ಮಂಗಳವಾರ, ಏಪ್ರಿಲ್ 9, 2019

911. ತಲ್ಲಣ

ತಲ್ಲಣ

ಇಳೆಯ ಕಂಪನ ಮನದಿ ತಲ್ಲಣ
ತರದೆ ಬಾಳಲಿ ನೋವ ಸಿಂಚನ?
ಮನದಿ ನಡುಕ ಇಳೆಯ ಸಿಡುಕ
ತನನ ಜಗದ ಜೀವಿ ಕಣಕಣ//

ಬುವಿಯು ಬಿರಿಯಲು ಮನದಿ ಭಯವು
ಬದುಕ ನುಂಗಲು ತವಕ ಬಹಳವು!
ತಾಯ ಒಡಲಲೆ ಬೆಂಕಿಯುಂಡೆಯು
ಕುದಿವ ಮಾತೆಯ ಉದರದೊಲವು//

ಹೃದಯ ಢವಢವ ಒಡೆವ ಕಾವು!
ಮನದಿ ಸಂಕಟ ನಿತ್ಯ ನೋವು!!
ಗೆಲುವ ಮರೆವ ಜೀವ ಸಾವು!
ಮೌನದಲೆ ಕಳೆವ ಸಕಲ ನೋವು//

ಜೀವ ಭಾವದ ಆರ್ದ್ರ ನರ್ತನ
ಕೆಲಸ ಇಹುದು ಸೃಷ್ಠಿ ಕರ್ತನ!
ಧರೆಯ ನಡುಗಿಸೆ ಕಡಲ ಉಕ್ಕಿಸೆ!
ಸಕಲ ಸಾಗರ ನೀರ ಉಕ್ಕಿಸೆ..//

ಇಳೆಯ ಕಾರ್ಯಕೆ ಎಂದೂ ಧನ್ಯನು
ಕೊಳೆಯ ತೊಲಗಿಸೆ ಸದಾ ಮಾನ್ಯನು
ತಾಳ್ಮೆ ಮಿತಿಯಲಿ ತಾಯಿ ನಡೆಯಲು
ಏರಿ ಬಿಸಿಯು ಮಾತೆ ನಡುಗಲು//
@ಪ್ರೇಮ್@
05.04.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ