[4/4, 7:42 AM] Prem: 1.ಸರಾಯಿ ಸಂತೆ
ಕತ್ತಲು ತುಂಬಿದ ಬ್ರಹ್ಮ ನನ್ನ
ಹಣೆಯ ಗೀಚಿದ ಮಹಾರಾಯ
ಹೊಣೆಯ ಮರೆತು ಕುಡಿಸಿಬಿಟ್ಟ
ಮೂರು ಬಾಟ್ಲಿ ಸಾರಾಯ.
ಈ ಲೋಕದಿ ನಡೆಸಿಬಿಟ್ಟೆ
ನಾನು ನನ್ನ ಕಾರು ಬಾರು.
ಕುಡಿದ ಮತ್ತಿನಲ್ಲಿ ಗಲ್ಲಿ
ತುಂಬಾ ತಂಟೆ ತಕರಾರು.
ಆರು ಬಾಟ್ಲಿ ಹೆಂಡ ಸುರಿಸಿದೆ
ನನ್ನ ಹೊಟ್ಟೆಯೊಳಗೆ
ಮೂರು ಬಟ್ಟೆಯಾಗಿ ಕಾಣುತೈತೆ
ಲೋಕವೆಲ್ಲಾ ತಲೆಕೆಳಗೆ.
ಸಾಲ ಮಾಡಿ ಶೂಲಕೆ ಹೆದರಿ
ಸಾಗಲಿಲ್ಲಾ ಈ ನಮ್ಮ ಬದುಕು
ಹೆಂಡ ಕುಡಿಯೊ ನಮಗೆಲ್ಲಿದೆ
ಇದಕ್ಕಿಂತ ಒಳ್ಳೆ ಬದುಕು.
ಸರಾಯಿ ತುಂಬಿದ ಸಂತೆಯಲ್ಲಿ
ಸಾರಾ ಸಗಟು ಎಷ್ಟು
ಕುಡಿಯೊಕಂತ ಬರೊರೆಲ್ಲಾ
ನಮ್ಮ ಮುಂದಿ ಚಿಪು ಗೆಸ್ಟು.
ತಳ್ಳಿ ನೂಕಿ ತಳ್ಳಿ ನೂಕಿ
ಬಂದೆ ಬಂತು ನಮ್ಮ ಗಾಡಿ
ಮೊತ್ತಿನ ಸುಖವ ತಂತು
ಸರಾಯಿ ಸಂತೆಯೊಳಾಡಿ.
ಹೊಟ್ಟೆಯೊಳಗಿನ ಹೆಂಡ
ನನ್ನ ತಲೆಯ ತೊಳೆದೈತೆ
ಮುದ್ದು ಮಾಡಿ ನನ್ನ
ಗಾಡಿ ಕೀಲು ಎಳೆದೈತೆ.
ಗುಂಡು ಹಾಕಿದ ಕುಡುಕರ ಕಂಡ್ರೆ
ಸಿಡುಕಿ ಬಿಳ್ತಾರೆ ಈ ಜನ
ಕುಡುಕೆ ಹೊಡೆದು ಲಟಿಕೆ ಮುರಿದು
ಚಿವುಟಿ ಹೋಗ್ತಾರೆ ಮೈ ಮನ.
ನಿತ್ಯ ಕುಡಿಯೊರು ಕಂಡ್ರೆ
ಜನರೆಕಯ್ಯಾ ಸಿಡಿ ಮಿಡಿ
ಮಾಡಿದ ತಪ್ಪಿಗೆ ನನ್ನ ಮನೆಯ
ಕಿಟಕಿ ಗಾಜು ಪುಡಿ ಪುಡಿ.
ನೆತ್ತಿ ಮ್ಯಾಲೆ ಇರುವ ಸೂರ್ಯ
ಹೊತ್ತಿ ಉರಿದಂತೆ
ಕುಡಿದ ಮೊತ್ತಿನಲ್ಲಿ ನನ್ನ ಮಯ್ಯ
ಹತ್ತಿ ಇಳಿದಂತೆ.
ಗುಂಡು ಹಾಕಿದ ಕುಡುಕನಿಗೆ
ಎಂಥಾ ಗತ್ತು ಗಮ್ಮತ್ತು
ರೆಗಾಡಿ ರಗಳೆ ತಗಿತಾಳೆ
ನನ್ನೆಣ್ತಿ ಈ ಹೊತ್ತು.
ಗುಂಡು ಹಾಕಿ ತುಂಡು ತಿಂದು
ಓಣಿ ತುಂಬಾ ಓಲಾಡಿದೆ
ಇದ್ದ ಕಡಿಕೆ ಹೊನ್ನು ವರಹ
ಗಾಳಿಗೆ ತೂರಿ ಲೋಲಾಡಿದೆ.
ಹ್ಯಾಟು ಬೂಟು ಪ್ಯಾಂಟು
ನಮಗೆಕಯ್ಯಾ ಈ ಕೋಟು
ಕೋಟಿಗಟ್ಲೆ ಬಾಟಲಿ ಇದ್ರು
ಕುಡಿಯೊರಿಗ್ಯಾಕಯ್ಯ ಈ ರೇಟು.
ಮಾರಿಕಣಿವೆ ರಾಮಸ್ವಾಮಿ ಹಿರಿಯೂರು.
7353229329.
ಕವನ ಚೆನ್ನಾಗಿದೆ. ಆದರೆ ಇಂದಿನ ಪದ ರೋಮಾಂಚನ ಎಲ್ಲೂ ಕಾಣುತ್ತಿಲ್ಲ. ಸುಮ್ಮನೆ ಬರೆದು ಹಾಕಿದಂತಿದೆ. ಗ್ರಾಮ್ಯ ಭಾಷೆ ಸುಂದರವಾಗಿದೆ.
[4/4, 4:46 PM] Prem: 2. ಅಭಿಯವರ ಹೋಗಿ ಬಂತು ಶ್ರಾವಣ
ಚಲನಚಿತ್ರದ ರಾಗಕ್ಕೆ ಬರೆದ ಕವನ. ಉತ್ತಮ ಪರಿಕಲ್ಪನೆ. ಕವಿವರ್ಯರ ಪದ ಪ್ರಯೋಗಗಳು ಉತ್ತಮವಾಗಿ ಮೂಡಿಬಂದಿವೆ. ಕಳ್ಳ ಮನಸು, ಬೆರಳ ಕುಂಚ ಮೊದಲಾದ ರೂಪಕಗಳು ಮನಸೂರೆಗೊಂಡವು. ಕಣ್ಣಲ್ಲೆ ಕನಸ ಗೀಚಿ..ಈ ಸಾಲು ಇಷ್ಟವಾಯಿತು.
ಕರಗೋಗುವೆ/ಕರಗ್ಹೋಗುವೆ ಆಗಬೇಕಿತ್ತೇನೋ.
ಉತ್ತಮ ಗೀತೆ.
@ಪ್ರೇಮ್@
[4/4, 4:54 PM] Prem: 3. G.T.R ದುರ್ಗಾ ರವರ ಹಾಲ್ಗಡಲಂತೆ ತುಂಗೆ..
ತುಂಗೆಯ ಹುಟ್ಟೂರಾದ ಕುದುರೆಮುಖದಲ್ಲೆ ಬಾಲ್ಯ ಕಳೆದ ನನಗೆ ನಿಮ್ಮ ಕವನ ನನ್ನ ಬಾಲ್ಯಕ್ಕೆ ಕರೆದೊಯ್ಯಿತು. ಭದ್ರೆಯ ನೀರಿನಲ್ಲಿ ಕೈಕಾಲು ಬಿಟ್ಟು ಮೈಚೆಲ್ಲಿ ಮನಸಾರ್ ಈಜಿ, ಮನದಣಿದ ಕ್ಷಣಗಳ ಮರೆತಿಲ್ಲ. ಶಬ್ದವೇ ಇರದೆ ಕದ್ದು ಓಡುವ ಅಕ್ಕನನ್ನು ಬುರ್ರನೆ ಕರೆಯುತ್ತಾ ಓಡುವ ತಂಗಿ ತುಂಗೆ -ಭದ್ರೆಯ ನೀರು ಅದೆಷ್ಟು ತಣ್ಣಗಿರುತ್ತದೆ ಎಂದು ತಿಳಿಯಬೇಕಾದರೆ ಈ ಬೇಸಿಗೆ ರಜೆಯಲ್ಲೊಮ್ಮೆ ಶೃಂಗೇರಿ, ಕುದುರೆಮುಖ ನೋಡಿಬನ್ನಿ. ವಾವ್! GTR ಇದರ ಅನುಭವ ಸವಿದಿರುವರೋ ತಿಳಿಯದು. ತುಂಗಭದ್ರೆಯಂತೂ ಮಳೆನಾಡ ಮಕ್ಕಳೇ. ಕಲರವ ಚೆನ್ನ. ನೆನೆದರೆ ಮನ ಜಾರಿಬಿಡುತ್ತದೆ.
ಕವನದಲಿ ವರ್ಣನೆ ಚಂದವಿದೆ.
ಭಾಷಾ ಚಿಹ್ನೆಗಳ ಬಳಕೆ ಬೇಕಿತ್ತು. ಮೇಕಪ್ ಇಲ್ಲದ ಮುಖದಂತಾಗುವುದು ಚಿಹ್ನೆಗಳಿಲ್ಲದ ಕವಿತೆ. ರೋರರ್ ಆಗಬೇಕಿತ್ತು, ಕಟ್ಟಗೆ-ಕಡ್ಡಿಗೆ/ಕಟ್ಟಿಗೆ ಆಗಬೇಕಿತ್ತೇನೋ. ಬರುವಾಳು ರಾಗಕ್ಕೆ ಓಕೆ, ಆದರೆ ಬರೆಯುವಾಗ ಬರುವಳು ಎಂದಾಗಬೇಕಲ್ಲವೇ?
ಉತ್ತಮ ಕವನಕ್ಕೆ ಖುಷಿಪಟ್ಟೆ, ಧನ್ಯವಾದಗಳು.
@ಪ್ರೇಮ್@
[4/4, 4:58 PM] Prem: 4. ರಾಮಸ್ವಾಮಿಯವರ ಇಂಥವಳಾಗಲಿ ಹೆಣ್ತಿ
ಗ್ರಾಮ್ಯ ಭಾಷೆ ಹೊತ್ತ ಸುಂದರ ಸರಳ ಕವನ.
ತಾನು ವರಿಸಿದ ಬಾಳ ಸಂಗಾತಿ ಹೀಗಿರಲಿ, ಹೀಗಿರಬೇಕಿತ್ತು, ಹೀಗಾಗಲೆಂಬ ಭಾವ ಎಲ್ಲರದು. ಅದರ ಮೇಲೆ ಬಂದ ಕವನ ಸುಮಧುರ.
ನಾ ಕಾಣ್ತಿ-ಗೊತ್ತಾಗಿಲ್ಲ, ನೀ ಕಾಣ್ತಿ ಅಲ್ಲವೇ?
ವತ್ಸಲ್ಯ-ವಾತ್ಸಲ್ಯ ತಾನೇ?
ನಲಿಬೇಕಲ್ವಾ- ನಲಿಸಬೇಕಲ್ವಾ ಆಗಿದ್ದರೆ ಚೆನ್ನಾಗಿತ್ತೇನೋ.
ಕವನಕ್ಕೆ ಅಭಿನಂದನೆಗಳು..
@ಪ್ರೇಮ್@
[4/4, 5:02 PM] Prem: 5. MSK ಯವರ ಅನಾಥಾಶ್ರಮ
ಒಳ್ಳೆಯ ವಿಷಯವ ಆರಿಸಿಕೊಂಡಿರುವಿರಿ ಸರ್. ಕವನದ ಮೂಲಕ ಸಮಾಜಕ್ಕೊಂದು ಸಂದೇಶವಿದೆ. ಉತ್ತಮ ದೃಷ್ಟಿ ಹೊತ್ತ ಕವನ ಸುಮಧುರ! ನೈಜತೆಯ ಮೆರಗಿದೆ.
ಒಗೆದ್ಯಾರ-ಒಗೆದಾರ ಅಲ್ಲವೇ!?
ರೋಮಾಂಚನ ಟೈಪಿಂಗ್ ತಪ್ಪಾಗಿದೆ ನೋಡಿ.
ಉತ್ತಮ ಕವನಕ್ಕೆ ಶುಭಾಶಯಗಳು..
@ಪ್ರೇಮ್@
[4/4, 5:05 PM] Prem: 6. ಸುರೇಶ್ ಸರ್ ಅವರ ರಾಗರಂಗು
ಕವಿಯೊಬ್ಬ ಯಾವ ರೀತಿ ಕವಿತೆ ಹೆಣೆಯಲೂ ಬಲ್ಲ ಎಂಬುದಕ್ಕೆ ನೈಜ ಉದಾಹರಣೆಯಿದು. ನಾವೆಲ್ಲ ನಿತ್ಯ ನೋಡುವ ಕೆಂಪು ಬಣ್ಣದ ಬಗೆಗೊಂದು ಉತ್ತಮ ಕವನ. ವಾವ್..ಬ್ಯೂಟುಫುಲ್!!
ಉತ್ತಮ ರೂಪಕಗಳ ಮಿಲನ, ಮನದ ರಂಗಸ್ಥಳ ಇಷ್ಟವಾಯ್ತು.
ತಾಮಸಿಕ ಅಂದರೇನು? ಗೊತ್ತಾಗ್ಲಿಲ್ಲ.ಅರ್ಥ ತಿಳಿಸಿ ಸರ್.
ಅಭಿನಂದನೆಗಳು.
@ಪ್ರೇಮ್@
[4/4, 5:13 PM] Prem: 7. ದಾಸ್ ತಮ್ಮೇನಹಳ್ಳಿಯವರ ನಮಗಿಂತ
ಪುಟಾಣಿ ಮಕ್ಕಳೊಡನೆ ಕಳೆವ ಕ್ಷಣ ಕ್ಷಣವೂ ಚಂದ. ಸಣ್ಣ ಹುಡುಗಿಯಾಗಿದ್ದಾಗಲಿಂದ ಈಗಲೂ ಕೂಡ ನನಗೆ ಮಕ್ಕಳೊಡನೆ ಬೆರೆಯುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಪೊಲೀಸರು ಕಳ್ಳರನ್ನು ನೋಡಿ ನೋಡಿ ಒರಟರಾದರೆ, ಶಿಕ್ಷಕರು ಮಕ್ಕಳನ್ನು ನೋಡುತ್ತಾ ಮಕ್ಕಳಂತಾಗಿಬಿಡುತ್ತಾರೆ. ಮೋಸ, ವಂಚನೆ ತನ್ನಿಂದ ತಾನೇ ದೂರಾಗಿ ಗೆಳೆಯರು, ಆಟ, ಪಾಠದ ಕಡೆ ಮನ ಜಾರುತ್ತದೆ. ಮಕ್ಕಳೊಡನಿದ್ದು ಮಕ್ಕಳ ಪರಿಶುದ್ಧ ಪ್ರೀತಿ ಪಡೆವವರೇ ಧನ್ಯರು! ಈ ನಿಟ್ಟಿನಲ್ಲಿ ಬರೆದ ಸುಂದರ ಕವನ.
ಕಟ್ಟಮನ=ಕೆಟ್ಟಮನವೇ?
ಸುತ್ತಿಲಿನ=ಸುತ್ತಲಿನ ಆಗಬಹುದೇ?
ಭಾಷಾ ಚಿಹ್ನೆ ಬಳಸಿ,ಸಾಧ್ಯವಾದರೆ ಬೇರೆ ಶೀರ್ಷಿಕೆ ಕೊಡಿ.. ಅಂದಗೊಳಿಸಿ.
ಧನ್ಯವಾದಗಳು.
@ಪ್ರೇಮ್@
[4/4, 5:14 PM] Prem: 8. ಕುಮುದರವರ ಮುಗ್ಧತೆ..
ವಾವ್ ಚೂಪರ್ ಸಾಲುಗಳು. ಮುದ್ದು ಮುದ್ದಾದ ಮಕ್ಕಳ ಕವನದಂತಿದೆ. ಉತ್ತಮ, ಪ್ರಾಸಭರಿತ ಪದ ಸಾಲುಗಳು. ಚೆನ್ನಾಗಿ ಬರೆದಿರುವಿರಿ..
ಧನ್ಯವಾದಗಳು..
@ಪ್ರೇಮ್@
[4/4, 5:17 PM] Prem: 9. ಶಶಿರೇಖಾರವರ ನೋವು
ನೆಗೆಟಿವ್(ಋಣಾತ್ಮಕ) ಶೇಡ್ ಹೊಂದಿದ ಕವನ. ಕೆಲವರು ನೋವಲ್ಲೂ ನಲಿವ ಕಂಡರೆ, ಬದುಕನ್ನು ನೋವಲ್ಲೇ ಕಾಣುವ ಮನದ ಬಗೆಗಿನ ಸಾಲುಗಳು. ಉತ್ತಮ ಕವನ. ಉತ್ತಮ ಪದರಂಗಿತ.
ಭಾಷಾ ಚಿಹ್ನೆ ಬಳಸಿ ಕವನಕ್ಕೆ ಅಲಂಕಾರ ಮಾಡಿ.
@ಪ್ರೇಮ್@
[4/4, 5:20 PM] Prem: 10. ಗೌರಿಪ್ರಿಯರ ಶಿವನೊಲುಮೆ
ಗೌರಿಪ್ರಿಯರಿಂದು ಶಿವಪ್ರಿಯರಾಗಿ ಉದ್ದನೆ ಕವನ ಬರೆದಿಹರು. ಉತ್ತಮವಾಗಿದೆ ನಿಮ್ಮ ಕಥನಕವನ.
ಶಿವನೇ ಈ ಭೂಮಿಯ ಜನರ ಬಗೆಗೆ ನಿರುತ್ತರನಾಗಲು ಇನ್ನೆಲ್ಲಿಯ ಪರಿಹಾರ ಗುರುವೇ!
ಕವನ ಸೂಪರ್..
@ಪ್ರೇಮ್@
[4/4, 5:24 PM] Prem: 11. ಸಂಸಾರ ಕವನದ ಹರಿಕಾರ ಸಿದ್ದುಸ್ವಾಮಿ..
ಉತ್ತಮ ಕವನಕ್ಕಾಗಿ ತಲೆಬಾಗುವೆ.ಅರಳಿ ನಿಂತ ಪುಷ್ಪದಂತೆ ಬಿರಿದಿದೆ ಕವನಸುಮ.ರೂಪಕ ಬಯಕೆ ಬಳ್ಳಿ ಚಿಗುರಲು-ಇಷ್ಟವಾಯ್ತು.
ನೀಬರಲು-ಎರಡು ಪದಗಳು. ನೀ ಆದಮೇಲೆ ಸ್ವಲ್ಪ ಅಂತರವಿರಲಿ.
ಬೇದ-ಅಲ್ಪಪ್ರಾಣ, ಮಹಾಪ್ರಾಣಾಕ್ಷರ ಗುರುತಿಸಿ.ತಪ್ಪಾಗಿದೆ.
ಭಾಷಾ ಚಿಹ್ನೆಗಳ ಬಳಸಿ, ಮತ್ತಷ್ಟು ಅಂದಗೊಳಿಸಿ..
@ಪ್ರೇಮ್@
[4/4, 5:28 PM] Prem: 12. ಮೊಗೇರಿ ಶೇಖರ್ ಸರ್ ರ ದೀಪ
ವಾವ್ ... ಸಣ್ಣದೊಂದು ಕವನ, ಸರಳ, ಶುದ್ಧ ಸಮೃದ್ಧ. ಸರಿಗಮಪ ದಲ್ಲಿ ಆದ್ಯ ಉಡುಪಿ ಬಂದು ಹಾಡಿ ಹೋದ ಹಾಗಾಯ್ತು.
ಅಬ್ಬೇಪಾರಿ ಪದದ ಅರ್ಥವೇನು ಗುರುಗಳೇ? ನನಗೆ ತಿಳಿದಿಲ್ಲ.
@ಪ್ರೇಮ್@
[4/4, 5:35 PM] Prem: 13. ಈಶ್ವರ್ ರವರ ವಸಂತ ಬಂದ...
ಸರ್ವ ಕವಿಗಳ ಸಾರ್ವಕಾಲಿಕ ಸಾಮಾನ್ಯ ವಿಷಯ ವಸಂತ. ಅಂತೆಯೇ ಇಂದಿನ ದಿನ ಕವಿವರ್ಯ ನೀವೂ ಈ ವಿಷಯ ಬಿಟ್ಟಿಲ್ಲ. ಉತ್ತಮ ಭಾವಗೀತೆಯ ತಲ್ಲಣ.
ಅಂತ್ಯಪ್ರಾಸಕ್ಕೆ ಒತ್ತುಕೊಟ್ಟ ಕವನ ಅನಿಸಿತು. ಚಲುವು=ಚೆಲುವು ಯಾವುದು ಸರಿ?
ಬೃಂಗ-ಭೃಂಗ? ರಂಗವ ಪದದ ಬದಲು ರಂಗನು ಅಂದಿದ್ದರೆ ಚೆನ್ನಾಗಿತ್ತೇನೋ..
ರೋಮಾಂಚನವಿ-ರೋಮಾಂಚನವಿದು ಎನ್ನಬಹುದು. ಭಾಷಾ ಚಿಹ್ನೆ ಬಳಸಿದರೆ ಇನ್ನೂ ಉತ್ತಮವಿತ್ತು.
@ಪ್ರೇಮ್@
[4/4, 5:40 PM] Prem: 14. ರತ್ನ ಮೇಡಂ ರವರ ಮೊದಲ ಮಳೆ.
ಮೇಡಂ ನಾ ನಿಮ್ಮ ಫ್ಯಾನ್...
ಭಾವಗೀತೆಗಳ ರಾಣಿ ನೀವು. ಅದೆಲ್ಲಿಂದ ಪದಸಂಪತ್ತಿನ ಕಟ್ಟುಗಳ ಹೊತ್ತು ತರುವಿರೋ ತಿಳಿಯದು. ಆಹಾ.. ಮೊದಲ ಮಳೆಯ ವರ್ಣನೆಗೆ ಮನ ಸೋತಿದೆ! ನಾ ನಿಮ್ಮ ವಿದ್ಯಾರ್ಥಿಯಾಗಬೇಕೆಂದಿರುವೆ. ರೂಪಕ, ಉಪಮೆ, ಪರ್ಸಾನಿಫಿಕೇಶನ್ ಗಳು ಕವಿತೆಯ ಸಾಲುಗಳಲ್ಲಿ ಮೇಳೈಸಿ ನಿಂತು ಕೈಬೀಸಿ ಕರೆದಿವೆ.
ಭಾಷಾ ಚಿಹ್ನೆಗಳಿದ್ದರೆ ಕವನದ ಅಂದ ಮತ್ತೂ ಹೆಚ್ಚುತ್ತಿತ್ತು!
ವಾವ್...
@ಪ್ರೇಮ್@
[4/4, 5:48 PM] Prem: 15. ರವೀಶರವರ ತಾಯಿ ದೇವರು.
ವಾವ್ , ಭೂಮಿಯ ಮೇಲೆ ವಾಸಿಸುವ ಸಕಲ ಜೀವಿಗಳ ಮಮತೆಯ ತೊಟ್ಟಿಲು. ಪ್ರೀತಿಯ ಕಣಜ. ತಾಯಿಯೆಂಬ ಪದವೇ ಉನ್ನತ. ಆ ತಾಯಿಯ ಮೇಲೆ ಅದೆಷ್ಟು ಕವನ ಬರೆದರೂ, ಅದ್ಯಾವ ಪದಗಳಲಿ ವರ್ಣಿಸಿದರೂ ಸಾಲದು. ಉತ್ತಮವಾದ ಕವನಕ್ಕೆ ತಮಗಿದೋ ಶುಭ ಹಾರೈಕೆಗಳು.
ಅಮ್ಮನ ಪ್ರೀತಿಯ ಕಣ್ಣಿಗೆ ಕಟ್ಟುವಂತೆ ವರ್ಣಿಸಿರುವಿರಿ.
ಸಲಹಿದಂತ, ಮಾಡಿದಂತ-ಇಲ್ಲಿ ಮಹಾಪ್ರಾಣ ಥ ಅಲ್ಲವೇ?
ನಿನಗು-ನಿನಗೂ ಯಾವುದು ಸರಿ?
@ಪ್ರೇಮ್@
[4/4, 5:55 PM] Prem: 16. ಅನುಪಮ ಅನುಪಲ್ಲವಿ ಅವರ ಆಪ್ತದಪ್ಪುಗೆ
ಶೀರ್ಷಿಕೆಯೇ ಖುಷಿಕೊಟ್ಟಿತು! ಡಿಫರೆಂಟಾಗಿದೆ. ಕವನ ಸೂಪರ್. ಮನತಟ್ಟಿತು. ಕವನ ನನಗೊಂದು ಆಪ್ತದಪ್ಪುಗೆ ನೀಡಿದಂತಾಯಿತು ಅನುಪಲ್ಲವಿಯೆಂಬ ಹೃದಯವೇ..
ಕಂಬನಿಯ ಹೊರಿಸಬೇಡ=ಒರೆಸಬೇಡ, ತರಿಸಬೇಡ?
ಇಟ್ಟಿರುತ್ತೆನೆ-ಇಟ್ಟಿರುತ್ತೇನೆ ಆಗಬೇಕಿತ್ತೇನೋ,
ಇರುತ್ತಿನಿ-ಇರುತ್ತೀನಿ ಗ್ರಾಮ್ಯ ಪದ, ಯಾವುದು ಸರಿ?
@ಪ್ರೇಮ್@
[4/4, 5:57 PM] Prem: 17. ಚಂದ್ರು ಸರ್ ರವರ ಶರಣಾಗತ
ತುಂಬಾ ಢಿಫರೆಂಟಾಗಿ ಬರೆದಿರುವಿರಿ ಸರ್ ಇಂದು.
ಇಷ್ಟು ದಿನದ ನಿಮ್ಮ ಸ್ಟೈಲ್ ಗಿಂತ ಭಿನ್ನವಾದ ಕವನ, ಬರಹ! ಇಷ್ಟವಾಯ್ತು ನನಗೆ.
ಬರವಣಿಗೆಯ ಶೈಲಿ ಉತ್ತಮ. ಉತ್ತಮ ಕವನ ಎನ್ನದಿರಲು ಸಾಧ್ಯವೇ ಇಲ್ಲ.
@ಪ್ರೇಮ್@
[4/4, 6:00 PM] Prem: 18. ಜಯಂತಿ ಸುನಿಲ್ ರವರ ಚೋ(ಚೂ)ರಿ
ಸಿಂಪ್ಲಿ ಸೂಪರ್ಬ್ ಕವನ.
ನಲ್ಲನಿಗೆ ನಲ್ಲೆಯ ಪದಗಳ ಆಟ. ಇಷ್ಟವಾದವು ಸಾಲುಗಳು.
ಭಾಷಾ ಚಿಹ್ನೆ ಬಳಸಿ, ಮತ್ತೂ ಅಂದಗೊಳಿಸಿ.
@ಪ್ರೇಮ್@
[4/4, 6:03 PM] Prem: 19. ವಿಜಯ ಪದ್ಮಶಾಲಿಯವರ ವಸಂತಾಗಮನ
ಮತ್ತೊಮ್ಮೆ ವಸಂತಾಗಮನ! ಕವಿಗಳ ಪ್ರೀತಿಯ ವಸಂತ ಕವಿಮನಗಳೆಲ್ಲರಲಿ ಮನೆಮಾಡಿಹನು. ರೂಪಕಗಳ ಕಟ್ಟಿಕೊಂಡ ಉತ್ತಮ ಭಾವಗೀತೆ. ಪರ್ಸಾನಿಫೈಡ್ ಸಾಲುಗಳು ಇಷ್ಟವಾದವು. ಉತ್ತಮ ಕವನ, ಕವಿತೆ, ಭಾವಗೀತೆ.
@ಪ್ರೇಮ್@
[4/4, 6:19 PM] Prem: 20 . ಸುಧಾರಾಜು ಅವರ ಒಲವೆಂದರೇನು ಚೆಲುವ..
ಒಲವೆಂದರೇನೆಂದು ಒಲವಿಂದಲಿ ಬರೆದ ನಿಮ್ಮೀ ಕವನವ ಒಲವಿಂದೋದಿ, ಚೆಲುವ ಮಾತ್ರವಲ್ಲ, ಪ್ರೇಮಾ ಕೂಡ ಒಲವ ಬಗೆಗೆ ಚೆಲುವಿನಿಂದಲಿ ತಿಳಿದಂತಾಯ್ತು!
ಅದ್ಭುತ ಸಾಲುಗಳ ಕವನವದು ಸುಂದರ!
ಉಪಮೆ, ರೂಪಕಗಳ ಹಾರ!
ಮನತಟ್ಟಿದ, ಅಮಲೇರಿಸಿದ ಕವಿತೆಯದು!
ಸೂಪರ್ ರೀ ಮೇಡಂ ಅವ್ರೇ ...
@ಪ್ರೇಮ್@
[4/4, 6:23 PM] Prem: 21. ರೋಮಾಂಚನದೀವಿಗೆ -ರಮೇಶ್ ಎಂ ಬಡಿಗೇರ್
ವಾವ್, ಕನ್ನಡ ತಾಯಿಯ ಆರಾಧನೆಯೇ ರೋಮಾಂಚನ! ಅದ್ಯಾವ ಪರಿ ಪರಿಯಲಿ ಕವಿಗಳು ರೋಮಾಂಚನ ಗೊಂಡಿರುವರೋ... ನಾಡಿನ ಸುಂದರ ವರ್ಣನೆ ಹೊತ್ತ ಗೀತೆಯ ಅಂದ ಸೂಪರ್. ಪ್ರಾಸಬದ್ಧ ಸಾಲುಗಳು. ಅಂದವಾಗಿದೆ.
ಕನ್ನಡಾರಸಬಾನ=ಏನು ಸರ್?
ಸಾಧನೆಗಳದು-ಸಾಧನೆಗಳಿಗೆ ಆದರೆ ಚೆನ್ನಿತ್ತೇನೋ?
ಉತ್ತಮ ಆಶಯ ನಿಮ್ಮದು...
@ಪ್ರೇಮ್@
[4/4, 6:27 PM] Prem: 22. ಶಶಿವಸಂತರವರ ನನ್ನೊಲವಿನ ಚಂದಿರ
ಉತ್ತಮ ಭಾವಗೀತೆಯ ಕಟ್ಟಿರುವಿರಿ ಇಂದು. ಮನ ಕುಣಿಯಿತು, ಹೃದಯ ತಣಿಯಿತು, ನೀವು ತಚಂದಿರನ ನೋಡಿ ರೋಮಾಂಚನಗೊಂಡರೆ ನಾ ನಿಮ್ಮ ಕವಿತೆಯನೋದಿ ರೋಮಾಂಚನಗೊಂಡಿರುವೆ.
ನನಮನವ ಎರಡು ಪದ, gap ಇರಲಿ ನಡುವೆ.
ಕಳಿಸಿಹನು ಎರಡು ಬಾರಿ ಬಂದಿದೆ ಕೊನೆಯಲ್ಲಿ. ಕೊನೆಯ ಪದ ತಿಳಿಸಿಹನು ಎಂದರೆ ಆದೀತೇನೋ ಎಂದು ನನ್ನ ಅಭಿಪ್ರಾಯ.
[4/4, 6:30 PM] Prem: 23. ಅಂಬುಜಾರವರ ಶೀರ್ಷಿಕೆ ಕೊನೆಯಲ್ಲಿ ಬಂದ ದರ್ಪಣ ಸುಂದರಿ..
ವಾವ್.. ಉತ್ತಮ ವಿಷಯದ ಬಗ್ಗೆ ಕವನ ಬರೆದಿರುವಿರಿ, ಪದಸಂಪತ್ತು ಹೇರಳವಾಗಿದೆ, ಉದಾತ್ತ ಸಾಲುಗಳು. ಪ್ರಾಸಬದ್ಧವಾಗಿಯೂ ಇರುವ ನಿಮ್ಮ ಅಂದದ ಕವನವನ್ನು ನಿಮ್ಮ ಟೈಪಿಂಗ್ ಎರರ್ಸ್ ಹಾಳುಗೆಡವುತ್ತವೆ. ದಯವಿಟ್ಟು ತಿದ್ದಿಕೊಳ್ಳಿ.
ಶಿಲಾ ಬಾಲಿಕೆ, ಏಳೇಳು, ಗೀಚಿದ್ದೆ ಈ ಪದಗಳು ತಪ್ಪಾಗಿ ಟೈಪಾಗಿವೆ..
ಉತ್ತಮ ಕವಿಭಾವ, ಕವನ, ವಿಷಯ.
@ಪ್ರೇಮ್@
[4/4, 6:32 PM] Prem: 24. ಸರ್ಪ ಭೂಷಣರ ಚಿಗರಿ ಬಸ್ ಹಿಂಗ್ ಬಂದು ಹಂಗೆ ಫಾಸ್ಟ್ ಹೋದಂಗಾಯ್ತು. ದ.ಕ.ದ ನಮಗೆ ಟಾಪ್ ನಲ್ಲಿ ಕೂತು ಹೋದ ಜನರ ನೋಡಿದ್ದ ಬಿಟ್ಟರೆ ಅದರಲ್ಲಿ ಕೂತ ಅನುಭವವಿಲ್ಲ, ಕವನದಲ್ಲೆ ಅನುಭವ!
[4/4, 6:36 PM] Prem: 25. ಸಾವಿತ್ರಿಯವರ ನಿವೇದನೆ
ಇದೊಂದು ಬಾಕಿಯಾಗಿತ್ತು ಅಂದುಕೊಳ್ತಾ ಇದ್ದೆ, ಅಗೋ ಬಂತು! ವಾವ್ ಖುಷಿಯಾಯ್ತು! ಭಕ್ತಿಗೀತೆ!!!ವಾವ್ ರೋಮಾಂಚನವೋ ರೋಮಾಂಚನ!ಭಕ್ತಿರಸದೊಂದಿಗೆ ಮುರಳಿಯ ಕೊಳಲಿನ ಸಂಗೀತರಸವನ್ನೂ ಚಿಕ್ಕದಾಗಿ, ಚೊಕ್ಕದಾಗಿ ಉಣಬಡಿಸಿರುವಿರಿ ಮೇಡಂ.
ಮುರಲಿ,ಮುರಳಿ ಯಾವುದು ಸರಿ?
ಮಾರನಯ್ಯನೆ ಎಂದರೇನು?
ಭಕ್ತಿ ರಸಾಮೃತಕ್ಕೆ ಧನ್ಯಳಾದೆ.
@ಪ್ರೇಮ್@ೃ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ