ಮುಂದೆ ಸಾಗೋಣ
ಜಡಿಮಳೆ ಬಿರುಗಾಳಿಯೆ ಬರಲಿ
ಒಟ್ಟಾಗಿ ಮುಂದಕೆ ಸಾಗೋಣ..
ನಾಡಿಗೆ ಅನ್ನವನುಣಿಸುವ ಕಾಯಕ
ಮಾಡುವ ನಾವೆಲ್ಲ ನಡೆಯೋಣ...
ಭೂಮಿಯ ನಂಬಿ ಬದುಕುವ ನಾವು
ನಾಟಿಯ ಕಾರ್ಯವ ಮುಗಿಸೋಣ!
ಮಳೆ ಚಳಿಯೆಂದು ಮನೆಯೊಳು ಕುಳಿತರೆ
ಮಕ್ಕಳ ಹೊಟ್ಟೆಗೇನು ಕೊಡೋಣ?
ಬನ್ನಿರಿ ಅಕ್ಕ, ಬನ್ನಿರಿ ಅಣ್ಣ
ಗೊರಬನು ತಲೆಗೆ ಏರಿಸಿ ಬನ್ನಿ!
ಕಾಡಿನ ದಾರಿಯ ಮರೆಯುತ ನೀವು
ರೈತರ ಜೊತೆಗೆ ಸಾಗಲು ಬನ್ನಿ...
ಮೊದಲ ಮಳೆಯದು ಪುಳಕವು ನಮಗೆ!
ನವೀನ ಗೊರಬುಗಳು ನಮ್ಮಯ ಕೆಲಸಕೆ!
ವರ್ಷವು ಬರದಿರೆ ಆರಾಮ ಅದಕೆ,
ಗದ್ದೆಯ ಬದಿಯಲಿ ಮಲಗಿ ನಿದ್ರಿಸೋಕೆ!!
ಸಾಗುತ ನಮ್ಮಯ ಕಾರ್ಯ ಮಾಡೋಣ,
ನಾಡಿಗೆ ಅನ್ನವ ನಿತ್ಯ ನೀಡೋಣ!
ಧರೆಯನು ನೆನೆದು ಪೂಜೆ ಮಾಡೋಣ!
ಅನ್ನದ ಕಾಳಿಗೆ ನಿತ್ಯ ಬೇಡೋಣ!!
@ಪ್ರೇಮ್@
08.04.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ