ಪ್ರಕೃತಿಗೆ ಸಲಹೆ
ನೀನೀಗ ತಾಂತ್ರಿಕ ಯುಗಕೆ ಬದಲಾಗಬೇಕಿದೆ ತಾಯೆ!
ಕೊಚ್ಚು,ಕತ್ತರಿಸಿ ಬಿಸಾಕು ತೋರುತ್ಕ ಆ ಶಕ್ತಿ ಮಾಯೆ!
ಮರಕಡಿದವನ ತಲೆಕಡಿದು ಬಿಡು!
ಬೀಳಲಿ ಅಲ್ಲಿ ರಕ್ತದ ಮಡು!
ರೆಂಬೆ-ಕೊಂಬೆಗಳ ಕಡಿದವನ ಕೈಕಾಲು ಕಡಿ!
ಅರಿವಾಗಲಿ ಗಿಡ ಮರಗಳ ನೋವಿನ ಕಿಡಿ!
ಬತ್ತಿ ಹೋಗಿದೆ ನಿನ್ನೊಡಲ ಜಲಧಾರೆ!
ಬಗೆದುಬಿಡು ಅವನೆದೆಯ ರುದಿರಧಾರೆ!
ಉಣ್ಣಲಿ ತಾ ಮಾಡಿದ ಕಹಿ ತಾನೇ ನಿತ್ಯ!!
ಸಿಗಲಿ ಬರಡು ಬಾಳು ಎಲ್ಲವುಗಳ ನಾಶಗೊಳಿಸಿ ನಿತ್ಯ!
ನಿನ್ನ ನೀನುಳಿಸಿಕೊಳ್ಳಲು ನೀನಾಗಬೇಕಿದೆ ರಣಚಂಡಿ!
ಇಲ್ಲವಾದರೆ ಅಳಿವುದು ಸರ್ವ ಜೀವಿಗಳ ಬಾಳ ಬಂಡಿ!
ಮುಕ್ತಿ ಕೊಡು ನಿನ್ನಕೈಕಾಲು ಕಟ್ಟಿಬಿಟ್ಟ ಕೆಟ್ಟ ಕಂದರ ಅಟ್ಟಹಾಸಕೆ
ಕಕ್ಕಿಬಿಡು ನಿನ್ನ ನೋವ ಪರಮ ಜ್ವಾಲೆಯ ಸಹಿಸಲಾಗದಕೆ//
ಅರಿತುಕೊಳ್ಳಲಿ ನರಮಾನವ ತನ್ನ ತಪ್ಪಿನ ಹಂದರವ!
ಬೆಳೆಸಲಿ ಇನ್ನಾದರೂ ಗಿಡ ಮರಗಳ ಸ್ವಚ್ಚ ಪರಿಸರವ!
@ಪ್ರೇಮ್@
09.04.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ