ಸತ್ಯಸಂಧತೆ
ಮಾವಿನ ತಳಿರದು ಹಸಿರಾಗಿರುವಂತೆ
ಮಾತಲು ಬೇಕು ಹಸಿರಿನ ಛಾಯೆ!
ಅಮೃತ ಕಲಶದ ಹೆಸರಿದ್ದೊಡೆಯೇನು,
ಅಮೃತವದರಲಿ ಸುರಿದೊಡೆ ತಾನೇ ಮಾಯೆ!!
ಬಾಳಲಿ ಬೇಡವೆ ಸತ್ಯದ ಕಾವು,
ನೋವಲಿ ನಗುವು, ನಗುವಲಿ ಅಳುವೂ!
ಬಯಸದೆ ಬರುವನು ಸಾವಿನ ನೆಂಟ!
ಎಲ್ಲರ ಒಳಗೂ ಇಹನೊಬ್ಬ ತುಂಟ!!
ಊರಿಗೆ, ದೇಶಕೆ ಸುಳ್ಳನು ಅರುಹಿಯು,
ನಿನ್ನ ಹೃದಯದ ಜೊತೆ ಬಚ್ಚಿಡಲಾರೆ!
ಮೂಟೆಯ ಕಟ್ಟಿ ,ಸುಳ್ಳನು ಎಸೆಯೋ,
ಸತ್ಯವ ಹೇಳುತ ಬಾಳಲಿ ಬೆಳೆಯೋ...
ಕುರುಡನಿಗೂ ಕಣ್ಣಾದುದು ಸತ್ಯ!
ಕಿವುಡನಿಗೂ ಕಿವಿಯಾದುದು ಸತ್ಯ!
ಮಿಥ್ಯದ ಬಾಗಿಲ ತೆರೆಯಲೇ ಬೇಡ!
ಅಲ್ಲೇ ಊರಾಚೆ ಅದು ಕೊನೆಯಾಗಲಿ ನೋಡಾ!!
@ಪ್ರೇಮ್@
26.04.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ