ಭಾನುವಾರ, ಏಪ್ರಿಲ್ 7, 2019

901. ಬತ್ತದಿರಲಿ ಬಾಳು

ಬತ್ತದಿರಲಿ ಬಾಳು

ಈಗಿದೋ ಒಡಲು ಬತ್ತಿ ಹೋಗಿಹುದು
ಬತ್ತದ ಗದ್ದೆಯೂ ಇಲ್ಲ
ಬತ್ತಿದ ಒಡಲೇ ಎಲ್ಲ!
ಬತ್ತಿಗೆ ಬೇಕಾದ ಎಣ್ಣೆ ಸಿಗುತ್ತಿಲ್ಲ!
ಬತ್ತಿಯ ಹುಡುಕುತ ಎಣ್ಣೆಗೆ ಸಾಕಾಗಿದೆ!
ಎಣ್ಣೆ ಇಲ್ಲದೆ ಬತ್ತಿ ಉರಿಯದಾಗಿದೆ!
ಬರ ಬಂದ ಬರಗಾಲದ ಬಯಲಲ್ಲಿ ಬಕ ಪಕ್ಷಿಯನೆಲ್ಲಿ ಕಾಣುವುದು?
ಅತ್ತತ್ತು ಬತ್ತಿ ಹೋಗಿಲ್ಲವೇ ಕಣ್ಣೀರು!
ಜೀವನದ ಜಂಜಡದಲಿ ಬತ್ತಿ ಎಣ್ಣೆಯ ಪ್ರೀತಿ ಬದುಕಾಗಲಿ...
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ