ಶುಕ್ರವಾರ, ಮಾರ್ಚ್ 23, 2018

201. ಗಝಲ್-21

1. ಗಝಲ್

ತಾಯಿ ಪ್ರಕೃತಿಯ ಮಡಿಲನ್ನು ಪ್ಲಾಸ್ಟಿಕ್ ನಿಂದ ಮುಕ್ತವಾಗಿ ಮಾಡಬಹುದಿತ್ತು,
ಮಾತೆ ಭಾರತಿಯ ಎದೆ ಮೇಲೆ ಕರಗದ ಕಸವ ಎಸೆಯೆನೆಂಬುದ ಪ್ರಮಾಣವಾಗಿ ಮಾಡಬಹುದಾಗಿತ್ತು.

ನೇಸರನ ಎಳೆ ಬಿಸಿಲ ಮುತ್ತಿಡುವ ಕ್ಷಣವನ್ನು ಆಸ್ವಾದಿಸುವವರಾಗಿ
ಪರಿಸರಕ್ಕೆ ಹಾನಿಯಾಗದ ಹಾಗೆ ಅದ ಬಳಸುವೆನೆಂಬ ಕೆಲಸ ಸರಿಯಾಗಿ ಮಾಡಬಹುದಾಗಿತ್ತು.

ಮಳೆ -ಗಾಳಿಯು ಜಗಕೆಂದೂ ಸರಿಯಾಗಿ ಸಿಗುವಂತೆ ಮಾಡುವವರಾಗಿ
ಹಸಿರ ಸಿರಿ ಕೆಡದ ಹಾಗೆ ರಕ್ಷಿಸುವುದ  ಕೆಲಸವಾಗಿ ಮಾಡಬಹುದಾಗಿತ್ತು.

ಕಪ್ಪು-ಕೆಂಪು ಮಣ್ಣ ಸಾರವನು ಮುಂದಿನ ಪೀಳಿಗೆಗೂ ಉಳಿಸುವವರಾಗಿ
ಮಣ್ಣ ಕಣ-ಕಣಕ್ಕೂ ವಿಷ ಬೆರೆಸೆನೆಂಬ ಮಾತನ್ನು ನಿಜವಾಗಿ ಮಾಡಬಹುದಾಗಿತ್ತು.

ಕೀಟನಾಶಕ, ಕ್ರಿಮಿನಾಶಕಗಳ ಉಪಯೋಗವ ತಡೆದವರಾಗಿ
ಸಾಬೂನು, ಮಾರ್ಜಕ, ರಾಸಾಯನಿಕಗಳ ಉಪಯೋಗ ಕಡಿಮೆಯಾಗಿ ಮಾಡಬಹುದಾಗಿತ್ತು.

ಪರಿಸರ ಜಾಥಾ, ಬೀದಿ ನಾಟಕ, ಕಥೆ, ಕವನ ಬರಹಗಾರರಾಗಿ
ಪರಿಸರ ಉಳಿಸುವ ವಿಚಾರಗಳ ಜನರಿಗೆ ಪಾಠವಾಗಿ ಮಾಡಬಹುದಾಗಿತ್ತು.

ತಾಯ ರಕ್ಷಣೆ ಮಕ್ಕಳೆಲ್ಲರ ಹೊಣೆ ಎಂದರಿತ ಪ್ರಜ್ಞಾವಂತರಾಗಿ
ಪ್ರೇಮದಿ ಪರಿಸರ ಉಳಿಕೆ-ಬಳಕೆಯ ಮಾಡುವುದ ಎಲ್ಲರಿಗೂ ಮಾದರಿಯಾಗಿ ಮಾಡಬಹುದಾಗಿತ್ತು...
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ