ಶುಕ್ರವಾರ, ಏಪ್ರಿಲ್ 12, 2019

914. ಜೀವದ ಗೆಳೆಯ

ಜೀವದ ಗೆಳೆಯ

ಜೀವನದ ಸಂತಸದ ಉದಯವಾಗಲೆಂದು
ನೀ ಬಂದೆ ಬಾಳಲ್ಲಿ ಇರಲು ಎಂದೆಂದೂ...

ನಲ್ಲ ನಿನ್ನಯ ಪ್ರೀತಿ ಇರಲಿ ಹೀಗೆಯೇ ಮುಂದೂ..
ನಿನ್ನೊಲುಮೆಯ ಧಾರೆ ಹರಿಸೆಂದೆಂದೂ..
ನಿನಗಿದೋ ಹುಟ್ಟುಹಬ್ಬದ  ಶುಭಾಶಯಗಳ ಸರಮಾಲೆ ಇಂದು..

ಬರಲಿ ಆನಂದದ ಕ್ಷಣಗಳು ಪ್ರತಿ ದಿನ
ಸಿಗದಿರಲಿ ನೋವಿನ ಅನುಭವ ಪ್ರತಿ ಕ್ಷಣ..
ಕಷ್ಟಗಳು ದೂರಾಗಿ ಹಗಲ ಬೆಳಕು ಬರಲಿ..
ಸುಖದ ಸಾಗರವು ನಿನ್ನ ಜೀವನದಿ ಉಕ್ಕಿ ಬರಲಿ..

ದಿನಗಳು ಕಳೆಯಲಿ ಸಂತಸದಿ ಜೊತೆಯಾಗಿ..
ಮನಗಳು ಬಾಳಲಿ ಹರುಷದಿ ಒಂದಾಗಿ..
ಜೀವನ ಜೋಕಾಲಿ ಸಾಗಲಿ ಹರುಷದಿ.
ನವ ಬಾಳು ನವನೀತದಂತೆ ಸವಿಯಲಿ ಸಂತಸದಿ..

ನಿನಗಿದೋ ಶುಭ ಹಾರೈಕೆಗಳು
ಜನುಮ ದಿನದ ಸಂಭ್ರಮದಿ
ಬೆಳಗಲಿ ಸುಗಮವಾಗಿ ಬಾಳು
ನಿತ್ಯ ನಲಿಯುತ ವಿಜಯದಿ..
@ಪ್ರೇಮ್@
12.04.2019

ನನ್ನ ಜೀವನ ಸಂಗಾತಿ ಉದಯ್ ಹುಟ್ಟುಹಬ್ಬ ಇಂದು. ಅವರಿಗಾಗಿ ಈ ಸಾಲುಗಳು..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ