ಮತ್ತಿನ ಮುತ್ತಿನೋಲೆಗೆ...
ಮುದ್ದು ಮುಖದ ಪೆದ್ದು ಮನದ ಓ ಚೆಲುವೇ!
ಮತ್ತಿನ ಮುತ್ತಿನೋಲೆ ಕಿವಿಯಲೆಂದು ಗೆಲುವೇ!!
ನಲಿವ ಬಾಳಿಗೆ ರಾಗ ಹಾಡುತಲಿ
ಅಂದದಿ ನಿತ್ಯ ನೀ ಕುಣಿವೆ,
ತಕದಿಮಿ ಇಲ್ಲದೆ ಮೇಲಕು ಕೆಳಕೂ
ಸದಾ ನೀನು ತಕ ಥೈ ನಲಿವೆ!
ಜುಮುಕಿಯ ಹಾಕಿದ ಕಿವಿಯಂದವನು
ಹೆಚ್ಚುತ ನೀ ಮೆರೆದಿರುವೆ!
ಮುತ್ತಿನ ಓಲೆಯ ಮತ್ತನು ಹೆಚ್ಚಿಸಿ
ಗೆಳತಿಯ ಕಣ್ಣು ಕುಕ್ಕಿರುವೆ!!
ವಸಂತ ಕಾಲದ ಎಳೆ ಮಾವಿನ ಮಿಡಿಯ
ನೆನಪನು ಹೊತ್ತು ತಂದಿರುವೆ,
ಬಿಳಿಯ ಬಣ್ಣದ ಬಂಗಾರ ಕುಸುಮ ನೀ
ನಲ್ಲೆಗೆ ಸೊಗಸು ನೀಡಿರುವೆ!!
ಮೈಮನ ಪುಳಕಿತ ನಿನ್ನನು ತೊಟ್ಟು,
ಮಂಗಳೆ ಮಲ್ಲಿಗೆಯಂತಿರುವೆ,,!
ಗುಡಿಸಲಿನೊಳಗೂ ಬಂಗಲೆಯೊಳಗೂ
ಕಿವಿಯಲಿ ನಿತ್ಯ ರಂಜಿಸುವೆ!
@ಪ್ರೇಮ್@
13.04.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ