ಅವಸರವೇಕೆ?
ಅವಸರವೇಕೆ ಅವನಿಯ ಅರಳೆಯೆ
ಅನವರತವು ನಾ ಅನ್ಯರಿಗಿಲ್ಲ...
ಅನುಭೂತಿಯ ಅಡಗಿಸದೆ
ಅರಸುತ ಬಾರೇ..ಅರಿವನು ತೋರೆನಗೆ .!//
ಅರಿತವ ನಾನೇ ಅಂಜಿಕೆ ಏಕೇ?
ಆರೇಳು ಜನುಮದ ಅರಸಿ!!
ಅಂಟಿಸಿಕೊಳ್ಳುತ ಮೈಮನವೆಲ್ಲ
ಆರಾಧಿಸುವೆನಲ್ಲ ನಾ ಹರಸಿ...//
ಅದರಕೆ ಅದರವು ಅಂದದ ಚೆಲುವು..
ಅರಗಿಣಿ ನೀನಿರೆ ಅಕ್ಷರಶಃ ನಾ ಅರಸ!
ಅಪ್ಸರೆ ನನ್ನಯ ಅಂತರಂಗದಿ ನೀನೇ..
ಅಮರವು ನಮ್ಮಯ ಪ್ರೀತಿಯ ಅಮಲು...//
ಅರಿವದು ಅಮರಲು ಅಂಕುರ ನೀನೇ..
ಅಡ್ಡಾಡಲು ಅಂತರ ಬೇಡವೆ ಬೇಡ..
ಅಕ್ಕರೆಯಿಂದಲಿ ಅರಳಲಿ ಬಾಳು..
ಆರದಿರಲಿ ಪ್ರೀತಿಯ ದೀಪಗಳು..
@ಪ್ರೇಮ್@
02.04.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ