ಕವನ-ಶಿವ
ರಾವಣನೆಂಬ ರಾಕ್ಷಸ ಭಕ್ತಿಗೆ ಮೆಚ್ಚಿದೆ
ತನ್ನ ಆತ್ಮಲಿಂಗವನ್ನೆ ಅವನ ಕೈಲಿ ಇರಿಸಿದೆ..
ಗಣಪತಿಯ ಶಿರವನೆ ನೀ ಬೇಧಿಸಿದೆ,
ಮತ್ತೆ ಆನೆ ಶಿರವ ತಂದು ಜೋಡಿಸಿದೆ...
ಹಾಲಾಹಲ ಗಂಟಲಲ್ಲಿ ಇರಿಸಿದೆ
ಇಟ್ಟು ನೀಲಕಂಠನಾಗಿ ಮೆರೆದೆ..
ಮುಕ್ಕಣ್ಣನಾಗಿ ಜಗದಿ ಮೆರೆದಿಹೆ
ಮದನನ್ನು ಕಣ್ಣಿನಲ್ಲೆ ಸುಟ್ಟು ನೀ ಬೆಳಗಿಹೆ..
ಹರಿಯ ನೀನು ವರಿಸಿಕೊಂಡು ನಲಿದಿಹೆ
ಅಯ್ಯಪ್ಪನ ಪಡೆದು ನೀ ಬೆಳೆದಿಹೆ..
ದುರ್ಗೆಯನ್ನು ವರಿಸಿ ನೀನು ನಗುತಿಹೆ
ಆದಿಶಕ್ತಿ ಮಾಯೆಯ ನಿನ್ನೊಳಗಿರಿಸಿಹೆ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ