಡಿತು
ಲ..ಲ..ಲಾ..ಲ..ಲ..ಲಾ..
ಮನದ ಮಾತು ಜನಕೆ ಹಂಚಿ
ನಾಲಗೆ ನಲಿದು ಕುಣಿಯಿತು//ಚೈತ್ರ//
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ