ಹಾಯ್ಕುಗಳು..
1.ನನ್ನ ನೆರಳೇ
ನನ್ನ ಮನದ್ವಾರದ
ಪರದೆ ನೀನು!
2 . ನನ್ನ ನೆರಳೆ
ನನ್ನ ಭಾವನೆಗಳ
ಬಳ್ಳಿಯೇ ನೀನು!
3. ನನ್ನ ನೆರಳೆ
ನನ್ನ ಹೃದಯವಿದು
ನಿನಗೇ ಕೇಳು!
4. ನನ್ನ ನೆರಳೇ
ನನ್ನೊಲುಮೆಯ ಬಳ್ಳಿ
ನನ್ನುಸಿರು ನೀ..
5. ನನ್ನ ನೆರಳೇ
ನಾ ನಿನ್ನುಸಿರು ಕಣೇ
ನೀ ನನ್ನುಸಿರು!
6. ನನ್ನ ನೆರಳೇ
ನನ್ನ ಬಳಿಯೇ ಇರು
ತೊರೆಯದಿರು!
7. ನನ್ನ ನೆರಳೇ
ನನ್ನೆದೆ ಬಡಿತದ
ತುಡಿತವು ನೀ...
8. ನನ್ನ ನೆರಳೇ
ನನ್ನ ಬಿಸಿಯುಸಿರ
ಬಿರುಗಾಳಿ ನೀ....
9. ನನ್ನ ನೆರಳೇ
ನನ್ನೊಲುಮೆಯ ಬಳ್ಳಿ
ನಿನ್ನಂದದಲ್ಲಿ...
10. ನನ್ನ ನೆರಳೇ
ಬರಲಾರೆಯ ನೀನು
ನನ್ನೊಂದಿಗೆಯೇ....
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ