ಇಳೆಗೆ....
ಧರೆ ನೀನೇಕೆ ಸಲಿಗೆ ಕೊಟ್ಟೆ ಮನುಜಗೆ?
ಇಳೆ ಬಸಿದು ಬಿಟ್ಟನು ನಿನ್ನ ಹೊಟ್ಟೆ ಸಹಜವಾಗೇ...
ನಗೆಗಡಲಲಿ ಮಿಂದು
ನೀರು ಮಲಿನಗೊಳಿಸುತಿಹನು..
ಬೇಕಾಬಿಟ್ಟಿ ರುಚಿಕರ ಆಹಾರ ತಿಂದು,
ಪ್ಲಾಸ್ಟಿಕನು ನಿನ್ನೆದೆಗೆ ಎಸೆಯುತಿಹನು..
ಹಸಿರ ಗಿಡಮರಗಳ ಬೇರುಸಹಿತ ಉರುಳಿಸಿ,
ಕೈಗಾರಿಕೆಗಳ ನಿರ್ಮಿಸಿ ಕೆಡಿಸುತಿಹನು..
ಮನೆಯ ಮೇಲೆ ಮನೆಯ ಕಟ್ಟುತ,
ಇದ್ದ ಜಾಗವೆಲ್ಲ ನುಂಗಿ ಹಾಕಿಹನು!!
ಮುತ್ತಿನಂಥ ತಿಳಿನೀರ ಸರೋವರವ ಬತ್ತಿಸಿ,
ಹೊಗೆ,ನೊರೆಯುಗುಳುವ ಕೆರೆಗಳ ನಿರ್ಮಿಸಿಹನು..
ಮಣ್ಣಿಗೆ ರಾಸಾಯನಿಕಗಳ ಸುರಿಯುತ
ನೆಲ-ಮುಗಿಲನು ಮನುಜನು ಬಂಜರು ಮಾಡಿಹನು..
ಸದರವು ನಿನ್ನಯ ಜಾಸ್ತಿಯಾಗಿಹುದು..
ಅಲ್ಲಲ್ಲಿ ಗುಂಡಿಯ ತೋಡುತಲಿಹನು..
ತೋಟಕೆ ಗೊಬ್ಬರ, ಕೀಟಕೆ ಮದ್ದನು ಸುರಿಯುತ
ತನ್ನ ಗೆಳೆಯರನು ತಾನೆ ಕೊಲುತಿಹನು!!
ತಾನು ಬೆಳೆದುದ ತಾನೆ ತಿನ್ನಲಾರದೆ,
ಬೇರೆಯ ದೇಶದ ಆಮದು ತರಿಸುತಿಹನು!!
ಕೃತಕ ಆಹಾರವ ತಿನ್ನುತಲಿದ್ದು,
ಬಂದ ಹೊಸ ಹೊಸ ರೋಗಕೆ,
ಔಷಧಿಯ ಹುಡುಕಾಟದಲಿಹನು!
ಅದಕ್ಕಾಗಿ ಇಲಿ, ಮೊಲ,ಮಂಗ,ಕುದುರೆ, ಹಂದಿಗಳ ಬಲಿಕೊಡುತಿಹನು..
ಸಿಕ್ಕಾಗ ತಾನೇ ಗೆದ್ದಂತೆ ಕುಣಿವನು..!!
ತನ್ನಕಾಲ ಬುಡಕೆ ತಾನೇ ಕೊಡಲಿ ಹಾಕಿಕೊಳುತಾ
ಬಾಳನ್ನು ಬರಡಾಗಿಸಿಕೊಂಡು
ಮಕ್ಕಳ ಬಾಳಿಗೂ ಕೊಳ್ಳಿ ಇಡುತಿಹನು...
@ಪ್ರೇಮ್@
30.03.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ