ಪದಗಳ ಹುಡುಕು
ಬಳಕೆಗೆ ನೂರಾರು ಪದಗಳು ಉಂಟು!
ಇರಬೇಕು ಕವಿಗೆ ಅವುಗಳ ನಂಟು!
ಮನೆ ಮಾರಿಗೆ ಬಳಸಲು ಪದಗಳ ಹುಡುಕು,
ಸಿಗದಿರೆ ಕೋಶವು ಕೊಡುವುದು ಮೆಲುಕು!
ಕರತಲಾಮಲಕದಿ ಬಳಸುತ ನಡೆಯಲು,
ಕವನದ ಸಾಲವು ಅಂದವು ಓದಲು.
ಮೌನದಿ ಕುಳಿತು ಯೋಚಿಸಿ ಬರೆದೊಡೆ,
ಪದಗಳ ದಂಡದು ಕುಣಿಯುತ ಬಂದೊಡೆ//
ಪುಸ್ತಕ ಬಳಸಿ ಮಸ್ತಕ ಹುಡುಕಲಿ,
ನವೀನ ಪದಗಳು ಬಾಗಿಲ ತಟ್ಟಲಿ!
ಭಾಷೆಯ ನುಡಿಯು ಅನುದಿನ ಬೆಳೆಯಲಿ,
ನವೀನ ನುಡಿಗಳು ಕನ್ನಡ ಬೆಳಗಲಿ!
ಕನ್ನಡ ಭಾಷೆಯ ಸಂಪತ್ತು ಮೆರೆಯಲಿ,
ನಾಡಿನ ಕೀರ್ತಿಯು ಜಗದಲಿ ಹಬ್ಬಲಿ!
ಕ ಕಾ ಕಿ ಕೀ ಕಲಿತವ ಜಾಣ!
ಕನ್ನಡವಾಗಲಿ ನಿನ್ನಯ ಪ್ರಾಣ!!
@ಪ್ರೇಮ್@
11.04.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ